ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುರಿತ ರ‍್ಯಾಂಕ್‌ಗೆ ಸಂಬಂಧಿಸಿ ಪ್ರಕಟಿಸಲಾಗಿರುವ ಅಂತರರಾಷ್ಟ್ರೀಯ ಖ್ಯಾತಿಯ 'ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ಸಸ್ಟೇನಬಿಲಿಟಿ ರ‍್ಯಾಂಕಿಂಗ್' ಪಟ್ಟಿಯಲ್ಲಿ ಭಾರತದ 56 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುರಿತ ರ‍್ಯಾಂಕ್‌ಗೆ ಸಂಬಂಧಿಸಿ ಪ್ರಕಟಿಸಲಾಗಿರುವ ಅಂತರರಾಷ್ಟ್ರೀಯ ಖ್ಯಾತಿಯ 'ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ಸಸ್ಟೇನಬಿಲಿಟಿ ರ‍್ಯಾಂಕಿಂಗ್' ಪಟ್ಟಿಯಲ್ಲಿ ಭಾರತದ 56 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ಮಂಗಳವಾರ ಈ ಪಟ್ಟಿ ಬಿಡುಗಡೆಯಾಗಿದ್ದು, ಭಾರತೀಯ ವಿ.ವಿ.ಗಳ ಪೈಕಿ ದೆಹಲಿ ವಿಶ್ವವಿದ್ಯಾಲಯ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಐಐಟಿ ಬಾಂಬೆ ಹಾಗೂ ಐಐಟಿ ಮದ್ರಾಸ್ ಸ್ಥಾನ ಪಡೆದಿವೆ.
ವಿಶ್ವ ಮಟ್ಟದಲ್ಲಿ ಟೊರಂಟೊ ವಿಶ್ವವಿದ್ಯಾಲಯ ಅಗ್ರ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹಾಗೂ ಮ್ಯಾಂಚೆಸ್ಟರ್ ವಿ.ವಿ. ಇವೆ.
95 ದೇಶಗಳ ಒಟ್ಟು 1,297 ಉನ್ನತ ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದು, ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಸಂಸ್ಥೆಗಳು ಆಯ್ಕೆಯಾಗಿವೆ.
ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಶ್ಲೇಷಣಾತ್ಮಕ ವರದಿ ಪ್ರಕಟಿಸುವ ಲಂಡನ್ ಮೂಲದ 'ಕ್ಯೂಎಸ್' ಸಂಸ್ಥೆ ನೀಡುವ ರ‍್ಯಾಂಕಿಂಗ್‌ಗೆ ಬಹಳ ಮಹತ್ವ ಇದೆ.
'ಸಾಮಾಜಿಕ, ಪರಿಸರ ಮೇಲಿನ ಪರಿಣಾಮ ಹಾಗೂ ಆಡಳಿತ ಎಂಬ ಮಾನದಂಡಗಳಡಿ ಈ ರ‍್ಯಾಂಕಿಂಗ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕವಾಗಿ ಎದುರಾಗಿರುವ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ವಿಶಿಷ್ಟ ಹಾಗೂ ವಿಸ್ತೃತ ಚೌಕಟ್ಟನ್ನು ಈ ರ‍್ಯಾಂಕಿಂಗ್ ವಿಧಾನ ಒದಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.
'ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಇಂಗಾಲದ ಡೈಆಕ್ಟೈಡ್ ಹೊರಸೂಸುವ ಪ್ರಮಾಣ ಅಧಿಕವಿರುವ ದೇಶಗಳಲ್ಲೊಂದು. 2070ರ ವೇಳೆ ಈ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರುತರ ಸವಾಲು ಭಾರತದ ಹೆಗಲ ಮೇಲಿದೆ. ತಮ್ಮ ಸಂಖ್ಯೆ ಹಾಗೂ ಗುಣಮಟ್ಟ ವಿಸ್ತರಿಸಲು ಮುಂದಾಗಿರುವ ಭಾರತದ ವಿಶ್ವವಿದ್ಯಾಲಯಗಳ ಪಾತ್ರವು ಈ ವಿಚಾರದಲ್ಲಿ ಮಹತ್ವದ್ದಾಗಿದೆ' ಎಂದು ಕ್ಯೂಎಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬೆನ್ ಸೊಟರ್ ಹೇಳಿದ್ದಾರೆ.