HEALTH TIPS

ಮಿಶಾಂಗ್ ಪ್ರಬಲ: ಕೇರಳದಲ್ಲಿ 35 ರೈಲುಗಳ ರದ್ದು

                ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಶಾಂಗ್ ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದಲ್ಲಿ 35 ರೈಲುಗಳನ್ನು ರದ್ದುಗೊಳಿಸಲಾಗಿದೆ.

              ಕೇರಳದಿಂದ ಬೇರೆ ರಾಜ್ಯಗಳಿಗೆ ಹೋಗುವ ಮತ್ತು ಬರುವ  ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ಹಿಂದೆ ಟಿಕೆಟ್ ಕಾಯ್ದಿರಿಸಿದವರಿಗೆ ಹಣವನ್ನು ಹಿಂದಿರುಗಿಸುವುದಾಗಿ ಭಾರತೀಯ ರೈಲ್ವೇ ಘೋಷಿಸಿದೆ.

                ಮಿಶಾಂಗ್ ಚಂಡಮಾರುತ ಇಂದು ಅಪ್ಪಳಿಸುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆಯ ಸೂಚನೆಯಂತೆ, ಗಂಟೆಗೆ 100 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ತಮಿಳುನಾಡಿನಲ್ಲೂ 118 ರೈಲುಗಳನ್ನು ರದ್ದುಗೊಳಿಸಲಾಗಿದೆ. ಡಿಸೆಂಬರ್ 3 ರಿಂದ 6 ರವರೆಗೆ ದೂರ ಸಂಚಾರದ ರೈಲುಗಳನ್ನು ರದ್ದುಗೊಳಿಸಲಾಗಿದೆ.

                ಮಿಶಾಂಗ್ ತಮಿಳುನಾಡಿನ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಕೇಂದ್ರೀಕೃತಗೊಂಡಿದೆ. ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಪುದುಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 18 ತಂಡಗಳನ್ನು ನಿಯೋಜಿಸಲಾಗಿದೆ.

ರದ್ದಾದ ರೈಲುಗಳು-

ನರಸಾಪುರ-ಕೊಟ್ಟಾಯಂ (07119, ಭಾನುವಾರ) ಮತ್ತು ಕೊಟ್ಟಾಯಂ-ನರಸಾಪುರ (07120, ಸೋಮವಾರ).

ಸಿಕಂದರಾಬಾದ್-ಕೊಲ್ಲಂ (07129, ಬುಧವಾರ) ಮತ್ತು ಕೊಲ್ಲಂ-ಸಿಕಂದರಾಬಾದ್ (07130, ಭಾನುವಾರ).

ಗೋರಖ್‍ಪುರ-ಕೊಚುವೇಲಿ (12511, ಮಂಗಳವಾರ) ಮತ್ತು ಕೊಚುವೇಲಿ-ಗೋರಖ್‍ಪುರ (12512, ಬುಧವಾರ).

ತಿರುವನಂತಪುರಂ-ನವದೆಹಲಿ (12625, ಭಾನುವಾರ) ಮತ್ತು ತಿರುವನಂತಪುರಂ-ನವದೆಹಲಿ (12625, ಸೋಮವಾರ).

ನವದೆಹಲಿ-ತಿರುವನಂತಪುರಂ (12626, ಮಂಗಳವಾರ) ಮತ್ತು ನವದೆಹಲಿ-ತಿರುವನಂತಪುರಂ (12626, ಬುಧವಾರ).

ನಾಗರಕೋಯಿಲ್-ಶಾಲಿಮಾರ್ (12659, ಭಾನುವಾರ) ಮತ್ತು ಶಾಲಿಮಾರ್-ನಾಗರ್ಕೋಯಿಲ್(12660, ಬುಧವಾರ).

ಧನ್ಬಾದ್-ಆಲಪ್ಪುಳ (13351, ಭಾನುವಾರ) ಮತ್ತು ಧನ್ಬಾದ್-ಆಲಪ್ಪುಳ (13351, ಸೋಮವಾರ).

ಅಲಪ್ಪುಳ-ಧನ್‍ಬಾದ್ (13352, ಬುಧವಾರ) ಮತ್ತು ಆಲಪ್ಪುಳ-ಧನ್‍ಬಾದ್ (13352, ಗುರುವಾರ)

ಸಿಕಂದರಾಬಾದ್-ತಿರುವನಂತಪುರ (17230, ಭಾನುವಾರ) ಮತ್ತು ಸಿಕಂದರಾಬಾದ್-ತಿರುವನಂತಪುರಂ (17230, ಸೋಮವಾರ).

ಸಿಕಂದರಾಬಾದ್-ತಿರುವನಂತಪುರಂ (17230, ಮಂಗಳವಾರ) ಮತ್ತು ತಿರುವನಂತಪುರಂ-ಸಿಕಂದರಾಬಾದ್ (17229, ಮಂಗಳವಾರ).

ತಿರುವನಂತಪುರಂ-ಸಿಕಂದರಾಬಾದ್ (17229, ಬುಧವಾರ) ಮತ್ತು ತಿರುವನಂತಪುರಂ-ಸಿಕಂದರಾಬಾದ್ (17229, ಗುರುವಾರ).

ಟಾಟಾ- ಎರ್ನಾಕುಳಂ (18189, ಭಾನುವಾರ) ಮತ್ತು ಎರ್ನಾಕುಳಂ-ಟಾಟಾ (18190, ಮಂಗಳವಾರ).

ಕನ್ಯಾಕುಮಾರಿ-ದಿಬ್ರುಗಢ (22503, ಬುಧವಾರ) ಮತ್ತು ಕನ್ಯಾಕುಮಾರಿ-ದಿಬ್ರುಗಢ (22503, ಗುರುವಾರ).

ಎರ್ನಾಕುಳಂ-ಪಾಟ್ನಾ (22643, ಸೋಮವಾರ) ಮತ್ತು ಪಾಟ್ನಾ-ಎರ್ನಾಕುಳಂ (22644, ಗುರುವಾರ).

ಕೊಚುವೇಲಿ-ಕೊರ್ಬಾ (22648, ಸೋಮವಾರ) ಮತ್ತು ಕೊರ್ಬಾ-ಕೊಚುವೇಲಿ (22647, ಬುಧವಾರ).

ಪಾಟ್ನಾ-ಎರ್ನಾಕುಳಂ (22670, ಮಂಗಳವಾರ)

ಬಿಲಾಸ್ಪುರ್-ಎರನಾಕುಲಂ (22815, ಸೋಮವಾರ) ಮತ್ತು ಎರ್ನಾಕುಳಂ-ಬಿಲಾಸ್ಪುರ್ (22816, ಬುಧವಾರ).

ಹಟಿಯಾ- ಎರ್ನಾಕುಳಂ (22837, ಸೋಮವಾರ) ಮತ್ತು ಎರ್ನಾಕುಳಂ-ಹಾಟಿಯಾ (22838, ಬುಧವಾರ).



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries