ನಮ್ಮ ದೇಹಕ್ಕೆ ಎಲ್ಲಾ ಪೋಷಕಾಂಶಗಳು ಸರಿಯಾಗಿ ಸಿಕ್ಕಾಗ ಮಾತ್ರ ದೇಹದಲ್ಲಿ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಗಳು ಕೂಡ ಬರುವುದಿಲ್ಲ. ಸರಿಯಾದ ಆಹಾರ ಸೇವನೆ ಮಾಡಿದಾಗ ದೇಹಕ್ಕೆ ಬೇಕಾಗುವ ಎಲ್ಲಾ ಜೀವಸತ್ವಗಳು, ಪೋಷಕಾಂಶಗಳು ಸಿಗುತ್ತವೆ. ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬರ ದೇಹಕ್ಕೂ ಬೇಕಾಗಿರುವ ವಿಟಮಿನ್ ಅಂಶ ಅಂದ್ರೆ "ವಿಟಮಿನ್ ಡಿ"!
ದೇಹಕ್ಕೆ ವಿಟಮಿನ್ ಡಿ ಬೇಕೇ ಬೇಕು!
ಸೂರ್ಯನ ಕಿರಣಗಳಿಂದ ದೇಹಕ್ಕೆ ಬೇಕಾಗಿರುವಷ್ಟು ವಿಟಮಿನ್ ಡಿ ಅಂಶ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಬಹಳ ಹಿಂದೆ ಕೂಡ ಚಿಕ್ಕ ಮಕ್ಕಳನ್ನು ಸ್ವಲ್ಪ ಹೊತ್ತು ಬೆಳಿಗ್ಗೆ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಿಸಬೇಕು ಎಂದು ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಆಫೀಸ್ ಕೆಲಸ ಅಥವಾ ವರ್ಕ್ ಫ್ರಮ್ ಎನ್ನುವ ಕಾರಣಕ್ಕೆ ಯಾರು ಕೂಡ ಮನೆಯಿಂದ ಹೊರಗೆ ಬೀಳುವುದಿಲ್ಲ. ದೇಹಕ್ಕೆ ಸೂರ್ಕನ ಕಿರಣ ಅದರಲ್ಲೂ ಮುಖ್ಯವಾಗಿ ಬೆಳಗಿನ ಸೂರ್ಯನ ಕಿರಣ ಒಳ್ಳೆಯದು ಎಂದು ಗೊತ್ತಿದ್ದರೂ ಯಾರೂ ಅದರ ಬಗ್ಗೆ ಮುತುವರ್ಜಿ ಮಾಡುವುದಿಲ್ಲ. ಈಗ ಸುಮಾರು 50% ನಷ್ಟು ಜನರಿಗೆ ಸೂರ್ಯನ ಕಿರಣಗಳು ಮೈಮೇಲೆ ಬೀಳುವುದೇ ಇಲ್ಲ ಇದರಿಂದಾಗಿ ವಿಟಮಿನ್ ಡಿ ಕೊರತೆ ಸಹಜವಾಗಿ ಕಂಡುಬರುತ್ತದೆ.
ವಿಟಮಿನ್ ಡಿ ಕೊರತೆ ಉಂಟಾದರೆ ಸಾಕಷ್ಟು ಕಾಯಿಲೆಗಳು ಕೂಡ ಬರಬಹುದು. ಉದಾಹರಣೆಗೆ ವಿಟಮಿನ್ ಡಿ ಕೊರತೆ ದೇಹದಲ್ಲಿ ಉಂಟಾದಾಗ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಆಗಾಗ ಶೀತ, ಕೆಮ್ಮು ಮೊದಲಾದ ಸಮಸ್ಯೆ ಕಾಡಬಹುದು.
ಆಗಾಗ ತಲೆ ಸುತ್ತುವುದು ಅಥವಾ ತಲೆನೋವು ಕಾಣಿಸಿಕೊಳ್ಳುವುದು ಕೂಡ ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಸಮಸ್ಯೆಯಾಗಿದೆ. ಇನ್ನು ಬಹಳ ಮುಖ್ಯವಾಗಿರುವ ವಿಟಮಿನ್ ಡಿ ಅಂಶ ನಮ್ಮ ಮೂಳೆಗೆ ಕ್ಯಾಲ್ಸಿಯಂ ಹೀರಿಕೊಳ್ಳುವುದಕ್ಕೆ ಸಹಾಯ ಮಾಡುವುದು. ಇದು ನಮ್ಮಲ್ಲಿ ಇಲ್ಲದೆ ಇದ್ದಾಗ ಬೆನ್ನು ನೋವು, ಸೊಂಟ ನೋವು ಕಾಣಿಸಿಕೊಳ್ಳಬಹುದು ಸಾಮಾನ್ಯವಾಗಿ ಮಧ್ಯ ವಯಸ್ಸಿನ ಮಹಿಳೆ ಹಾಗೂ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ವಿಟಮಿನ್ ಡಿ ಕೊರತೆ ಉಂಟಾದಾಗ ಕೂದಲು ಉದುರುವ ಸಮಸ್ಯೆ ಆಗಬಹುದು. ಇಂತಹ ಸಮಯದಲ್ಲಿ ನೀವು ಸರಿಯಾದ ಪ್ರಮಾಣದ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ವಿಟಮಿನ್ ಡಿ ಕೊರತೆ ಮನುಷ್ಯನ ದೇಹದ ಮೇಲೆ ಮಾತ್ರವಲ್ಲ ಮನಸ್ಸಿನ ಮೇಲೆ ಕೂಡ ಪರಿಣಾಮ ಬೀರಬಹುದು. ಯಾವಾಗ ವಿಟಮಿನ್ ಡಿ ಕೊರತೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆಯೋ ಆಗ ಖಿನ್ನತೆ ಕೂಡ ಉಂಟಾಗುತ್ತದೆ ಇದಕ್ಕೆ ವೈದ್ಯರ ಬಳಿ ಚಿಕಿತ್ಸೆ ಕೂಡ ತೆಗೆದುಕೊಳ್ಳಬೇಕಾಗುತ್ತದೆ.
ವಿಟಮಿನ್ ಡಿ ದೇಹಕ್ಕೆ ನೀಡುವ ಮೂರು ಪ್ರಮುಖ ವಿಷಯಗಳು!
ಸೂರ್ಯನ ಕಿರಣ:
ಪ್ರತಿದಿನ ಬೆಳಗ್ಗೆ ಒಮ್ಮೆಯಾದರೂ ನಿಮ್ಮ ದೇಹ ಸೂರ್ಯನ ಕಿರಣವನ್ನು ತಾಕುವಂತೆ ಮಾಡಬೇಕು. ಅಂದರೆ ಮನೆಯಲ್ಲಿಯೇ ಇರುವ ಬದಲು ಸೂರ್ಯನ ತಿಳಿ ಬಿಸಿಲು ಮೈಮೇಲೆ ಬೀಳುವಂತೆ ಮಾಡಿ. ಪ್ರತಿದಿನ ಬೆಳಿಗ್ಗೆ ಸ್ವಲ್ಪ ಸಮಯವಾದರೂ ಸೂರ್ಯನ ಬೆಳಕಿಗೆ ಮೈ ಒಡ್ಡಬೇಕು ನಿಮ್ಮ ಮಕ್ಕಳಿಗೂ ಕೂಡ ಸೂರ್ಯನ ಬೆಳಕು ತಾಕುವಂತೆ ಮಾಡಿ. ಒಂದು ವೇಳೆ ನೀವು ಸಾಕಷ್ಟು ದಿನದವರೆಗೆ ಸೂರ್ಯನ ಬೆಳಕಿಗೆ ಮೈಯೊಡ್ಡದೇ ಇದ್ದಾಗ ನಿಮ್ಮ ಚರ್ಮದ ಮೇಲು ಕೂಡ ಸಮಸ್ಯೆ ಕಾಣಿಸಿಕೊಳ್ಳಬಹುದು ಹಾಗೆ ಮಕ್ಕಳ ಆರೋಗ್ಯ ಕೂಡ ಹದಗೆಡುತ್ತದೆ.
ವಿಟಮಿನ್ ಡಿ ಭರಿತ ಆಹಾರ ಸೇವನೆ!
ಇನ್ನು ದೇಹಕ್ಕೆ ಬೇಕಾಗಿರುವ ಅತ್ಯಗತ್ಯ ಅಂಶವಾಗಿರುವ ವಿಟಮಿನ್ ಡಿ ಪಡೆದುಕೊಳ್ಳಲು ಮತ್ತೊಂದು ಮಾರ್ಗ ಅಂದರೆ ವಿಟಮಿನ್ ಡಿ ಭರಿತವಾಗಿರುವಂತಹ ಆಹಾರವನ್ನು ಸೇವಿಸುವುದು. ಮೊಟ್ಟೆಯ ಹಳದಿ ಭಾಗ ಹಾಗೂ ಮುಖ್ಯವಾಗಿ ಕೆಲವು ಮೀನುಗಳಲ್ಲಿ ವಿಟಮಿನ್ ಅಂಶ ಹೆಚ್ಚಾಗಿರುತ್ತದೆ. ಭೂತಾಯಿ, ಮೃದ್ವಂಗಿಗಳು, ಸಿಗಡಿ ಬಂಗಡೆ ಮೊದಲದ ಮೀನುಗಳಲ್ಲಿ ವಿಟಮಿನ್ ಅಂಶ ಹೇರಳವಾಗಿರುತ್ತದೆ ಹಾಗಾಗಿ ಅದನ್ನು ಸೇವನೆ ಮಾಡುವುದು ಕೂಡ ಒಳ್ಳೆಯದು. ಅದೇ ರೀತಿ ಹಾಲು ಸೋಯಾ ಹಾಲು, ಕಿತ್ತಳೆ ಜ್ಯೂಸ್ ಓಟ್ ಮೀಲ್ ಏಕದಳ ಧಾನ್ಯಗಳು ದೇಹಕ್ಕೆ ಬೇಕಾಗಿರುವ ವಿಟಮಿನ್ ಡಿ ಒದಗಿಸಬಲ್ಲವು.
ಪೂರಕಗಳ ಸೇವನೆ: (supplements)
ವಿಟಮಿನ್ ಡಿ ಸೂರ್ಯನ ಕಿರಣ ಹಾಗೂ ಉತ್ತಮ ಪೌಷ್ಟಿಕ ಆಹಾರಗಳನ್ನು ಹೊರತುಪಡಿಸಿ ಪೂರಕ ಗಳಿಂದಲೂ ಕೂಡ ಪಡೆದುಕೊಳ್ಳಬಹುದು ಕೆಲವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಅಂತಹ ಸಂದರ್ಭದಲ್ಲಿ ಸಪ್ಲಿಮೆಂಟ್ಸ್ ಬೇಕು. ಆದರೆ ವೈದ್ಯರ ಸಲಹೆಯಿಲ್ಲದೇ ವಿಟಮಿನ್ ಡಿ ಸಪ್ಲಿಮೆಂಟ್ಸ್ ನ್ನು ಯಾರೂ ಸೇವಿಸುವುದು ಒಳ್ಳೆಯದಲ್ಲ. ಒಮೆಗಾ 3 ಸಪ್ಲಿಮೆಂಟ್ಸ್ ಗಳನ್ನು ವಿಟಮಿನ್ ಡಿ ಕೊರತೆ ಇರುವವರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಸಿಸಿಸ್ಟ್ ಫೈಬ್ರೋಸಿಸ್, ಕ್ರೋನ್ಸ್ ಕಾಯಿಲೆ, ಯಕೃತ್ತಿನ ಸಮಸ್ಯೆ ಇಂತಹ ಅನಾರೋಗ್ಯ ಇರುವವರಿಗೆ ಸಪ್ಲಿಮೆಂಟ್ಸ್ ಗಳನ್ನು ನೀಡಲಾಗುತ್ತದೆ.
ಆದರೆ ದೇಹಕ್ಕೆ ಅಗತ್ಯ ಇರುವ ವಿಟಮಿನ್ ಡಿ ಸುಲಭವಾಗಿ ಸಿಗಬೇಕು ಅಂದರೆ ಸೂರ್ಯನ ಕಿರಣಕ್ಕೆ ನಮ್ಮನ್ನ ನಾವು ಒಡ್ಡಿಕೊಳ್ಳುವುದು ಬಹಳ ಒಳ್ಳೆಯದು. ಇದಕ್ಕೆ ನಿಮಗೆ ಯಾವ ಖರ್ಚು ಇಲ್ಲ, ಹೆಚ್ಚು ಸಮಯ ವ್ಯರ್ಥ ಮಾಡಬೇಕಿಲ್ಲ ಬೆಳಿಗ್ಗೆ ಇದ್ದಾಗ ಒಮ್ಮೆ 10 ನಿಮಿಷಗಳಿಂದ 20 ನಿಮಿಷಗಳ ಕಾಲ ಅಥವಾ ಅರ್ಧ ಗಂಟೆಯಷ್ಟು ಸಮಯ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಂಡರೆ ಸಾಕು ನಿಮ್ಮ ದೇಹಕ್ಕೆ ಅಗತ್ಯ ಇರುವ ವಿಟಮಿನ್ ಡಿ ಸುಲಭವಾಗಿ ಸಿಗುತ್ತದೆ.