ಕಾಸರಗೋಡು: ರಾಷ್ಟ್ರೀಯ ಸಾಕ್ಷರತಾ ಯೋಜನೆಯ ಅಂಗವಾಗಿ ಉಲ್ಲಾಸ್, ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಆಯೋಜಿಸಿರುವ ಸಾಕ್ಷರತಾ ಪರೀಕ್ಷೆ ಜಿಲ್ಲೆಯಲ್ಲಿ ಆರಂಭವಾಗಿದೆ. ಜಿಲ್ಲೆಯ 364 ಕೇಂದ್ರಗಳಲ್ಲಿ ಉತ್ಕøಷ್ಟತೆಯ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಮುಳಿಯಾರ್ ಗ್ರಾಮ ಪಂಚಾಯತಿಯ ವಡಕ್ಕೇಕರ ಸಮಾಜ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. 78ರ ಹರೆಯದ ಸಾವಿತ್ರಿ ಅವರಿಗೆ ಪ್ರಶ್ನೆ ಪತ್ರಿಕೆ ವಿತರಿಸಿ ಉದ್ಘಾಟಿಸಲಾಯಿತು.
ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ಆಶಯ ಭಾಷಣ ಮಾಡಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮೋಹನನ್, ಕೆ.ಪಿ.ಮುರಳೀಧರನ್, ನೋಡಲ್ ಪ್ರೇರಕ ತಂಗಮಣಿ, ಪಂಚಾಯಿತಿ ಪ್ರೇರಕ ವಿ.ಪುಷ್ಪ ಲತಾ, ಸ್ವಯಂ ಸೇವಕಿ ಶಿಕ್ಷಕಿ ಅಶ್ವಿನಿ ಮಾತನಾಡಿದರು.
ಕೋಡೋಂ ಬೆಳ್ಳೂರು 4ನೇ ವಾರ್ಡ್‍ನಲ್ಲಿ ಪಂಚಾಯಿತಿ ಅಧ್ಯಕ್ಷೆ ಪಿ.ಶ್ರೀಜಾ, ವಲಿಯಪರಂ ಗ್ರಾಮ ಪಂಚಾಯಿತಿ ಇಡಯ್ಲೆಕ್ಕಾಡ್‍ನ ಎಲ್‍ಪಿ ಶಾಲೆಯಲ್ಲಿ ಅಧ್ಯಕ್ಷ ವಿ.ವಿ.ಸಜೀವ್, ಪುಲ್ಲೂರು ಪೆರಿಯ 14ನೇ ವಾರ್ಡ್‍ನಲ್ಲಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್, ಕುತ್ತಿಕೋಲ್ 4ನೇ ವಾರ್ಡ್‍ನಲಲಿ ಅಧ್ಯಕ್ಷ ಮುರಳಿ ಪಯ್ಯಂಗಾನಂ, ಮುಳಿಯಾರ್ 9ನೇ ವಾರ್ಡ್‍ನಲ್ಲಿ ಅಧ್ಯಕ್ಷೆ ಪಿ.ವಿ.ಮಿನಿ, ಮಂಗಲ್ಪಾಡಿಯಲ್ಲಿ ಅಧ್ಯಕ್ಷೆ ಫಾತಿಮತ್ ರುಖಿಯ, ಮೀಂಜ ಪಂಚಾಯತಿಯಲ್ಲಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಹಾಗೂ ಪಂಚಾಯತಿ ಉಪಾಧ್ಯಕ್ಷ ಎ ಜನಾರ್ದನ ಅವರು ಶ್ರೇಷ್ಠತೆಯ ಹಬ್ಬದ ಸಾಕ್ಷರತಾ ಪರೀಕ್ಷೆಗಳನ್ನು ಉದ್ಘಾಟಿಸಿದರು.
ಮಧೂರು ಪಂಚಾಯತ್‍ನ ಪನ್ನಿಪಾರ ಅಂಗನವಾಡಿಯಲ್ಲಿ 20 ವರ್ಷಗಳಿಂದ ಅಸ್ಸಾಂ ನಿವಾಸಿ ಲಲಿತಾ ಬರಾಲಿ ಸಾಕ್ಷರತೆ ಪರೀಕ್ಷೆ ಬರೆದಿದ್ದು, ನೀಲೇಶ್ವರದಲ್ಲಿ ನಗರಸಭೆ ಉಪಾಧ್ಯಕ್ಷ ವಿ.ಮಹಮ್ಮದ್ ರಫಿ ಪ್ರತ್ಯಾಶಾ ಬಡ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಉದ್ಘಾಟಿಸಿದರು. ತೃಕ್ಕÀರಿಪುರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವಾ ಉದ್ಘಾಟಿಸಿದರು.