ಕಾಸರಗೋಡು: ಕೇಂದ್ರ ರಾಜ್ಯ ಸಾಕ್ಷರತಾ ಯೋಜನೆಯಾದ ಉಲ್ಲಾಸ್ ಯೋಜನೆಯ ಅಂಗವಾಗಿ ನಡೆಸಿದ ಹಿರಿಮೆ ಉತ್ಸವದ ಮೂಲಕ ಜಿಲ್ಲೆಯಲ್ಲಿ 5003 ಜನರು ಸಾಕ್ಷರತಾ ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯಲ್ಲಿ 364 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 5003 ರಲ್ಲಿ 4530 ಮಹಿಳೆಯರು ಮತ್ತು 473 ಪುರುಷ ಪರೀಕ್ಷಾರ್ಥಿಗಳಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ವರ್ಗ 896, ಪರಿಶಿಷ್ಟ ಪಂಗಡ ವರ್ಗ 590, ವಿಕಲಚೇತನ ವರ್ಗ 84. ಆನ್‍ಲೈನ್ ಸಾಕ್ಷರತಾ ಸಮೀಕ್ಷೆ ಮೂಲಕ ಗುರುತಿಸಲಾದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ತ್ರಿಕರಿಪುರ ಪಂಚಾಯಿತಿಯ 85 ವರ್ಷದ ಜಾನಕಿ ಅತ್ಯಂತ ಹಿರಿಯ ಪರೀಕ್ಷಾರ್ಥಿಯಾಗಿದ್ದರೆ, ಕುತ್ತಿಕ್ಕೋಲ್ ಪಂಚಾಯಿತಿಯ 22 ವರ್ಷದ ಸವಿತ್ ಕಿರಿಯ ಕಲಿಕಾದಾರರಾಗಿದ್ದರು. 1208 ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆದಿದ್ದಾರೆ. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ಮಾತನಾಡಿ, ಜಿಲ್ಲೆಯಲ್ಲಿ ಉಳಿದಿರುವ ಅನಕ್ಷರಸ್ಥರನ್ನು ಪತ್ತೆ ಹಚ್ಚಿ ಮುಂದಿನ ಮಾರ್ಚ್‍ನಲ್ಲಿ ಪರೀಕ್ಷೆ ಬರೆಯುವ ಮೂಲಕ ಸಾಕ್ಷರರನ್ನಾಗಿಸುವ ಮೂಲಕ ಆಸಕ್ತರೆಲ್ಲರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.