ಕಾಸರಗೋಡು: ಕೇರಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ನ್ಯಾಯದೇಗುಲ ಎಂದೇ ಖ್ಯಾತಿ ಪಡೆದಿರುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಕಳಿಯಾಟ ಮಹೋತ್ಸವವು ಡಿಸೆಂಬರ್ 29 ರಂದು ಪ್ರಾರಂಭವಾಗಿ ಜನವರಿ 2 ರಂದು ಮುಕ್ತಾಯಗೊಳ್ಳಲಿದೆ ಎಂದು ಪೆÇ್ರ.ಮಾಧವನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಳಿಯಾರ್ ಗ್ರಾಮ ಪಂಚಾಯಿತಿಯ ಕಾನತ್ತೂರಿನಲ್ಲಿ ನೆಲೆಸಿರುವ ಶ್ರೀ ನಾಲ್ವರ್ ದೈವಗಳ ದರ್ಶನಕ್ಕಾಗಿ ಸಾವಿರಾರು ಮಂದಿ ಕಾನತ್ತೂರಿಗೆ ಆಗಮಿಸುತ್ತಿದ್ದಾರೆ. ಇಲ್ಲಿಗೆ ಆಗಮಿಸುತ್ತಾರೆ. ತುಳುನಾಡಿನಿಂದ ಆಗಮಿಸಿದ ಪೂಮಾಣಿ-ಕಿನ್ನಿಮಾಣಿ (ಇಳಯೋರ್, ಮುತ್ತೋರ್) ಶೈವ ವೈಷ್ಣವ ಶಕ್ತಿಯಾದ ಚಾಮುಂಡಿ, ರಕ್ತೇಶ್ವರಿ, ದೇವಾನುದೇವತೆಗಳ ರೂಪದಲ್ಲಿ ಬಂದ ವಿಷ್ಣುಮೂರ್ತಿ ಇಲ್ಲಿ ನಾಲ್ಕು ದೇವರುಗಳು ಮತ್ತು ಇರುವೆರ್ ದೈವಗಳ ನರ್ತನ ಸೇವೆ ಐದು ದಿವಸಗಳ ಕಾಲ ನಡೆಯುತ್ತದೆ. 8 ಶತಮಾನಗಳಿಗಿಂತಲೂ ಹೆಚ್ಚು ಕಾಳದಿಂದ ಇಲ್ಲಿ ಆರಾಧನೆ ನಡೆದುಬರುತ್ತಿದೆ. ಜಾತಿ, ಧರ್ಮ, ಪುರುಷರು ಮತ್ತು ಮಹಿಳೆಯರು ಭೇದವಿಲ್ಲದೆ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಡಿ. 29ರಂದು ದೇಗುಲದ ಮೂಲಸ್ಥಾನದಿಂದ ಭಂಡಾರದ ಆಗಮನವಾಗಿ ಕಳಿಯಾಟ ಆರಂಭಗೊಳ್ಳಲಿದೆ. 30 ಬೆಳಗ್ಗೆ 4ರಿಂದ ಚಾಮುಂಡಿ ದೇವತೆ, 8.30ಕ್ಕೆ ಪಂಜುರ್ಲಿ(ಉಗ್ರಮೂರ್ತಿ) ಸಂಜೆ 6ರಿಂದ ಮೂತೋರ್ ದೈವ, ಬಂಬೇರಿಯನ್ ಮಾಣಿಚ್ಚಿ ದೈವ ಕೋಲ ನಡೆಯುವುದು. 31ರಂದು ಬೆಳಗ್ಗೆ ಚಾಮುಂಡಿ ದೈವ, 7.30ಕ್ಕೆ ಕಂಡಕಲಯ ದ್ಯವ 9.30ರಿಂದ ಪಂಜುರ್ಲಿ ದೈವ ಕೋಲ ನಡೆಯುವುದು. ಜನವರಿ 1ರಂದು ಬೆಳಗ್ಗೆ ರಕ್ತೇಶ್ವರಿ ದೈವ ಕೋಲ, ವಿಷ್ಣುಮೂರ್ತಿ ದೈವ ಕೋಲ, ನಂತರ ಪ್ರೇತ ವಿಮೋಚನೆ ನಡೆಯುವುದು. ಜನವರಿ 2ರಂದು ಬೆಳಗ್ಗೆ 9ಕ್ಕೆ ರಕ್ಷೇಶ್ವರಿ ದೇವಿಯ ದರ್ಶನ, ನಂತರ ತುಲಾಭಾರ, ವಿಷ್ಣುಮೂರ್ತಿ ದೈವ ನರ್ತನ ಸೇವೆ, ಪ್ರೇತ ವಿಮೋಚನೆ ನಡೆಯುವುದು. ಜ. 3ರಂದು ಬೆಳಗ್ಗೆ ಭಂಡಾರದ ನಿರ್ಗಮನದೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಕರುಣಾಕರನ್ ನಾಯರ್, ಕೆ.ಪಿ.ಜಯರಾಜನ್ ನಾಯರ್, ಪಿ.ವೇಣುಗೋಪಾಲನ್ ನಾಯರ್ ಕೂಡಲ, ಸಿ.ರಾಮಕೃಷ್ಣನ್ ಉಪಸ್ಥಿತರಿದ್ದರು.