ಕಾಸರಗೋಡು: ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆದ ನವಕೇರಳ ಸಮಾವೇಶದಲ್ಲಿ ಲಭಿಸಿದ ಎಲ್ಲ ಅರ್ಜಿಗಳನ್ನು ಡಿ. 30ರೊಳಗೆ ಅವಲೋಕನ ನಡೆಸಲಾಗುವುದು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಶೀಘ್ರ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ಅರ್ಜಿಗಳ ವಿಲೇವಾರಿ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 5404 ಅರ್ಜಿಗಳು:
ಜಿಲ್ಲೆಯಲ್ಲಿ 14704 ಅರ್ಜಿಗಳು ಲಭಿಸಿದ್ದು, ಇವುಗಳಲ್ಲಿ 5404 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 3326 ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿ 5094 ಅರ್ಜಿಗಳು ಪರಿಗಣನೆಯಲ್ಲಿವೆ. 156 ಅಪೂರ್ಣ ಮತ್ತು ಅಸ್ಪಷ್ಟ ದೂರುಗಳ ಬಗ್ಗೆ ತಟಸ್ಥ ನಿಲುವು ತಳೆಯಲಾಗಿದೆ. ಮಂಜೇಶ್ವರ ಕ್ಷೇತ್ರದಲ್ಲಿ ಬಂದ 2005 ಅರ್ಜಿಗಳಲ್ಲಿ 746 ವಿಲೇವಾರಿಯಾಗಿದೆ. 36 ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ವಿವಿಧ ಇಲಾಖೆಗಳಿಂದ 752 ಅರ್ಜಿಗಳು ಪರಿಗಣನೆಯಲ್ಲಿವೆ. 28 ಅಸ್ಪಷ್ಟ ಅರ್ಜಿಗಳು ಲಭಿಸಿದೆ.
ಕಾಸರಗೋಡು ಕ್ಷೇತ್ರದಲ್ಲಿ ಲಭಿಸಿದ 3476 ಅರ್ಜಿಗಳಲ್ಲಿ 1217 ವಿಲೇವಾರಿಯಾಗಿದೆ. 650 ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ವಿವಿಧ ಇಲಾಖೆಗಳಿಂದ 1485 ಅರ್ಜಿಗಳು ಪರಿಗಣನೆಯಲ್ಲಿವೆ. 26 ಅಸ್ಪಷ್ಟ ಅರ್ಜಿಗಳನ್ನು ಸ್ಥಗಿತಗೊಳಿಸಲಾಗಿದೆ. ಉದುಮ ಕ್ಷೇತ್ರದಲ್ಲಿ ಬಂದಿದ್ದ 3744 ಅರ್ಜಿಗಳ ಪೈಕಿ 1364 ವಿಲೇವಾರಿ ಮಾಡಲಾಗಿದೆ. 850 ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ವಿವಿಧ ಇಲಾಖೆಗಳಿಂದ 1267 ಅರ್ಜಿಗಳು ಪರಿಗಣನೆಯಲ್ಲಿವೆ. 17 ಅಪೂರ್ಣ ಅರ್ಜಿಗಳನ್ನು ಸಥಗಿತಗೊಳಿಸಲಾಗಿದೆ.
ಕಾಞಂಗಾಡು ಕ್ಷೇತ್ರದಲ್ಲಿ ಸ್ವೀಕೃತವಾದ 2889 ಅರ್ಜಿಗಳಲ್ಲಿ 1042 ವಿಲೇವಾರಿ ಮಾಡಲಾಗಿದೆ. 700 ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ವಿವಿಧ ಇಲಾಖೆಗಳಿಂದ 979 ಅರ್ಜಿಗಳು ಪರಿಗಣನೆಯಲ್ಲಿವೆ. 45 ಅಸ್ಪಷ್ಟ ಅರ್ಜಿಗಳನ್ನು ಸ್ಥಗಿತಗೊಳಿಸಲಾಗಿದೆ. ತ್ರಿಕರಿಪುರ ಕ್ಷೇತ್ರದಲ್ಲಿ ಬಂದಿದ್ದ 2590 ಅರ್ಜಿಗಳ ಪೈಕಿ 1036 ವಿಲೇವಾರಿ ಮಾಡಲಾಗಿದೆ. 730 ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ವಿವಿಧ ಇಲಾಖೆಗಳಿಂದ 610 ಅರ್ಜಿಗಳು ಪರಿಗಣನೆಯಲ್ಲಿವೆ. 40 ಅಸ್ಪಷ್ಟ ಅರ್ಜಿಗಳ ಬಗ್ಗೆ ತಟಸ್ಥ ನಿಲುವು ತಳೆಯಲಾಗಿದೆ.