ಕೊಲ್ಲಂ: ಆರು ವರ್ಷದ ಬಾಲಕಿ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಪದ್ಮಕುಮಾರ್ ಪುತ್ರಿ ಅನುಪಮಾ ಪದ್ಮನ್ ಯೂಟ್ಯೂಬ್ ಸ್ಟಾರ್ ಆಗಿರುವ ವ್ಯಕ್ತಿಯಾಗಿದ್ದು, ಹಲವು ಅಚ್ಚರಿಗೂ ಕಾರಣವಾಗಿದೆ. ಅವರಿಗೆ ಐದು ಲಕ್ಷ ಫಾಲೋವರ್ಸ್ ಇದ್ದಾರೆ ಎಂದು ತಿಳಿದುಬಂದಿದೆ.
ಅನುಪಮಾ ಅವರ ಮಾಸಿಕ ಆದಾಯ ಮೂರೂವರೆ ಲಕ್ಷದಿಂದ ಐದು ಲಕ್ಷ ರೂ. ವರೆಗಿದೆ. ಆದರೆ ಇತ್ತೀಚೆಗೆ ಈ ಆದಾಯ ಯಾವುದೋ ಕಾರಣದಿಂದ ನಿಂತು ಹೋಗಿದೆ.ಇದರೊಂದಿಗೆ ಈಕೆಯೂ ಕಿಡ್ನಾಪ್ ಪ್ಲಾನ್ ನಲ್ಲಿ ಭಾಗಿಯಾದಳೆಂದು ತಿಳಿದುಬಂದಿದೆ.
ಅನುಪಮಾ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮುಗಿಸಿರಲಿಲ್ಲ. ಸುಲಲಿತವಾಗಿ ಇಂಗ್ಲೀಷ್ ಮಾತನಾಡಬಲ್ಲವಳಾಗಿದ್ದು, ಕಾನೂನು ಕಲಿಯಲು ಆಸಕ್ತಿ ಹೊಂದಿದ್ದಳೆಂದು ತನಿಖೆ ವೇಳೆ ತಿಳಿದುಬಂದಿದೆ.