ಕಾಸರಗೋಡು: 'ನೋ ಟು ಡ್ರಗ್ಸ್'3ನೆ ಹಂತದ ಅಭಿಯಾನದ ಅಂಗವಾಗಿ ಮಾದಕ ವ್ಯಸನದ ವಿರುದ್ಧ 'ಮೆಗಾ ಚೆಸ್ ಫೆಸ್ಟ್'ನೀಲೇಶ್ವರ ವ್ಯಾಪಾರ ಭವನದಲ್ಲಿ ನಡೆಯಿತು. ಕಾಸರಗೋಡು ಲಿಬರೇಶನ್ ಮಿಷನ್ ಆಶ್ರಯದಲ್ಲಿ ಮೆಗಾ ಚೆಸ್ ಫೆಸ್ಟ್ ಆಯೋಜಿಸಲಾಗಿತ್ತು.
ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್ ಫೆಸ್ಟ್ ಉದ್ಘಾಟಿಸಿದರು.
ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಅಬಕಾರಿ ಉಪ ಆಯುಕ್ತ ಪಿ.ಕೆ.ಜಯರಾಜ್ ಮಾದಕ ವಸ್ತು ವಿರೋಧಿ ಸಂದೇಶ ನೀಡಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಸುರೇಶ್ ಕುಮಾರ್, ನೀಲೇಶ್ವರ ಠಾಣೆ ಇನ್ಸ್ ಪೆಕ್ಟರ್ ಸುಧೀರ್, ಪಂದ್ಯಾಟದ ಸಂಯೋಜಕ ಸುಜಿತ್, ಅಬಕಾರಿ ಪ್ರಿವೆಂಟಿವ್ ಆಫೀಸರ್ ಎನ್.ಜಿ.ರಘುನಾಥನ್, ಅಬಕಾರಿ ವ್ಯವಸ್ಥಾಪಕ ಜಾಯ್ ಜೋಸೆಫ್ ಉಪಸ್ಥಿತರಿದ್ದರು. ನಾಲ್ಕು ವಿಭಾಗಗಳಲ್ಲಿ 120 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹೊಜದುರ್ಗ ಸರ್ಕಲ್ ಇನ್ಸ್‍ಪೆಕ್ಟರ್ ಎಂ.ದಿಲೀಪ್ ಬಹುಮಾನ ವಿತರಿಸಿದರು. ಮುಹಮ್ಮದ್ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ರಾಜೇಶ್, ನಿಶಾದ್ ಮತ್ತು ಶಶಿ ಪಾಂಡಿಕೋಟ್, ಪ್ರಿವೆಂಟಿವ್ ಆಫೀಸರ್ ಗೋಪಿ, ಸಿವಿಲ್ ಅಬಕಾರಿ ಅಧಿಕಾರಿಗಳಾದ ಸಿಜಿನ್ ಮತ್ತು ಶಾಜಿ ಉಪಸ್ಥೀತರಿದ್ದರು. ವಿಮುಕ್ತಿ ಜಿಲ್ಲಾ ಸಂಯೋಜಕಿ ಕೆ.ಎಂ.ಸ್ನೇಹಾ ಸ್ವಾಗತಿಸಿದರು. ವಿಮುಕ್ತಿ ಮಾರ್ಗದರ್ಶಕ ಗೋವಿಂದನ್ ವಂದಿಸಿದರು.