ದುಬೈ (PTI): ಜಿಡಿಪಿ ಹೊರಸೂಸುವಿಕೆ ತೀವ್ರತೆ ಪ್ರಮಾಣವನ್ನು ಭಾರತವು 2005 ರಿಂದ 2019ರ ಅವಧಿಯಲ್ಲಿ ಶೇ 33ರಷ್ಟು ತಗ್ಗಿಸಿದೆ. ನಿಗದಿತ ಗುರಿಯನ್ನು 11 ವರ್ಷ ಮೊದಲೇ ಸಾಧಿಸಲಾಗಿದೆ ಎಂದು ಸರ್ಕಾರದ ನೂತನ ವರದಿ ತಿಳಿಸಿದೆ.
ದುಬೈ (PTI): ಜಿಡಿಪಿ ಹೊರಸೂಸುವಿಕೆ ತೀವ್ರತೆ ಪ್ರಮಾಣವನ್ನು ಭಾರತವು 2005 ರಿಂದ 2019ರ ಅವಧಿಯಲ್ಲಿ ಶೇ 33ರಷ್ಟು ತಗ್ಗಿಸಿದೆ. ನಿಗದಿತ ಗುರಿಯನ್ನು 11 ವರ್ಷ ಮೊದಲೇ ಸಾಧಿಸಲಾಗಿದೆ ಎಂದು ಸರ್ಕಾರದ ನೂತನ ವರದಿ ತಿಳಿಸಿದೆ.
ಈ ಅವಧಿಯಲ್ಲಿ ಭಾರತದ ಜಿಡಿಪಿ ಶೇ 7ರಷ್ಟು ಪ್ರಗತಿಯಾಗಿದ್ದರೆ, ಇಂಗಾಲ ಹೊರಸೂಸುವಿಕೆ ಪ್ರಮಾಣ ಶೇ 4ರಷ್ಟಿದೆ.
'ತಾಪಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಕಾರ್ಯಸೂಚಿ ಸಮ್ಮೇಳನ -3ನೇ ರಾಷ್ಟ್ರೀಯ ಸಂವಹನ' ಕುರಿತ ವರದಿಯನ್ನು ದುಬೈನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ತಾಪಮಾನ ಬದಲಾವಣೆಗೆ ಸಂಬಂಧಿತ ವಿಶ್ವಸಂಸ್ಥೆ ಸಮಿತಿಗೆ ಸಲ್ಲಿಸಲಾಗುತ್ತದೆ.
ಅಧಿಕಾರಿಗಳ ಪ್ರಕಾರ, ಈ ವರದಿಯು ದೇಶದಲ್ಲಿನ ಹಸಿರುಮನೆ ಇಂಗಾಲ ಹೊರಸೂಸುವಿಕೆ ಪ್ರಮಾಣ, ತಾಪಮಾನ ಬದಲಾವಣೆ ಮೇಲೆ ಅದರ ಪರಿಣಾಮ, ಇಂಗಾಲ ಹೊರಸೂಸುವಿಕೆ ತಗ್ಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಹೊಂದಿದೆ.
ಪರಿಸರ ಸಚಿವ ಭೂಪೇಂದರ್ ಯಾದವ್, ದೇಶದಲ್ಲಿ ಒಟ್ಟು ಹೊರಸೂಸುವಿಕೆ ಪ್ರಮಾಣ (ಭೂಮಿ ಬಳಕೆ, ಭೂಮಿ ಬಳಕೆ ಬದಲಾವಣೆ ಮತ್ತು ಅರಣ್ಯೀಕರಣ ವಲಯ) 2016ನೇ ಸಾಲಿಗೆ ಹೋಲಿಸಿದಲ್ಲಿ ಶೇ 4.56ರಷ್ಟು ಹೆಚ್ಚಿದೆ ಎಂದು ತಿಳಿಸಿದ್ದಾರೆ.
2030ರ ವೇಳೆಗೆ ಜಿಡಿಪಿ ಹೊರಸೂಸುವಿಕೆ ತೀವ್ರತೆಯನ್ನು ಶೇ 45ರಷ್ಟಕ್ಕೆ ತಗ್ಗಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕಾರ್ಯತತ್ಪರವಾಗಿದ್ದೇವೆ. ಅರಣ್ಯೀಕರಣದ ಮೂಲಕ ಈ ಗುರಿ ಸಾಧಿಸಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.