ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ ವರ್ಷಂಪ್ರತಿ ಆಚರಿಸುವ ‘ತಿರುವಾದಿರ ಮಹೋತ್ಸವ’ವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಡಿ. 27 ರಂದು ನಡೆಯಲಿದೆ. ಇದರ ಅಂಗವಾಗಿ ದೇವರಿಗೆ ಗಣಪತಿ ಹೋಮ, ಉಷಃಪೂಜೆ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಧ್ಯಾದೀಪಾರಾಧನೆ, ಶ್ರೀಭೂತ ಬಲಿ, ಭಜನಾ ಸೇವೆ, ಮಹಾಪೂಜೆ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.