HEALTH TIPS

'3.30 ಲಕ್ಷ ವೃದ್ಧರು, ಅಂಗವಿಕಲರಿಗೆ ಮನೆಯಿಂದಲೇ ಮತದಾನ ಸೌಲಭ್ಯ'

             ವದೆಹಲಿ: 'ಕಳೆದ 11 ವಿಧಾನಸಭಾ ಚುನಾವಣೆಗಳಲ್ಲಿ 80 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವೃದ್ಧರು ಹಾಗೂ ಅಂಗವಿಕಲರು ಸೇರಿದಂತೆ 3.30 ಲಕ್ಷ ಮತದಾರರು ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಪಡೆದಿದ್ದಾರೆ' ಎಂದು ಮೂಲಗಳು ಶನಿವಾರ ತಿಳಿಸಿವೆ.

             'ಪೂರ್ವ ನಿರ್ಧರಿತ ಸಮಯದಲ್ಲಿ ಮನೆಯಿಂದಲೇ ಮತದಾನ ಮಾಡುವುದನ್ನು ಆಯ್ಕೆ ಮಾಡಿದವರ ನಿವಾಸಗಳಿಗೆ ಚುನಾವಣಾ ಸಿಬ್ಬಂದಿ ಭೇಟಿ ನೀಡಿ ಮತದಾನದ ಸೌಲಭ್ಯ ಕಲ್ಪಿಸುತ್ತಾರೆ.

ಈ ವೇಳೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇರುತ್ತಾರೆ' ಎಂದು ಹೇಳಿವೆ.

                'ನಿಗದಿತ ಗೌಪ್ಯತೆಗಳ ಮಾನದಂಡಗಳನ್ನು ಆಧರಿಸಿ ಬಾಲೆಟ್‌ ಪೇಪರ್‌ ಬಳಸಿ ಮನೆಯಿಂದಲೇ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಎಲ್ಲ ಕಾರ್ಯಾಚರಣೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗುತ್ತದೆ. 2.6 ಲಕ್ಷ ವೃದ್ಧರು ಹಾಗೂ 70 ಸಾವಿರ ಅಂಗವಿಕಲರು ಈ ಸೌಲಭ್ಯ ಪಡೆದಿದ್ದಾರೆ' ಎಂದಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries