ಛತ್ತೀಸ್ಗಢ, ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭೆಗಳಲ್ಲಿ ಮಹಿಳಾ ಶಾಸಕಿಯರ ಸಂಖ್ಯೆ ಸಂಸತ್ತು ಇತ್ತೀಚೆಗೆ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ನಿಗದಿಗೊಳಿಸಲಾಗಿರುವ ಶೇ.33ಕ್ಕಿಂತ ಕಡಿಮೆಯಾಗಿದೆ ಎಂದು ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಸಂಗ್ರಹಿಸಿದ ಡೇಟಾ ತಿಳಿಸಿದೆ.

ಛತ್ತೀಸಗಢದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರ ಪೈಕಿ ಶೇ. 21ರಷ್ಟು ಮಂದಿ ಮಹಿಳೆಯರಾಗಿದ್ದಾರೆ. 2018ರಲ್ಲಿ ರಾಜ್ಯದಲ್ಲಿ 13 ಶಾಸಕಿಯರಿದ್ದರೆ ಈಗ ಆ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ತೆಲಂಗಾಣದಲ್ಲಿ 2018ರಲ್ಲಿ ಆರು ಮಹಿಳಾ ಶಾಸಕಿಯರಿದ್ದರೆ ಆ ಸಂಖ್ಯೆ ಈಗ 10ಕ್ಕೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ 2018ರಲ್ಲಿ 24 ಶಾಸಕಿಯರಿದ್ದರೆ ಈ ಬಾರಿ ಅದು 20ಕ್ಕೆ ಇಳಿಕೆಯಾಗಿದೆ.
ಮಧ್ಯಪ್ರದೇಶದಲ್ಲಿ 2013ರಲ್ಲಿ 30 ಶಾಸಕಿಯರು ಆಯ್ಕೆಯಾಗಿದ್ದರೆ 2018ರಲ್ಲಿ 21 ಮಂದಿ ಆಯ್ಕೆಯಾಗಿದ್ದರು. ಈ ಬಾರಿ 27 ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ.
ಛತ್ತೀಸಗಢದ ಹೊಸ ವಿಧಾನಸಭೆಯಲ್ಲಿ 55 ವರ್ಷ ಮೇಲ್ಪಟ್ಟ ಶಾಸಕರ ಪ್ರಮಾಣ ಶೇ43ರಷ್ಟಿದೆ. 2008ರಲ್ಲಿ ಈ ಪ್ರಮಾಣ ಶೇ 16ರಷ್ಟಿತ್ತು ಹಾಗೂ 2013ರಲ್ಲಿ ಶೇ 29ಕ್ಕೆ ಏರಿಕೆಯಾಗಿ 2018ರಲ್ಲಿ ಶೇ40ರಷ್ಟಿತ್ತು.
ಮಧ್ಯಪ್ರದೇಶದಲ್ಲಿ ಈ ಬಾರಿ ಶೇ 50ರಷ್ಟು ಶಾಸಕರು 55 ವರ್ಷ ಮೇಲ್ಪಟ್ಟವರಾಗಿದ್ದಾರೆ, 2018ರಲ್ಲಿ ಈ ಪ್ರಮಾಣ ಶೇ 38 ಆಗಿತ್ತು.
ರಾಜಸ್ಥಾನದಲ್ಲಿ 2018ರಲ್ಲಿ 55 ವರ್ಷ ಮೇಲ್ಪಟ್ಟ ಶಾಸಕರ ಪ್ರಮಾಣ ಶೇ 48 ಆಗಿದ್ದರೆ ಈ ಬಾರಿ ಶೇ 46 ಆಗಿದೆ.
ತೆಲಂಗಾಣದಲ್ಲಿ 55 ವರ್ಷ ಮೇಲ್ಪಟ್ಟ ಶಾಸಕರ ಪ್ರಮಾಣ ಈ ಬಾರಿ ಶೇ 60 ಆಗಿದ್ದರೆ ಕಳೆದ ಬಾರಿ ಈ ಪ್ರಮಾಣ ಶೇ 39 ಆಗಿದೆ.