HEALTH TIPS

ಕಾಶ್ಮೀರ: ಭಯೋತ್ಪಾದನೆ ಸಂಬಂಧಿತ ಸಾವು ಶೇ 50ರಷ್ಟು ಇಳಿಕೆ

               ಶ್ರೀನಗರ: ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಸಾಲಿನಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ನಾಗರಿಕರು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿಯ ಸಾವಿನ ಪ್ರಮಾಣದಲ್ಲಿ ಶೇ 50ರಷ್ಟು ಇಳಿಕೆ ಕಂಡುಬಂದಿದೆ ಎಂದು ಅಧಿಕೃತ ದತ್ತಾಂಶಗಳು ಹೇಳುತ್ತವೆ.

              ಕಳೆದ ವರ್ಷ 31 ನಾಗರಿಕರು ಹಾಗೂ 32 ಯೋಧರು ಸೇರಿದಂತೆ 63 ಮಂದಿ ಮೃತಪಟ್ಟಿದ್ದರು.

ಈ ವರ್ಷ, ನವೆಂಬರ್‌ ವರೆಗಿನ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 33. ಇದರಲ್ಲಿ ನಾಗರಿಕರ ಸಂಖ್ಯೆ 13 ಹಾಗೂ ಯೋಧರ ಸಂಖ್ಯೆ 20 ಎಂದು ಅಂಕಿ-ಅಂಶಗಳನ್ನು ಉಲ್ಲೇಖಿಸಿ ಮೂಲಗಳು ಹೇಳಿವೆ.

ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರದ ದಿನಗಳಲ್ಲಿ ಭಯೋತ್ಪಾದಕ ಕೃತ್ಯಗಳಿಂದಾಗಿ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿರುವುದನ್ನು ಈ ದತ್ತಾಂಶಗಳು ಹೇಳುತ್ತವೆ ಎಂದು ಮೂಲಗಳು ತಿಳಿಸಿವೆ.

                   '2017ರಿಂದ 2019ರ ವರೆಗಿನ ಅವಧಿಯಲ್ಲಿ, ಎನ್‌ಕೌಂಟರ್‌ ನಡೆಯುತ್ತಿದ್ದ ಸ್ಥಳಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರ ಸಾವುಗಳು ಸಂಭವಿಸುತ್ತಿದ್ದವು. ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಈ ಪ್ರಮಾಣ ಹೆಚ್ಚಿತ್ತು' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

              'ಉಗ್ರರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದ ಬಹುತೇಕ ಸಂದರ್ಭಗಳಲ್ಲಿ, ಜನರು ಘಟನಾ ಸ್ಥಳಗಳತ್ತ ಓಡಿ ಬರುತ್ತಿದ್ದರು. ಸಿಲುಕಿ ಹಾಕಿಕೊಂಡಿರುತ್ತಿದ್ದ ಉಗ್ರರು ಪಾರಾಗಲು ನೆರವಾಗುವ ಉದ್ದೇಶದಿಂದ ಜನರು ಹೀಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ, ಭದ್ರತಾಪಡೆಗಳು ನಡೆಸುತ್ತಿದ್ದ ಪ್ರತಿದಾಳಿಯಲ್ಲಿ ನಾಗರಿಕರೂ ಸಾವನ್ನಪ್ಪುತ್ತಿದ್ದರು' ಎಂದು ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ.

            ಆದರೆ, 2019ರ ನಂತರ ಇಂತಹ ಘಟನೆಗಳು ನಡೆಯುತ್ತಿಲ್ಲ. ಹೀಗಾಗಿ ಕಣಿವೆಯಲ್ಲಿನ ಒಟ್ಟಾರೆ ಭದ್ರತಾ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದೂ ಹೇಳಿದ್ದಾರೆ.

                83: 2021ರಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ನಾಗರಿಕರು ಹಾಗೂ ಯೋಧರ ಸಂಖ್ಯೆ

124: 2019ರಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ನಾಗರಿಕರು ಹಾಗೂ ಯೋಧರ ಸಂಖ್ಯೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries