ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದ ಚುನಾವಣಾ ಆಯೋಗವು ಸುಮಾರು ₹1,766 ಕೋಟಿ ಮೌಲ್ಯದ ಉಡುಗೊರೆಗಳು, ಮಾದಕ ವಸ್ತು, ನಗದು ಮತ್ತು ಮದ್ಯವನ್ನು ವಶಕ್ಕೆ ಪಡೆದಿದೆ.

ಚುನಾವಣೆಯನ್ನು ನ್ಯಾಯಬದ್ಧವಾಗಿ, ಪಾರದರ್ಶಕವಾಗಿ ನಡೆಸುವ ಸಲುವಾಗಿ ಚುನಾವಣಾ ಆಯೋಗವು ಹಲವಾರು ವಿಚಾರಗಳಲ್ಲಿ ಕಟ್ಟೆಚ್ಚರ ವಹಿಸಿತ್ತು. ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಕೈಗೊಂಡ ಕೆಲ ಮಹತ್ವದ ಕ್ರಮಗಳನ್ನೂ ಕೈಗೊಂಡಿತ್ತು.
ಪ್ರಸ್ತಾವಿತ 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯನ್ನು ಚುನಾವಣೆ ಘೋಷಣೆಯಾಗಿರುವ ಐದು ರಾಜ್ಯಗಳಲ್ಲಿ ಡಿಸೆಂಬರ್ 5ರ ವರೆಗೆ ನಡೆಸುವಂತಿಲ್ಲ ಎಂದು ಆಯೋಗವು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.