ಕಾಸರಗೋಡು: ರಾಷ್ಟ್ರೀಯ ಸಾಕ್ಷರತಾ ಯೋಜನೆಯ ಅಂಗವಾಗಿ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಆಯೋಜಿಸಿರುವ ಸಾಕ್ಷರತಾ ಪರೀಕ್ಷೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಆರಂಭಗೊಂಡಿತು. ಜಿಲ್ಲೆಯ 364 ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಮುಳಿಯಾರ್ ಗ್ರಾಮ ಪಂಚಾಯಿತಿಯ ವಡಕ್ಕೇಕರ ಸಮಾಜ ಅಧ್ಯಯನ ಕೇಂದ್ರದಲ್ಲಿ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. 78ರ ಹರೆಯದ ಹಿರಿಯ ಸಾಕ್ಷರತಾ ಕಲಿಕಾರ್ಥಿ ಸಾವಿತ್ರಿ ಅವರಿಗೆ ಪ್ರಶ್ನೆ ಪತ್ರಿಕೆ ನೀಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ಆಶಯ ಭಾಷಣ ಮಾಡಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮೋಹನನ್, ಕೆ.ಪಿ.ಮುರಳೀಧರನ್, ನೋಡಲ್ ಪ್ರೇರಕ ತಂಗಮಣಿ, ಪಂಚಾಯಿತಿ ಪ್ರೇರಕ ವಿ.ಪುಷ್ಪ ಲತಾ, ಸ್ವಯಂ ಸೇವಕಿ ಶಿಕ್ಷಕಿ ಅಶ್ವಿನಿ ಉಪಸ್ಥಿತರಿದ್ದರು. ಕೋಡೋಂ ಬೇಲೂರು 4ನೇ ವಾರ್ಡ್ನಲ್ಲಿ ಪಂಚಾಯಿತಿ ಅಧ್ಯಕ್ಷೆ ಪಿ.ಶ್ರೀಜಾ, ವಲಿಯಪರಂಬ ಗ್ರಾಮ ಪಂಚಾಯಿತಿ ಇಡಯಿಲಕ್ಕಾಡ್ ಎಲ್.ಪಿ.ಶಾಲೆಯಲ್ಲಿ ಗ್ರಾಪಂ ಅಧ್ಯಕ್ಷ ವಿ.ವಿ.ಸಜೀವ್, ಪುಲ್ಲೂರು ಪೆರಿಯ 14ನೇ ವಾರ್ಡ್ನಲ್ಲಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್, ಕುತ್ತಿಕೋಲ್ 4ನೇ ವಾರ್ಡ್ನಲ್ಲಿ ಅಧ್ಯಕ್ಷ ಮುರಳಿ ಪಯ್ಯಂಗಾನಂ, ಮುಳಿಯಾರ್ 9ನೇ ವಾರ್ಡ್ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಮಂಗಲ್ಪಾಡಿಯಲ್ಲಿ.ಅಧ್ಯಕ್ಷೆ ಫಾತಿಮತ್ ರುಬೀನಾ, ಮೀಂಜದಲ್ಲಿ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಹಾಗೂ ಮುಳಿಯಾರು ಪಂಚಾಯತ್ ನ 8ನೇ ವಾರ್ಡ್ ನಲ್ಲಿ ಪಂಚಾಯತ್ ಉಪಾಧ್ಯಕ್ಷ ಎ ಜನಾರ್ದನನ್ ಸಾಕ್ಷರತಾ ಪರೀಕ್ಷೆ ಉದ್ಘಾಟಿಸಿದರು.
ಮಧೂರು ಪಂಚಾಯಿತಿಯ ಪನ್ನಿಪಾರ ಅಂಗನವಾಡಿ ಸನಿಹ 20 ವರ್ಷಗಳಿಂದ ವಾಸಿಸುತ್ತಿರುವ ಅಸ್ಸಾಂ ನಿವಾಸಿ ಲಲಿತಾ ಬರಾಲಿ ಪರಿಕ್ಷೆ ಬರೆದರು. ನೀಲೇಶ್ವರಂ ಪುರಸಭಾದಲ್ಲಿ ಪುರಸಭೆ ಉಪಾಧ್ಯಕ್ಷ ವಿ.ಮುಹಮ್ಮದ್ ರಫಿ ಪ್ರತ್ಯಾಶಾ ಬಡ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶ್ನಪತ್ರಿಕೆ ನೀಡಿ ಉದ್ಘಾಟಿಸಿದರು. ಚೆಮ್ಮನಾಡು ಗ್ರಾ.ಪಂ.ನಲ್ಲಿ ಪಂಚಾಯತ್ ಉಪಾಧ್ಯಕ್ಷ ಮನ್ಸೂರ್ ಕುರಿಕ್ ಹಾಗೂ ಚೆಮ್ಮನಾಡಿನ ಕಡವತ್ ಎಲ್.ಪಿ.ಶಾಲೆಯ ವಾರ್ಡ್ ಸದಸ್ಯ ಅಮೀರ ಬಿ ಪಾಲೋತ್ ಮತ್ತು ರಾಜನ್ ಪೆÇಯಿನಾಚಿ ಉದ್ಘಾಟಿಸಿದರು. ತೃಕರಿಪುರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವಾ ಉದ್ಘಾಟಿಸಿದರು.