ತಿರುವನಂತಪುರಂ: ಕೇರಳ ವಿಶ್ವವಿದ್ಯಾಲಯ ಶುಕ್ರವಾರ ನಡೆಸಿದ್ದ 5ನೇ ಸೆಮಿಸ್ಟರ್ ಬಿಎ ಇತಿಹಾಸ ಪರೀಕ್ಷೆಯನ್ನು ರದ್ದುಗೊಳಿಸಿದೆ. ಕಳೆದ ವರ್ಷದ ಪ್ರಶ್ನೆ ಪತ್ರಿಕೆ ಪುನರಾವರ್ತನೆಯಾದ ಕಾರಣ ಶುಕ್ರವಾರ ನಡೆದ 5ನೇ ಸೆಮಿಸ್ಟರ್ ಬಿಎ ಇತಿಹಾಸದ ಪತ್ರಿಕೆಯಾದ ‘ಹಿಸ್ಟೋರಿಯೋಗ್ರಫಿಯ ಪ್ರಮುಖ ಟ್ರೆಂಡ್ಸ್’ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು.
ಇದರ ಬೆನ್ನಲ್ಲೇ ಡಿ.11 ಮತ್ತು 13ರಂದು ನಡೆಯಬೇಕಿದ್ದ ಬಿಎ ಇತಿಹಾಸ 5ನೇ ಸೆಮಿಸ್ಟರ್‍ನ ಇತರೆ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರಿಷ್ಕøತ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
ಪರೀಕ್ಷೆ ಮುಗಿದ ನಂತರ ಈ ಬಾರಿಯೂ ಕಳೆದ ವರ್ಷದ ಪ್ರಶ್ನೆಪತ್ರಿಕೆ ಪುನರಾವರ್ತನೆಯಾಗಿದೆ ಎಂಬ ಮಾಹಿತಿಯನ್ನು ಪರೀಕ್ಷಾ ನಿಯಂತ್ರಕರು ಕಾಲೇಜುಗಳಿಂದ ಪಡೆದರು. ಈ ಕುರಿತು ಉಪಕುಲಪತಿಗಳಿಗೆ ಮಾಹಿತಿ ನೀಡಿದ ಬಳಿಕ ಪರೀಕ್ಷೆ ರದ್ದುಗೊಳಿಸುವಂತೆ ಸೂಚಿಸಿದರು. 11 ಮತ್ತು 13ರಂದು ನಡೆಯಲಿರುವ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಈ ತಪ್ಪು ಪುನರಾವರ್ತನೆಯಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆಯೂ ವಿಸಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ.
ಪ್ರಶ್ನೆಪತ್ರಿಕೆ ತಯಾರಿಕೆ ಮತ್ತು ಪರೀಕ್ಷೆಯಲ್ಲಿನ ತಪ್ಪಿನಿಂದಾಗಿ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಯನ್ನು ಬಳಸಿಕೊಂಡು ಪರೀಕ್ಷೆಯನ್ನು ಮರು ನಡೆಸಲು ಕಾರಣವಾಯಿತು ಎಂದು ವಿಶ್ವವಿದ್ಯಾಲಯ ವಿವರಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ವಿಫಲರಾದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.