ನವದೆಹಲಿ: ಬಾಂಬೆ ಐಐಟಿಯ 1998ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಸಮ್ಮಿಲನದ ಬೆಳ್ಳಿ ಹಬ್ಬದ ಸ್ಮರಣಾರ್ಥ ಸಂಸ್ಥೆಗೆ ₹57 ಕೋಟಿ ಉಡುಗೊರೆಯಾಗಿ ನೀಡಿದ್ದಾರೆ. ತರಗತಿಯೊಂದರ ವಿದ್ಯಾರ್ಥಿಗಳು ನೀಡಿದ ಗರಿಷ್ಠ ಕೊಡುಗೆ ಇದಾಗಿದೆ.
ನವದೆಹಲಿ: ಬಾಂಬೆ ಐಐಟಿಯ 1998ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಸಮ್ಮಿಲನದ ಬೆಳ್ಳಿ ಹಬ್ಬದ ಸ್ಮರಣಾರ್ಥ ಸಂಸ್ಥೆಗೆ ₹57 ಕೋಟಿ ಉಡುಗೊರೆಯಾಗಿ ನೀಡಿದ್ದಾರೆ. ತರಗತಿಯೊಂದರ ವಿದ್ಯಾರ್ಥಿಗಳು ನೀಡಿದ ಗರಿಷ್ಠ ಕೊಡುಗೆ ಇದಾಗಿದೆ.
ಇದಕ್ಕೂ ಮುನ್ನ 1971ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಸಮ್ಮಿಲನದ ಸುವರ್ಣ ಮಹೋತ್ಸವ ಅಂಗವಾಗಿ ಸಂಸ್ಥೆಗೆ ₹41 ಕೋಟಿ ದೇಣಿಗೆ ನೀಡಿದ್ದರು.
'ವೆಕ್ಟರ್ ಕ್ಯಾಪಿಟಲ್ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಬ್ಯಾನರ್ಜಿ, ಕೃತಕ ಬುದ್ಧಿಮತ್ತೆ ಸಂಶೋಧನೆ ಮಾಡುತ್ತಿರುವ ದಿಲೀಪ್ ಜಾರ್ಜ್, ಗ್ರೇಟ್ ಲರ್ನಿಂಗ್ ಸಿಇಒ ಮೋಹನ್ ಲಖಾಮ್‌ರಾಜು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ದೇಣಿಗೆ ನೀಡಿದ್ದಾರೆ' ಎಂದು ವಿದ್ಯಾರ್ಥಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಈ ದೇಣಿಗೆಯು ಬಾಂಬೆ ಐಐಟಿಯ ಬೆಳವಣಿಗೆಗೆ ವೇಗ ನೀಡಲಿದೆ' ಎಂದು ನಿರ್ದೇಶಕ ಸುಭಾಸಿಸ್ ಚೌಧರಿ ತಿಳಿಸಿದ್ದಾರೆ.