HEALTH TIPS

5 States Exit poll: 2 ಕಾಂಗ್ರೆಸ್, 1ರಲ್ಲಿ ಬಿಜೆಪಿ, 3 ಅತಂತ್ರ ವಿಧಾನಸಭೆ

                     ವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಎರಡರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದ್ದು, ಎರಡು ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆಯ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.

ತೆಲಂಗಾಣ

               ತೆಲಂಗಾಣ ಪ್ರತ್ಯೇಕ ರಾಜ್ಯವಾದಾಗಿನಿಂದ 2014ರಿಂದ ಅಧಿಕಾರದಲ್ಲಿರುವ ಬಿಆರ್‌ಎಸ್ ಪಕ್ಷ ಈ ಬಾರಿ ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಚುನಾವಣೆಗೂ ಮುನ್ನ ನಡೆದಿದ್ದ ಕೆಲ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ಅಂದಾಜು ಮಾಡಿದ್ದವು. ಮತಗಟ್ಟೆ ಸಮೀಕ್ಷೆಯಲ್ಲೂ ಚಾಣಾಕ್ಯ, ಟಿವಿ9, ಜನ್ ಕೀ ಬಾತ್ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.                  ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ನೆಕ್ ಟು ನೆಕ್ ಫೈಟ್ ಅಂದಾಜು ಮಾಡಿವೆ.

                  ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. 2018ರ ಚುನಾವಣೆಯಲ್ಲಿ ಇಲ್ಲಿ ಬಿಆರ್‌ಎಸ್ 88 ಕ್ಷೇತ್ರಗಳಲ್ಲಿ ಗೆದ್ದು ಪ್ರಚಂಡ ಬಹುಮತ ಪಡೆದಿತ್ತು. ಕಾಂಗ್ರೆಸ್ 19, ತೆಲುಗು ದೇಶಂ ಪಕ್ಷಗಳು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಆಡಳಿತ ವಿರೋಧಿ ಅಲೆ ಮತ್ತು ಕರ್ನಾಟಕದ ರೀತಿಯೇ ಕಾಂಗ್ರೆಸ್‌ ನೀಡಿರುವ ಗ್ಯಾರಂಟಿಗಳ ಅಲೆ ಜೋರಾಗಿದೆ.

ಛತ್ತೀಸ್‌ಗಢ

                   ಛತ್ತೀಸ್‌ಗಢದ ಒಂಬತ್ತು ಎಕ್ಸಿಟ್ ಪೋಲ್‌ಗಳಲ್ಲಿ ಹಲವು ಭೂಪೇಶ್ ಬಘೇಲ್‌ ನೇತೃತ್ವದ ಕಾಂಗ್ರೆಸ್ ಪಕ್ಷವು ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ. 90 ಸ್ಥಾನಗಳ ರಾಜ್ಯದಲ್ಲಿ ಬಹುಮತಕ್ಕೆ 46 ಸ್ಥಾನ ಗೆಲ್ಲಬೇಕಿದೆ.

ಸಂಸ್ಥೆಗಳುಬಿಜೆಪಿಕಾಂಗ್ರೆಸ್

ಎಬಿಪಿ ನ್ಯೂಸ್- ಸಿ ವೋಟರ್ 36-48 41-53 0-4

ದೈನಿಕ್ ಭಾಸ್ಕರ್ 35-45 46-55 0-10

ಇಂಡಿಯಾ ಟುಡೆ-

ಆಕ್ಸಿಸ್ ಮೈ ಇಂಡಿಯಾ 36-46 40-50 1-5

ಇಂಡಿಯಾ ಟಿ 30-40 46-56 3-5

ಜನ್ ಕಿ ಬಾತ್ 34-45 42-53 3

ಚಾಣಾಕ್ಯ 33 57 0

ರಿಪಬ್ಲಿಕ್ ಟಿವಿ 34-42 44-52 00-02

ಟಿವಿ 9 32-40 48-56 2-4

ಮಧ್ಯಪ್ರದೇಶ

ನೆರೆಯ ಮಧ್ಯಪ್ರದೇಶ, ಕಾಂಗ್ರೆಸ್‌ಗೆ ಕೆಟ್ಟ ಸುದ್ದಿ ಸಿಕ್ಕಿದೆ. ಅದು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸಲು ಸಾಧ್ಯವಾಗದಿರಬಹುದು. ಬಿಜೆಪಿಯ ಮೂರು ಬಾರಿ ಮುಖ್ಯಮಂತ್ರಿಶಿವರಾಜ್ ಸಿಂಗ್ 2018ರ ಚುನಾವಣೆಯಲ್ಲಿ ಬಹುಮತ ಪಡೆಯದೇ ಇದ್ದರೂ ಸಹ 2020ರಲ್ಲಿ ಕಾಂಗ್ರೆಸ್‌ನ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ 20 ಪ್ಲಸ್ ಬೆಂಬಲಿಗರು ಬಿಜೆಪಿ ಸೇರಿದ್ದರಿಂದ ಅಧಿಕಾರಕ್ಕೆ ಏರಿದ್ದರು.

ನ್ಯೂಸ್ 24-ಟುಡೇಸ್ ಚಾಣಕ್ಯ ರಾಜ್ಯದ 230 ಸ್ಥಾನಗಳಲ್ಲಿ ಬಿಜೆಪಿಗೆ 151 ಮತ್ತು ಕಾಂಗ್ರೆಸ್ 74 ಸ್ಥಾನಗಳನ್ನು ನೀಡಿದೆ. ಇತರೆ ಸಮೀಕ್ಷೆ ಎರಡೂ ಪಕ್ಷಗಳ ನಡುವೆ ನಿಕಟ ಸ್ಪರ್ಧೆಯನ್ನು ಅಂದಾಜಿಸಿವೆ.

2004ರಿಂದ ರಾಜ್ಯವನ್ನು ಬಹುಮಟ್ಟಿಗೆ ಆಳಿದ ಬಿಜೆಪಿಯ ವಿರುದ್ಧ ಆಡಳಿತ ವಿರೋಧಿ ಅಲೆಗಳ ನಡುವೆ ಈ ಚುನಾವಣೆ ನಡೆಯಿತು.

ಸಂಸ್ಥೆಗಳು ಬಿಜೆಪಿ ಕಾಂಗ್ರೆಸ್ ಬಿಎಸ್‌ಪಿ+ ಇತರರು

ದೈನಿಕ್ ಭಾಸ್ಕರ್ 95-115 105-120 0 0-15

ಇಂಡಿಯಾ ಟುಡೇ 140-162 68-90 0-2 0-1

ಇಂಡಿಯಾ ಟಿವಿ 140-159 70-89 0 0-2

ಜನ್ ಕಿ ಬಾತ್ 100-123 102-125 0 5

ಚಾಣಾಕ್ಯ 151 74 0 5

ರಿಪಬ್ಲಿಕ್ ಟಿವಿ 118-130 97-107 0 0-2

ಟೈಮ್ಸ್ ನೌ 105-117 109-12 0 1-5

TV 9 106-116 111-121 0 0-6

ರಾಜಸ್ಥಾನ

90ರ ದಶಕದ ಆರಂಭದಿಂದಲೂ ವಾಡಿಕೆಯಂತೆ ಅಧಿಕಾರದಲ್ಲಿರುವವರನ್ನು ಹೊರಗಿಡುವ ರಾಜಸ್ತಾದಲ್ಲಿ ಈ ಬಾರಿಯೂ ಅದು ನಿಜವಾಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರ ಕಳೆದುಕೊಂಡು ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂಬುದು ಸಮೀಕ್ಷೆಗಳ ತಿರುಲು.

ಒಂಬತ್ತು ಎಕ್ಸಿಟ್ ಪೋಲ್‌ಗಳ ಪೈಕಿ ಏಳು ಸಮೀಕ್ಷೆಗಳು ಬಿಜೆಪಿಗೆ ಅಧಿಕಾರ ಸಿಗಲಿದೆ ಭವಿಷ್ಯ ನುಡಿದಿವೆ. ಕೇವಲ ಎರಡು ಮಾತ್ರ ಕಾಂಗ್ರೆಸ್‌ಗೆ ಅಧಿಕಾರ ಸಿಗಲಿದೆ ಎಂದು ಹೇಳಿವೆ.

200 ಸದಸ್ಯ ಬಲದ ಸದನದಲ್ಲಿ ಬಿಜೆಪಿಯು 100ಕ್ಕಿಂತ ಹೆಚ್ಚಿನ ಗಳಿಸಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ನಿರೀಕ್ಷಿಸಿವೆ. ಮ್ಯಾಜಿಕ್ ನಂಬರ್ 101 ಆಗಿದೆ.

ಸಂಸ್ಥೆ ಬಿಜೆಪಿ ಕಾಂಗ್ರೆಸ್ ಬಿಎಸ್‌ಪಿ ಇತರರು

ಎಬಿಪಿ ನ್ಯೂಸ್-ಸಿ ವೋಟರ್ 94-114 71-91 0 9-19

ದೈನಿಕ್ ಭಾಸ್ಕರ್ 98-105 85-95 0 10-15

ಇಂಡಿಯಾ ಟುಡೆ 80-100 86-106 1-2 8-16

ಇಂಡಿಯಾ ಟಿವಿ 80-90 94-104 0 14-18

ಜನ ಕಿ ಬಾತ್ 100-122 62-85 0 14-15

ಚಾಣಾಕ್ಯ 89 101 0 9

ಪಿ ಮಾರ್ಕ್ 105-125 69-91 0 5-15

ರಿಪಬ್ಲಿಕ್ ಟಿವಿ 115-130 65-75 0 12-19

ಟೈಮ್ಸ್ ನೌ 108-128 56-72 0 13-21

ಟಿವಿ 9 100-110 90-100 0 05-15

ಮಿಜೋರಾಂ

ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ಜೆಡ್‌ಪಿಎಂ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ಕಂಡ ಮಿಜೋರಾಂ ರಾಜ್ಯದ ಮತಗಟ್ಟೆ ಸಮಕ್ಷೆ ಹೊರಬಿದ್ದಿದ್ದು, ಅತಂತ್ರ ವಿದಾನಸಭೆಯ ಸೂಚನೆ ಸಿಕ್ಕಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ 21 ಸ್ಥಾನ ಪಡೆದವರು ಅಧಿಕಾರದ ಗದ್ದುಗೆ ಏರುತ್ತಾರೆ.

ಮಿಜೋರಾಂನ ಮಿಜೋ ನ್ಯಾಷನಲ್ ಫ್ರಂಟ್‌ ಗರಿಷ್ಠ ಸ್ಥಾನಗಳನ್ನು ಪಡೆಯಲಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. ಆದರೆ, ಅಧಿಕಾರದ ಗದ್ದುಗೆ ಏರಲು ಬೇಕಿರುವ 21 ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಅಂದಾಜಿಸಿದೆ.

ಸಂಸ್ಥೆ ಎಂಎನ್‌ಎಫ್ ಜೆಡ್‌ಪಿಎಂ ಕಾಂಗ್ರೆಸ್ ಬಿಜೆಪಿ

ಎಬಿ‍ಪಿ-ಸಿವೋಟರ್ 15-21 12-18 2-8 0

ಇಂಡಿಯಾ ಟಿವಿ 14-18 12-16 8-10 0-2

ಜನ್ ಕಿ ಬಾತ್ 10-14 15-25 5-9 0-2

ರಿ‍ಪಬ್ಲಿಕ್ 17-22 7-12 7-10 1-2

ಟೈಮ್ಸ್ ನೌ 14-18 10-14 9-13 0-2


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries