ತ್ರಿಶೂರ್: ಅತ್ಯಾಚಾರ ಯತ್ನ ಎಂಬ ಪ್ರಕರಣದಲ್ಲಿ ನಟ ಸುರೇಶ್ ಗೋಪಿ ಅವರನ್ನು ಬಂಧಿಸಲು ರಾಜ್ಯ ಸಕಾರ ಮುಂದಾಗುತ್ತಿದೆ. ಮೊನ್ನೆಯ ಚಾರ್ಜ್ ಶೀಟ್‍ನಲ್ಲಿ 354 ರ 1 ಮತ್ತು 4 ಉಪವಿಭಾಗಗಳನ್ನು ಮಾತ್ರ ಸೇರಿಸಲಾಗಿತ್ತು, ಆದರೆ ಈಗ 354 ರ ಎಲ್ಲಾ ಸೆಕ್ಷನ್‍ಗಳನ್ನು ಸೇರಿಸಲಾಗಿದೆ. ಸುರೇಶ್ ಗೋಪಿ ವಿರುದ್ಧ ಪ್ರಕರಣ ಹೆಣೆಯಲಾಗಿದೆ.
ಸುರೇಶ್ ಗೋಪಿ ವಿರುದ್ಧದ ಪ್ರಕರಣವನ್ನು ಮುಂದುವರಿಸದಂತೆ ನಟ ಮಮ್ಮುಟ್ಟಿ ಅವರು ಪಿಣರಾಯಿ ಅವರಿಗೆ ನಿರ್ದಿಷ್ಟವಾಗಿ ಮನವಿ ಮಾಡಿದ್ದರು ಮತ್ತು ಅದರಂತೆ ಪಿಣರಾಯಿ ವಿಜಯನ್ ಅವರು ಪ್ರಕರಣವನ್ನು ಕೈಬಿಟ್ಟರು ಎಂದು ಸಾಮಾಜಿಕ ಮಾಧ್ಯಮದಲ್ಲಿ ವದಂತಿ ಇತ್ತು. ಆದರೆ ಪೋಲೀಸರ ಹೊಸ ನಡೆ ಕೇಳಿಬಂದ ಸುದ್ದಿ ತಪ್ಪು ಎಂದು ಸಾಬೀತಾಗಿದೆ.
ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ ಎಂದು ತಿಳಿದು ಬಂದಿದೆ. ನವಕೇರಳ ಸಮಾವೇಶದ ಒತ್ತಡದಿಂದ ಚಾರ್ಜ್ ಶೀಟ್ ತಡವಾಯಿತು ಎಂದು ಪೋಲೀಸರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯನ್ನು ಮೈ ಮುಟ್ಟಿದ್ದಾರೆಂಬುದು ಸುರೇಶ್ ಗೋಪಿಯವರ ಮೇಲಿನ ಪ್ರಕರಣ. ಕೆಲವು ಬಾಹ್ಯ ಪ್ರೇರಣೆಯಿಂದ ಪತ್ರಕರ್ತೆ ತನಗೆ ಕಿರುಕುಳ ನೀಡಲು ಯತ್ನಿಸಿದ ಆರೋಪ ಹೊರಿಸಿರುವರೆಂಬುದು ವರದಿ. ಅದೇನೇ ಇರಲಿ ಅಂದು ನಾಡಕವನ ಪೋಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಸುರೇಶ್ ಗೋಪಿ ಠಾಣೆಗೆ ಹಾಜರಾಗಿದ್ದರು. ಅಂದು ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಗಿತ್ತು.
ಸುರೇಶ್ ಗೋಪಿ ಅವರ ಪ್ರಾಮಾಣಿಕತೆಯನ್ನು ಚಿತ್ರರಂಗ ಮತ್ತು ಕೇರಳದ ಸಾರ್ವಜನಿಕರು ಒಪ್ಪಿಕೊಂಡಿರುವಾಗ ಅವರನ್ನು ರಾಜಕೀಯ ದ್ವೇಷದ ಕಾರಣಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವ್ಯಾಪಕ ಆರೋಪವಿದೆ. ಸುರೇಶ್ ಗೋಪಿಗೆ ದೂರು ನೀಡಿದ ಮಹಿಳಾ ಪತ್ರಕರ್ತೆಯ ಪರಿಚಯವಿದ್ದು, ಇಬ್ಬರೂ ಸ್ನೇಹಿತರಾಗಿದ್ದು, ಪತ್ರಿಕಾಗೋಷ್ಠಿ ವೇಳೆ ತುಂಬಾ ಖುಷಿಯಾಗಿದ್ದ ಪತ್ರಕರ್ತೆ ಬಳಿಕ ಮೇಲಧಿಕಾರಿಗಳ ಷಡ್ಯಂತ್ರದಿಂದ ಲೈಗಿಂಕ ಕಿರುಕುಳ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿಯ ತ್ರಿಶೂರ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಸುರೇಶ್ ಗೋಪಿ ಅವರನ್ನು ಬಲೆಯಲ್ಲಿ ಸಿಲುಕಿಸಿ ಅವಮಾನ ಮಾಡುವುದೇ ಗುರಿ ಎಂದು ಹೇಳಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಪ್ರಕರಣವನ್ನು ಬಳಸಿಕೊಂಡು ಸುರೇಶ್ ಗೋಪಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಲೆಕ್ಕಾಚಾರ ಎಡ ಪಾಳೆಯದ್ದೆಂದು ಸಂಶಯಿಸಲಾಗಿದೆ.