ಮುಳ್ಳೇರಿಯ: ಆಯರ್‍ಕ್ಕಾಡ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೆÇೀತ್ಸವ (ತಿರುವಿಳಕ್ಕ್)ವು ಡಿ.3ರಿಂದ 5ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.3ರಂದು ಮುಂಜಾನೆ 4ಕ್ಕೆ ಶ್ರೀ ರವೀಂದ್ರನ್ ಗುರುಸ್ವಾಮಿಯವರಿಂದ ದೀಪಜ್ವಲನೆ, ದೀಪಾರಾಧನೆ, 5ಕ್ಕೆ ಮಹಾಗಣಪತಿ ಹೋಮ, ಉಗ್ರಾಣ ಮುಹೂರ್ತ, ಬೆಳಗ್ಗೆ 8.30ಕ್ಕೆ ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 10ಕ್ಕೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮತ್ತು ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಅವರಿಗೆ ಪೂರ್ಣಕುಂಭ ಸ್ವಾಗತ, 10.30ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ. 11ಕ್ಕೆ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನದಾನ, 1.30ಕ್ಕೆ ಧಾರ್ಮಿಕ ಸಭೆ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮತ್ತು ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಆಶೀರ್ವಚನ ನೀಡುವರು. ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಘುರಾಮ ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಉದ್ಯಮಿ ವಸಂತ ಪೈ ಬದಿಯಡ್ಕ, ಪ್ರವೀಣ್ ಕೋಡೋತ್ತ್, ವಲವಡಲ ದೇವಾಲಯದ ಮೊಕ್ತೇಸರ ಜಗದೀಶ ರಾವ್ ಅವರಿಂದ ಧಾರ್ಮಿಕ ಭಾಷಣ, ಕಾರಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ , ವಾರ್ಡ್ ಸದಸ್ಯೆ ಚಿತ್ರಕಲಾ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ರಾಧಾಕೃಷ್ಣ ಭಟ್, ಮಹೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಬಂಬ್ರಾಣ, ದಾಮೋದರ ಗುರುಸ್ವಾಮಿ, ಗೋಪಾಲನ್ ನಾಯರ್ ಆಯರ್‍ಕ್ಕಾಡ್, ರವೀಂದ್ರನ್ ಗುರುಸ್ವಾಮಿ, ವೆಂಕಟಕೃಷ್ಣ ಕೋಳಿಕ್ಕಜೆ, ರಾಮಚಂದ್ರ ಗೌರಿಯಡ್ಕ ಭಾಗವಹಿಸುವರು. ಸಂಜೆ 6ರಿಂದ ಭಜನೆ, ರಾತ್ರಿ 7ಕ್ಕೆ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಶಿಕ್ಷಕಿ ಉಷಾ ಟೀಚರ್ ಅವರಿಂದ ಯೋಗ ಡ್ಯಾನ್ಸ್ , 7.15ಕ್ಕೆ ಅಶೋಕನ್ ಪಣಿಯೆ ಮತ್ತು ಬಳಗದವರಿಂದ ಭಕ್ತಗಾನ ಸುಧಾ, 8ರಿಂದ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿದೆ.
ಡಿ.4ರಂದು ಮುಂಜಾನೆ 4 ಕ್ಕೆ ಶರಣಂವಿಳಿ, ದೀಪಾರಾಧನೆ, ಬೆಳಗ್ಗೆ 8ರಿಂದ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನದಾನ, ಅಪರಾಹ್ನ 2ರಿಂದ ಭಜನೆ, ಸಂಜೆ 6.30ಕ್ಕೆ ಶ್ರುತಿಲಯ ಸಂಗೀತ ವಿದ್ಯಾಲಯ ಮವ್ವಾರು ಇವರಿಂದ ಸಂಗೀತ ಕಚೇರಿ, ರಾತ್ರಿ 7 ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ಭಜನೆ, 8ಕ್ಕೆ ನೃತ್ಯ ವೈವಿಧ್ಯ, 8.30ಕ್ಕೆ ಕುಡಿವೆಪ್ಪ್ ಪೂಜೆ, 9ಕ್ಕೆ ಮಹಾಪೂಜೆ, ಅನ್ನದಾನ ನಡೆಯಲಿದೆ.
ಡಿ.5ರಂದು ಮುಂಜಾನೆ 4 ಗಂಟೆಗೆ ಶರಣುವಿಳಿ, ದೀಪಾರಾಧನೆ,ಬೆಳಗ್ಗೆ 5ಕ್ಕೆ ಮಹಾ ಗಣಪತಿ ಹೋಮ, 7.30ಕ್ಕೆ ಅಯ್ಯಪ್ಪನನ್ನು ಚಪ್ಪರಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮ, 9.30ಕ್ಕೆ ಧಾರ್ಮಿಕ ಸಭೆ, ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಘುರಾಮ್ ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಪಂದಳ ತಂಬುರಾನ್ (ಪಂದಳ ರಾಜ) ಪಿ.ಜಿ ಶಶಿಕುಮಾರ್ ವರ್ಮ, ಪಂದಳದ ತಂಬುರಾಟ್ಟಿ ( ಪಂದಳ ರಾಜನ ಪತ್ನಿ) ಮೀರಾ ಶಶಿಕುಮಾರ್ ವರ್ಮ, ಶಬರಿಮಲೆ ಪ್ರಧಾನ ಅರ್ಚಕರಾಗಿದ್ದ ಕೊಟ್ಟಾರ ಜಯರಾಮನ್ ನಂಬೂದಿರಿ, ಹರಿಹರನ್ ನಂಬೂದಿರಿ, ಶಬರಿಮಲೆ ಸಹ ಅರ್ಚಕ ಶ್ರೀಕಾಂತ್ ನಂಬೂದಿರಿ, ಅಜಿತ ನಂಬೂದಿರಿ, ಎಂ.ಎಸ್ ಹರಿಕೃಷ್ಣ ಭಟ್ ಆಶೀರ್ವಚನ ನೀಡುವರು.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಸ್ವಾಮಿ ಅಯ್ಯಪ್ಪ ದಾಸ್ ಧಾರ್ಮಿಕ ಭಾಷಣ ಮಾಡುವರು. ಗೋಪಾಲಕೃಷ್ಣ ಪಿಳ್ಳೆ , ಚಂದ್ರಕುಮಾರ್, ವಿಜಯಕುಮಾರ್, ರಾಜೇಶ್ ಕುರುಪ್ಪ್, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಬ್ರಹ್ಮಶ್ರೀ ಗಣೇಶ ತಂತ್ರಿ, ಸುಕುಮಾರ ಗುರುಸ್ವಾಮಿ, ನಾರಾಯಣ ಪೂಜಾರಿ ಬಂಬ್ರಾಣ, ಗೋಪಾಲಕೃಷ್ಣ ಮುಂಡೋಳು ಮೂಲೆ ಮೊದಲಾದವರು ಭಾಗವಹಿಸುವರು. ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಅನ್ನದಾನ,ಅಪರಾಹ್ನ 2ರಿಂದ ಭಜನೆ, ಸಂಜೆ 6.30ಕ್ಕೆ ಪಾಲಕೊಂಬು ಮೆರವಣಿಗೆ ಮವ್ವಾರು ಶ್ರೀ ವಿಶ್ವಕರ್ಮ ಭಜನಾ ಮಂದಿರದಿಂದ ಹೊರಡುವುದು, ರಾತ್ರಿ 7 ಗಂಟೆಗೆ ಕುಂಟಾಲು ಮೂಲೆ ಯಕ್ಷಗಾನ ಕಲಾ ಸಂಘದವರಿಂದ ಮಣಿಕಂಠ ಮಹಿಮೆ ಯಕ್ಷಗಾನ ಬಯಲಾಟ, ರಾತ್ರಿ 10ಕ್ಕೆ ಮಹಾಪೂಜೆ, ಅನ್ನದಾನ, 10.30ಕ್ಕೆ ಅಯ್ಯಪ್ಪನ್ ಸಂಘದ ನೃತ್ಯ, 11 ಗಂಟೆಗೆ ರಾತ್ರಿ ಪೂಜೆ, 11.15ಕ್ಕೆ ಭಾರತ ಕಲಾರತ್ನ ಡಾ.ಪ್ರಶಾಂತ್ ವರ್ಮ ಅವರಿಂದ ಮಾನಸ ಜಪಲಹರಿ (ಭಜನಾ ಸಂಕೀರ್ತನೆ) ನಡೆಯಲಿದೆ.
ಡಿ.6ರಂದು ಮುಂಜಾನೆ 1 ಕ್ಕೆ ಉಡುಕ್ಕ್‍ಪಾಟ್, 2 ಗಂಟೆಗೆ ಅಯ್ಯಪ್ಪನ ಜನನ, 3ಕ್ಕೆ ಪಾಲ್ ಕಿಂಡಿ ಮೆರವಣಿಗೆ, 3.30ಕ್ಕೆ ಪೆÇಲಿಪ್ಪಾಟ್, 4 ಕ್ಕೆ ತಿರಿಉಳಿಚ್ಚಲ್, ಬೆಳಗ್ಗೆ 5ಕ್ಕೆ ಅಯ್ಯಪ್ಪನ್ ವಾವರ ವೆಟ್ಟ್‍ಂ ತಡವೂಂ, 5.30ಕ್ಕೆ ಅಗ್ನಿಸೇವೆ, ಬೆಳಗ್ಗೆ 6ಕ್ಕೆ ಸುಕುಮಾರ ಗುರುಸ್ವಾಮಿ ಮತ್ತು ತಂಡ ಶ್ರೀ ಅಯ್ಯಪ್ಪನ್ ಕಾವ್, ಚೆರ್ಪುಳಶ್ಶೇರಿ ಪಾಲಕ್ಕಾಡ್ ಇವರಿಂದ ಕೂರವಲಿ ಗುರುತ್ತಿ ನಡೆಯಲಿದೆ.