HEALTH TIPS

ಕಣ್ಣೂರು ವಿಮಾನ ನಿಲ್ದಾಣಕ್ಕೆ ಇಂದಿಗೆ 5 ವರ್ಷ: ಉತ್ತರ ಮಲಬಾರಿನ ಅಭಿವೃದ್ಧಿಯ ಅಬ್ಬರಕ್ಕೆ ನಾಂದಿ ಹಾಡಬೇಕಿದ್ದ ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನೆಗಳು ನೆನೆಗುದಿಗೆ

              ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣಕ್ಕೆ ಇಂದು  5 ವರ್ಷ. ಆದರೆ ಉತ್ತರ ಮಲಬಾರಿನ ಅಭಿವೃದ್ಧಿಯ ಅಬ್ಬರಕ್ಕೆ ನಾಂದಿ ಹಾಡಬೇಕಿದ್ದ ವಿಮಾನ ನಿಲ್ದಾಣದ ಯೋಜನೆಗಳು ಇನ್ನೂ ಕಾಗದದಲ್ಲಿಯೇ ಉಳಿದಿವೆ.

            ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಎಲ್ಲಿಯೂ ನಡೆದಿಲ್ಲ. ಮಟ್ಟನೂರನ್ನು ವಿಮಾನ ನಿಲ್ದಾಣ ನಗರವನ್ನಾಗಿ ಉತ್ತೇಜಿಸಲು ಘೋಷಿಸಿದ ಅನೇಕ ದೊಡ್ಡ ಉಪಕ್ರಮಗಳು ಪ್ರಾರಂಭವಾಗಲಿಲ್ಲ. ವಿಮಾನ ನಿಲ್ದಾಣವನ್ನು ತಲುಪಲು ಸಾರ್ವಜನಿಕ ಸಾರಿಗೆ ಇಲ್ಲ. ವಿಮಾನ ನಿಲ್ದಾಣ ಪ್ರದೇಶದಲ್ಲಿ ಕಡಿಮೆ ವೆಚ್ಚದ ವಸತಿ ಸೌಕರ್ಯಗಳು ಸಹ ಸೀಮಿತವಾಗಿವೆ. ಕೃಷಿ-ಕೈಗಾರಿಕಾ ಪ್ರವಾಸೋದ್ಯಮ ಕ್ಷೇತ್ರವೂ ಹೆಚ್ಚು ಎಚ್ಚೆತ್ತುಕೊಂಡಿಲ್ಲ.

            2018ರಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಅದಕ್ಕೆ ಸಂಬಂಧಿಸಿದಂತೆ ಘೋಷಿಸಿದ್ದ ಹಲವು ಅಭಿವೃದ್ಧಿ ಕಾರ್ಯಗಳು ಉದ್ಘಾಟನೆಗೆ ಮಾತ್ರ ಸೀಮಿತವಾಗಿವೆ.

             ಕೋವಿಡ್ ಮಹಾಮಾರಿ ಬಂದಿದ್ದರಿಂದ ಎರಡು ವರ್ಷಗಳಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಹಿನ್ನಡೆ ಉಂಟಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಾದವಿದ್ದರೂ, ದುರಾಡಳಿತದಿಂದ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆದಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ರಾಜ್ಯ ಸರ್ಕಾರ ಮತ್ತು ವಿಮಾನ ನಿಲ್ದಾಣ ಕಂಪನಿ ಕೆಐಎಎಲ್ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಇದೆ. 3050 ಮೀಟರ್ ರನ್ ವೇ ಇದೆ. 4000 ಮೀಟರ್ ಮಾಡಲು ಘೋಷಣೆ ಮಾಡಲಾಗಿತ್ತು, ಆದರೆ ಪ್ರಕ್ರಿಯೆ ಸ್ಥಗಿತಗೊಂಡಿದೆ.

            ಕಣ್ಣೂರು ವಿಮಾನ ನಿಲ್ದಾಣವು ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಣ್ಣೂರು ವಿಮಾನ ನಿಲ್ದಾಣವು ಉದ್ದವಾದ ರನ್‍ವೇ, ಏಪ್ರನ್ ಮತ್ತು ದೊಡ್ಡ ವಿಮಾನಗಳಿಗಾಗಿ ವಿಶಾಲವಾದ ಟರ್ಮಿನಲ್ ಕಟ್ಟಡವನ್ನು ಹೊಂದಿದೆ. ಆದರೆ ಕಡಿಮೆ ಸಂಖ್ಯೆಯ ವಿಮಾನಗಳು ಮತ್ತು ಪ್ರಯಾಣಿಕರ ಕಾರಣ, ಅರ್ಧದಷ್ಟು ಸೌಲಭ್ಯಗಳು ಇನ್ನೂ ಬಳಕೆಯಾಗಿಲ್ಲ.

           ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬ್ಯುಸಿನೆಸ್ ಕ್ಲಾಸ್ ಹೋಟೆಲ್, ಸ್ಪೆಷಾಲಿಟಿ ಆಸ್ಪತ್ರೆ, ವಿಮಾನ ನಿರ್ವಹಣಾ ಕೇಂದ್ರದ ಘೋಷಣೆಗಳಿದ್ದರೂ ಇವೆಲ್ಲ ನಿಜವಾಗುವುದೇ ಎಂಬುದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಜಾಗೃತಿ ಮೂಡುವ ಭರವಸೆ ಇತ್ತು, ಆದರೆ ಕೋವಿಡ್ ಬಿಕ್ಕಟ್ಟಿನ ನಂತರವೂ ಅಭಿವೃದ್ಧಿ ಚಟುವಟಿಕೆಗಳು ಮುಂದುವರಿಯಲಿಲ್ಲ.

               ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಅಭಿವೃದ್ಧಿ ಪಡಿಸುತ್ತಿರುವ 6 ರಸ್ತೆಗಳ ಕಾಮಗಾರಿ ಗಡಿ ಕಲ್ಲು ಹಾಕುವುದಕ್ಕμÉ್ಟೀ ಸೀಮಿತವಾಗಿದೆ. ಕೆಎಸ್‍ಆರ್‍ಟಿಸಿ ಕಣ್ಣೂರು, ತಲಶ್ಶೇರಿ, ಇರಿಟ್ಟಿ ಮತ್ತು ಕೋಯಿಕ್ಕೋಡ್‍ನಂತಹ ಪಟ್ಟಣಗಳನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಸೇವೆಯನ್ನು ನಡೆಸಿತು, ಆದರೆ ಕೋವಿಡ್‍ನಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಪ್ರಯಾಣಿಕರ ಕೊರತೆಯಿಂದ ಸೇವೆ ಸ್ಥಗಿತಗೊಳಿಸಲಾಗಿತ್ತು. ಹೊಸ ಸೇವೆ ಆರಂಭಿಸಲು ಅಧಿಕಾರಿಗಳು ಇನ್ನೂ ಕ್ರಮ ಕೈಗೊಂಡಿಲ್ಲ.

              ಮಟ್ಟನೂರನ್ನು ಅಂತರಾಷ್ಟ್ರೀಯ ನಗರವನ್ನಾಗಿ ಮಾಡುವ ಯೋಜನೆಯೂ ಅರ್ಧಕ್ಕೆ ನಿಂತಿದೆ. 140 ಕೋಟಿ ರೂ.ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳಿರುವ ಸಮಾವೇಶ ಕೇಂದ್ರಕ್ಕೆ ತಿಂಗಳ ಹಿಂದೆಯೇ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದರೂ ಯೋಜನೆಯ ಮುಂದಿನ ಕಾಮಗಾರಿ ಫಲಕಾರಿಯಾಗಿಲ್ಲ. ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಹೇಳಿಕೆಗಳು ಕೇಳಿ ಬರುತ್ತಿದ್ದು, 5 ವರ್ಷ ಕಳೆದರೂ ಅಭಿವೃದ್ಧಿ ವಿಚಾರದಲ್ಲಿ ಒಂದೂ ಹೆಜ್ಜೆ ಇಡದ ಸ್ಥಿತಿ ನಿರ್ಮಾಣವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries