ಅಮರಾವತಿ: 'ಮಿಚಾಂಗ್' ಚಂಡಮಾರುತ ಇಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದೆ. ಇದರ ವೇಗ ಗಂಟೆಗೆ 90-100 ಕಿ.ಮೀ ಇದ್ದು, ಕ್ರಮೇಣ 110 ಕಿ.ಮೀ.ಗೆ ಏರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಅಮರಾವತಿ: 'ಮಿಚಾಂಗ್' ಚಂಡಮಾರುತ ಇಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದೆ. ಇದರ ವೇಗ ಗಂಟೆಗೆ 90-100 ಕಿ.ಮೀ ಇದ್ದು, ಕ್ರಮೇಣ 110 ಕಿ.ಮೀ.ಗೆ ಏರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ನಿರಂತರ ಮಳೆಯಿಂದಾಗಿ ತಿರುಪತಿ ಜಿಲ್ಲಾ ಎಲ್ಲಾ 5 ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿರುವ ವಿಡಿಯೊವನ್ನು ಸುದ್ದಿಸಂಸ್ಥೆ 'ಎಎನ್‌ಐ' ಹಂಚಿಕೊಂಡಿದೆ.
'24 ಗಂಟೆಗಳ ಅವಧಿಯಲ್ಲಿ 200 ಮಿ.ಮೀವರೆಗೂ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಂಧ್ರದ ವಿವಿಧೆಡೆ ಸೋಮವಾರವೂ ಭಾರಿ ಮಳೆಯಾಗಿತ್ತು.
ಚಂಡಮಾರುತದ ಪರಿಣಾಮ ನೆಲ್ಲೂರು, ಮಚಲಿಪಟ್ಟಣಂ, ತಿರುಪತಿ, ಪಶ್ಚಿಮ ಗೋದಾವರಿ, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.
ಆಂಧ್ರ ಸಿಎಂ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರು ತುರ್ತು ನಡೆಸಿದ್ದು, ಚಂಡಮಾರುತವನ್ನು ಎದುರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಗಂಟೆಗೆ 100-110 ಕಿ. ಮೀನಷ್ಟು ವೇಗದಲ್ಲಿ ಗಾಳಿ ಬೀಸಲಿದ್ದು, ಬಾಪಟ್ಲಾ ಜಿಲ್ಲೆಯಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಮುಖ್ಯಂಮತ್ರಿಗಳ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ರೀತಿಯ ವಾತಾವರಣ ಡಿ.7ರವರೆಗೂ ಮುಂದುವರಿಯುವ ಸಾಧ್ಯತೆ ಇದೆ, ಬಳಿಕ ಚಂಡಮಾರುತ ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.