ಕಾಸರಗೋಡು: ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ 30ನೇ ವಾರ್ಷಿಕೋತ್ಸವ ಕಾಸರಗೋಡು ಲಲಿತ ಕಲಾ ಸದನ ಸಭಾಂಗಣದಲ್ಲಿ ಜರುಗಿತು. ಶಾಸಕ ಎನ್. ಎ. ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಗುರುದತ್ ಪೈ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ನಗರ ಠಾಣೆ ಇನ್ಸ್‍ಪೆಕ್ಟರ್ ಅಜಿತ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ಕಾಸರಗೋಡು ಶಿಕ್ಷಣ ಮಿಷನ್ ಅಧ್ಯಕ್ಷ ಡಾ.ಬಾಲಗೋಪಾಲನ್ ನಾಯರ್, ಪಿಟಿಎ ಉಪಾಧ್ಯಕ್ಷ ಮಹಮ್ಮದ್ ಹನೀಫ, ಶೈಕ್ಷಣಿಕ ಸಲಹೆಗಾರ ವೆಂಕಟರಮಣ ಹೊಳ್ಳ ಉಪಸ್ಥಿತರಿದ್ದರು. ಜಯಂತಿ ಸ್ವಾಗತಿಸಿದರು. ಪಿಟಿಎ ಕೋಶಾಧಿಕಾರಿ ಎನ್. ಬಿ. ಪ್ರಕಾಶನ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಮದ ಕಾರ್ಯಕ್ರಮ ವೈವಿಧ್ಯ ನಡೆಯಿತು.