ಕೋಝಿಕ್ಕೋಡ್: ಜಿಲ್ಲಾ ಶಾಲಾ ಕಲೋತ್ಸವಕ್ಕೆ ಶಾಲಾ ಶಿಕ್ಷಕರು ಆಹಾರ ಸಂಪನ್ಮೂಲ ಸಂಗ್ರಹಿಸಲು ಕಳಿಸಿರುವ ನೋಟೀಸ್ ಇದೀಗ ವಿವಾದಕ್ಕೆಡೆಯಾಗಿದೆ. ಈ ಸಂಬಂಧ ಪೆರಂಬ್ರಾದ ಸೇಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ನೋಟಿಸ್ ಕಳುಹಿಸಿ ಪೇಚಿಗೆ ಸಿಲುಕಿದ್ದಾರೆ.
ಮಕ್ಕಳು ಕಲೋತ್ಸವಕ್ಕೆ ಸಂಪನ್ಮೂಲ ಸಂಗ್ರಹಿಸಲು ಬರುವಾಗ ಸಕ್ಕರೆ ಅಥವಾ 40 ರೂಪಾಯಿ ತರಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಧ್ಯವಾದಷ್ಟು ವಸ್ತುಗಳನ್ನು ತರಬೇಕು ಎಂಬ ಸಲಹೆ ಮೊದಲು ಇತ್ತು. ಆದರೆ ಆಹಾರ ಪದಾರ್ಥಗಳನ್ನು ತರುವುದು ಕಡ್ಡಾಯ ಎನ್ನುತ್ತಾರೆ ಪೆರಂಬ್ರಾ ಶಾಲೆಯ ಶಿಕ್ಷಕರು. ಒಂದು ಕಿಲೋ ಸಕ್ಕರೆ ಅಥವಾ 40 ರೂಪಾಯಿ ತರುವಂತೆ ಮುಖ್ಯ ಶಿಕ್ಷಕರು ಪೋಷಕರಿಗೆ ನೋಟಿಸ್ ಕಳುಹಿಸಿದ್ದಾರೆ. ಕಂದಾಯ ಜಿಲ್ಲಾ ಕಲೋತ್ಸವ ಇದೇ 3ರಂದು ಪೆರಂಬ್ರಾದಲ್ಲಿ ಆರಂಭಗೊಳ್ಳಲಿದೆ.