ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರು ಜ.3ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
ಜನವರಿ 2 ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ, ಪ್ರಧಾನಿಯವರ ಅನುಕೂಲಕ್ಕಾಗಿ ದಿನಾಂಕ ಬದಲಿಸಲಾಗಿದೆ ಎಂದರು.
ಜನವರಿ 3ರ ಬುಧವಾರ ಕೇರಳಕ್ಕೆ ಆಗಮಿಸಲಿರುವ ಪ್ರಧಾನಿ ಮಧ್ಯಾಹ್ನ 3 ಗಂಟೆಗೆ ತ್ರಿಶೂರ್ ತೇಕಿಂಕಡ್ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡು ಲಕ್ಷ ಮಹಿಳೆಯರು ಭಾಗವಹಿಸುವ “ಸ್ತ್ರೀಶಕ್ತಿ ಮೋದಿಯೊಂದಿಗೆÀ” ಎಂಬ ಮಹಿಳಾ ಸಮಾವೇಶಕ್ಕೆ ಅವರು ಬರುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವನಿತಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ಪ್ರಧಾನಿಯನ್ನು ಬಿಜೆಪಿ ಕೇರಳ ಘಟಕವು ಗೌರವಿಸಲಿದೆ.