ಉಪ್ಪಳ: ಎಡ ಸರ್ಕಾರ ಜನರನ್ನು ವಂಚಿಸುವ ನೀತಿಯನ್ನು ವಿರೋಧಿಸಿ ಯುಡಿಎಫ್ ರಾಜ್ಯಾದ್ಯಂತ ಕ್ಷೇತ್ರ ಮಟ್ಟದಲ್ಲಿ ಆಯೋಜಿಸಿರುವ ಜನ ಸಮಾವೇಶದ ಭಾಗವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸಮಾವೇಶ ಡಿ.27ರಂದು ಕುಂಬಳೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಳದಲ್ಲಿ ಯುಡಿಎಫ್ ಸಂಘಟನಾ ಸಮಿತಿ ಸಭೆ ನಡೆಯಿತು.
ಅಸೀಸ್ ಮರಿಕಕೆ ಅಧ್ಯಕ್ಷತೆ ವಹಿಸಿದ್ದರು. ಯೂಸುಫ್, ಎ.ಕೆ. ಆರಿಫ್, ಕರಿವೆಳ್ಳೂರು ವಿಜಯನ್, ಲೋಕನಾಥ ಶೆಟ್ಟಿ, ಡಿಎಂಕೆ ಮುಹಮ್ಮದ್, ಯುಕೆ ಸೈಪುಲ್ಲಾ ತಂಙಳ್, ಪಿಎಚ್ ಅಬ್ದುಲ್ ಹಮೀದ್, ಪಿಬಿ ಅಬೂಬಕರ್, ಮಜಲ್ ಮುಹಮ್ಮದ್, ಪಿಎಂ ಅಬ್ದುಲ್ ಕಾದರ್ ಹಾಜಿ, ಅಬ್ದುಲ್ಲ, ಅಂದುಂಞÂ ಹಾಜಿ ಚಿಪ್ಪಾರ್, ಸಿದ್ದೀಕ್ ಒಳಮೊಗರು, ಖಾಲಿದ್ ದುರ್ಗಿಪಳ್ಳ, ಸಿದ್ದೀಕ್ ಒಳಮೊಗರು, ಬಿ.ಎಂ.ಮುಸ್ತಫಾ, ಪಿ.ಕೆ.ಮುಹಮ್ಮದ್ ಹನೀಫ ಆಯಿಷತ್ ತಾಹಿರಾ, ಮುಮ್ತಾಝ್ ಸಮೀರ ಮಾತನಾಡಿದರು.
ಸಂಘಟನಾ ಸಮಿತಿಯ ಪದಾಧಿಕಾರಿಗಳನ್ನು ಆರಿಸಲಾಯಿತು. ಶಾಸಕ ಎಕೆಎಂ ಅಶ್ರಫ್ (ಮುಖ್ಯ ಪೋಷಕ), ಎಂ.ಬಿ.ಯೂಸುಫ್, ಟಿ.ಎ.ಮೂಸಾ, ಎಂ.ಅಬ್ಬಾಸ್, ನ್ಯಾಯವಾದಿ.ಸುಬ್ಬಯ್ಯ ರೈ, ಜೆ.ಎಸ್.ಸೋಮಶೇಖರ್, ಸುಂದರ ಆರಿಕ್ಕಾಡಿ (ರಕ್ಷಕರು), ಅಜೀಜ್ ಮರಿಕೆ (ಅಧ್ಯಕ್ಷರು), ಲೋಕನಾಥ ಶೆಟ್ಟಿ, ಕೆ ಸೋಮಪ್ಪ (ಕಾರ್ಯಾಧ್ಯಕ್ಷರು), ಕೆ ಮಂಜುನಾಥ ಆಳ್ವ (ಸಂಚಾಲಕ), ಎ.ಕೆ.ಆರಿಫ್ (ಕಾರ್ಯದರ್ಶಿ), ಯುಕೆ ಸೈಪುಲ್ಲ ತಂಙಳ್ (ಖಜಾಂಚಿ)ಎಂಬಂತೆ ಆರಿಸಲಾಯಿತು.