ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು(ರಿ), ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ 'ಸಾಹಿತ್ಯ ವಲ್ಲರಿ'ಡಿ. 31ರಂದು ಬೆಳಗ್ಗೆ 10ಕ್ಕೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿರುವುದು.
ಕಾರ್ಯಕ್ರಮದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ, ಅಜ್ಜಿಕತೆ ಮತ್ತು ಕಾವ್ಯಗಾಯನ ನಡೆಯುವುದು. ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಕುಂತಳಾ ಆರ್. ಕಿಣಿ ಸಮಾರಂಭ ಉದ್ಘಾಟಿಸುವರು. ನಿವೃತ್ತ ಪ್ರಾಧ್ಯಾಪಕಿ, ನಾರಿಚಿನ್ನಾರಿ ಉಪಾಧ್ಯಕ್ಷೆ ಡಾ. ಯು. ಮಹೇಶ್ವರೀ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಹಿರಿಯ ಸಾಹಿತಿ ಪ್ರಸನ್ನ ವಿ. ಚೆಕ್ಕೆಮನೆ ಅವರನ್ನು ಗೌರವಿಸಲಾಗುವುದು. ಈ ಸಂದರ್ಭ ನಡೆಯುವ ವಿಚಾರ ಸಂಕಿರಣದಲ್ಲಿ ಯೋಗ ಮತ್ತು ನ್ಯಾಚುರೋಪತಿ ಬಗ್ಗೆ ಡಾ. ಅಂಕಿತಾ ಕಿಣಿ ವಿಷಯ ಮಂಡಿಸುವರು.
ಈ ಸಂದರ್ಭ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಶಕುಂತಳಾ ಆರ್. ಕಿಣಿ ಅಧ್ಯಕ್ಷತೆ ವಹಿಸುವರು. ಪದ್ಮಾವತೀ ಏದರು ಮತ್ತು ನಿರ್ಮಲಾ ಶೇಷಪ್ಪ ತುಳು, ಸುಮಿತ್ರಾ ಎರ್ಪಕಟ್ಟೆ, ಸೌಮ್ಯಾಪ್ರವೀಣ್, ಕವಿತಾ ಕೂಡ್ಲು, ಜುಲೈಕಾ ಮಾಹಿನ್ ಕನ್ನಡ, ಅನ್ನಪೂರ್ಣ ಬೆಜಪ್ಪೆ, ಪ್ರಮಿಳಾ ಚುಳ್ಳಿಕಾನ, ಅನುಪಮಾ ಉಡುಪಮೂಲೆ, ಧನ್ಯಶ್ರೀ ಸರಳಿ ಹವ್ಯಕಭಾಷೆ, ಪ್ರಭಾವತೀ ಕೆದಿಲಾಯ, ವಸಂತಲಕ್ಷ್ಮೀ ಪುತ್ತೂರು ಶಿವಲ್ಳಿ ತುಳು, ಸೌಮ್ಯಾಗುರು ಕಾರ್ಲೆ, ಜ್ಯೋತ್ಸನಾ ಕಡಂದೇಲು ಕರಾಡ, ವಿಜಯಲಕ್ಷ್ಮೀ ಶ್ಯಾನುಭಾಗ್ ಸ್ಥಾನಿಕ ತುಳು, ಚೇತನಾ ಕುಂಬಳೆ, ಕವಿತಾ ಎಂ ಚೆರ್ಕಳ, ಶರಣ್ಯಾನಾರಾಯಣನ್ ಮಲಯಾಳ, ಲಕ್ಷ್ಮೀ ಕೆ. ತಮಿಳು, ಶಕುಂತಳಾ ಆರ್ ಕಿಣಿ ಕೊಂಕಣಿ, ದಿವ್ಯಾಗಟ್ಟಿ ಪರಕ್ಕಿಲ ಇಂಗ್ಲಿಷ್, ಶರ್ಮಿಳಾ ಬಜಕೂಡ್ಲು ಮರಾಟಿ, ಲಕ್ಷ್ಮೀ ಕೆ ತೆಲುಗು ಭಾಷೆಯಲ್ಲಿ ಕವಿತೆ ವಾಚಿಸುವರು. ಕೊರತಿ ಪಿ. ಪಡ್ರೆ ಹಾಗೂ ಶ್ರೀಲತಾ ವೈ ಅಜ್ಜಿಕತೆ ನಡೆಸಿಕೊಡುವರು. ರಾಧಾಮುರಳೀಧರ್, ಪ್ರತಿಜ್ಞಾರಂಜಿತ್, ಹರಿಣಾಕ್ಷಿ ಭೋಜರವ್, ಸರಸ್ವತೀ ಮಧೂರು ಕಾವ್ಯಗಾಯನ ನಡೆಸಿಕೊಡುವರು.