ಅಹಮದಾಬಾದ್: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಉದ್ಘಾಟನೆ ಹಾಗೂ ರಾಮ ಮೂರ್ತಿಯ ಪ್ರತಿಷ್ಠಾಪನೆಗೆ ಜ. 22 ದಿನಾಂಕ ನಿಗದಿಯಾಗಿದೆ. ಇದಕ್ಕೆ 5,500 ಕೆ.ಜಿ.ಯ ಹಿತ್ತಾಳೆಯ ಏಳು ಬೃಹತ್ ಧ್ವಜಸ್ತಂಭ ಸಿದ್ಧತೆ ಭರದಿಂದ ಸಾಗಿದೆ.
ಅಹಮದಾಬಾದ್: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಉದ್ಘಾಟನೆ ಹಾಗೂ ರಾಮ ಮೂರ್ತಿಯ ಪ್ರತಿಷ್ಠಾಪನೆಗೆ ಜ. 22 ದಿನಾಂಕ ನಿಗದಿಯಾಗಿದೆ. ಇದಕ್ಕೆ 5,500 ಕೆ.ಜಿ.ಯ ಹಿತ್ತಾಳೆಯ ಏಳು ಬೃಹತ್ ಧ್ವಜಸ್ತಂಭ ಸಿದ್ಧತೆ ಭರದಿಂದ ಸಾಗಿದೆ.
ರಾಮನ ಮೂರ್ತಿಯ ಪ್ರತಿಷ್ಠಾಪನೆಯ ಆರು ದಿನಗಳ ಬೃಹತ್ ಉತ್ಸವಕ್ಕೆ ಅಯೋಧ್ಯೆ ಸಜ್ಜಾಗುತ್ತಿದೆ. ಸುಮಾರು ಆರು ಸಾವಿರ ಅತಿಥಿಗಳು ಈ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ದೇವಾಲಯದಲ್ಲಿ ಒಟ್ಟು ಏಳು ಧ್ವಜಸ್ತಂಭಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಸಂಸ್ಥೆಯ ನುರಿತ ಕೆಲಸಗಾರರು ತಲ್ಲೀನರಾಗಿದ್ದಾರೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಭರತ್ ಮೇವರಾ ತಿಳಿಸಿದರು.
'ನಮ್ಮ ಕಂಪನಿ ಕಳೆದ 81 ವರ್ಷಗಳಿಂದ ದೇವಾಲಯಗಳಿಗೆ ಧ್ವಜಸ್ತಂಭ ಸಿದ್ಧಪಡಿಸುತ್ತಿದೆ. ಪ್ರತಿಷ್ಠಾಪನೆಗೊಂಡ ಮೂರ್ತಿ ಇರುವ ಗರ್ಭಗುಡಿ ಎದುರು ಇರುವ ಈ ಸ್ತಂಭ ಇಡೀ ಜಗತ್ತಿನ ಶಕ್ತಿಯನ್ನು ಆಕರ್ಷಿಸಲಿದೆ. 44 ಅಡಿ ಎತ್ತರ ಹಾಗೂ 9 ಇಂಚುಗಳ ಅಗಲ ಇರುವ ಈ ಸ್ಥಂಭವನ್ನು 1 ಇಂಚು ದಪ್ಪ ಇರುವ ಹಿತ್ತಾಳೆಯ ತಗಡಿನಿಂದ ಸಿದ್ಧಪಡಿಸಲಾಗಿದೆ' ಎಂದು ವಿವರಿಸಿದರು.
'ಕಳೆದ 81 ವರ್ಷಗಳಲ್ಲಿ 25 ಅಡಿ ಎತ್ತರದ 450 ಕೆ.ಜಿ. ತೂಕದ ಸ್ತಂಭ ಮಾಡಿದ ಅನುಭವ ಇತ್ತು. ಆದರೆ ಈ ಬಾರಿ ದೊಡ್ಡ ಜವಾಬ್ದಾರಿ ಮತ್ತು ಅವಕಾಶ ನಮಗೆ ಸಿಕ್ಕಿದೆ. ಧ್ವಜಸ್ತಂಭ ಮಾತ್ರವಲ್ಲದೇ, ದೇವಾಲಯದ ಮುಖ್ಯ ದ್ವಾರ ಹಾಗೂ ಅದರ ಪರಿಕರಗಳೂ ನಮ್ಮ ಸಂಸ್ಥೆಯಲ್ಲೇ ಸಿದ್ಧಗೊಳ್ಳುತ್ತಿವೆ. ಸುಮಾರು 20 ಜನ ಕುಶಲಕರ್ಮಿಗಳು ಈ ಕಾಯಕದಲ್ಲಿ ತೊಡಗಿದ್ದಾರೆ' ಎಂದು ತಿಳಿಸಿದ್ದಾರೆ.