ಕೆಲವೊಂದು ಆಹಾರಗಳನ್ನು ಸೇವಿಸಿದಾಗ ತಿಂದ ತಕ್ಷಣ ನೀರು ಕುಡಿಯಬಾರದು, ಹಾಗೆ ಮಾಡಿದರೆ ಹೊಟ್ಟೆ ಉಬ್ಬಿದಂತಾಗುವುದು, ಗ್ಯಾಸ್ ಸಮಸ್ಯೆ, ಅಜೀರ್ಣೀ ಬಗೆಯ ಸಮಸ್ಯೆ ಕಂಡು ಬರುವುದು.
ಆದ್ದರಿಂದ ಕೆಲವೊಂದು ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬಾರದು. ನಮಗೆ ಗೊತ್ತಿದ್ದು-ಗೊತ್ತಿಲ್ಲದೆ ಈ ತಪ್ಪು ಮಾಡುತ್ತಿರುತ್ತೇವೆ, ಅದರಲ್ಲೂ ಇಲ್ಲಿ ನೀಡಿರುವ ಆಹಾರಗಳ ಜೊತೆಗೆ ನಾವು ಆಹಾರವನ್ನು ಸೇವಿಸಿಯೇ ಸೇವಿಸುತ್ತೇವೆ, ಇನ್ನು ಮುಂದೆ ಆ ತಪ್ಪುಗಳನ್ನು ಮಾಡದಿರಿಈ ಆಹಾರಗಳು ಆರೋಗ್ಯಕರವಾದ ಆಹಾರವೇ ಆಗಿದ್ದರೂ ನೀರು ಹಾಗೂ ಈ ಆಹಾರವನ್ನು ಜೊತೆಯಾಗಿ ಸೇವಿಸಿದರೆ ಖಂಡಿತ ಆರೋಗ್ಯ ಸಮಸ್ಯೆ ಉಂಟಾಗುವುದು:
ಬಾಳೆಹಣ್ಣು ಬಾಳೆಹಣ್ಣಿನಲ್ಲಿ ನಾರಿನಂಶವಿದೆ. ಇದರ ಜೊತೆಗೆ ನೀರು ಕೂಡ ಕುಡಿದರೆ ಅಜೀರ್ಣ ಸಮಸ್ಯೆ ಉಂಟಾಗುವುದು, ಜೀರ್ಣಕ್ರಿಯೆ ತುಂಬಾ ನಿಧಾನವಾಗುವುದು, ಇದರಿಂದ ಗ್ಯಾಸ್ಟ್ರಿಕ್, ಹೊಟ್ಟೆನೋವು ಈ ಬಗೆಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ. ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ಬಿಡಿ, ಇದುವೇ ನಿಮ್ಮಲ್ಲಿ ಅಸ್ವಸ್ಥಕ್ಕೆ ಕಾರಣವಾಗಬಹುದು.
ಮೊಸರು ಮೊಸರು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಪ್ರೊಬಯೋಟಿಕ್ ಅಂಶವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಆದರೆ ಮೊಸರು ತಿಂದ ತಕ್ಷಣ ನೀರು ಕುಡಿದರೆ ಅದರಲ್ಲಿರುವ ಪ್ರೊಬಯೋಟಿಕ್ ಅಂಶ ವ್ಯರ್ಥವಾಗುವುದು. ಆದರೆ ಆಹಾರ ಸೇವಿಸುವಾಗ ಮೊಸರು ಸೇವಿಸಿ, ತಕ್ಷಣವೇ ನೀರು ಕುಡಿಯಬೇಡಿ, ಮೊಸರು ಸೇವಿಸಿ ಕನಿಷ್ಠ ಅರ್ಧ ಗಂಟೆಯಾದರೂ ಗ್ಯಾಪ್ ನೀಡಿ, ಹೀಗೆ ಮಾಡುವುದರಿಂದ ಮೊಸರಿನಲ್ಲಿರುವ ಪ್ರೀಬಯೋಟಿಕ್ ನಿಮ್ಮ ದೇಹವನ್ನು ಸೇರುವುದು. ಪ್ರೀಬಯೋಟಿಕ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಸಿಟ್ರಸ್ ಹಣ್ಣುಗಳು ಕಿತ್ತಳೆ, ದ್ರಾಕ್ಷಿ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ನಿರಿನಂಶ ಕೂಡ ಇರುತ್ತದೆ, ಆದ್ದರಿಂದ ಇವುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಕಾದ ಅಗ್ಯತವಿಲ್ಲ. ಒಂದು ವೇಳೆ ಸಿಟ್ರಸ್ ಹಣ್ಣುಗಳನ್ನು ತಿಂದಾಗ ಅದರ ಜೊತೆಗೆ ನೀರು ಕುಡಿದರೆ ಇದರಿಂದ ತೊಂದರೆ ಉಂಟಾಗುವುದು. ನೀವು ಈ ಹಣ್ಣುಗಳನ್ನು ತಿಂದಾದ ಮೇಲೆ ಕನಿಷ್ಠ ಒಂದು ಗಂಟೆಯ ನಂತರ ನೀರು ಕುಡಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನೀವು ಹಣ್ಣುಗಳನ್ನು ಆಹಾರ ತಿಂದ ತಕ್ಷಣವೇ ಸೇವಿಸಿಬೇಡಿ, ಕನಿಷ್ಠ ಒಂದು ಗಂಟೆ ಬಿಟ್ಟು ತಿಂದರೆ ಹಣ್ಣಿನಲ್ಲಿರುವ ಪೋಷಕಾಂಶ ನಿಮ್ಮ ದೇಹವನ್ನು ಸೇರುವುದು ಅನ್ನ ಅನ್ನ ತಿನ್ನುವಾಗ ಅದರ ಜೊತೆಗೆ ನೀರು ಕುಡಿಯುವ ಅಭ್ಯಾಸ ತುಂಬಾ ಜನರಿಗಿದೆ, ಆದರೆ ಇದು ಆರೋಗ್ಯಕರವಾದ ಅಭ್ಯಾಸವಿಲ್ಲ, ನೀವು ಆಹಾರ ಸೇವಿಸಿದ ಮೇಲೆ ಕನಿಷ್ಠ 15 ನಿಮಿಷವಾದರೂ ಗ್ಯಾಪ್ ನೀಡಿ, ನಂತರವಷ್ಟೇ ನೀರು ಕುಡಿದರೆ ಒಳ್ಳೆಯದು. ಅನ್ನದ ಆಹಾರ ಯಾವುದೇ ಆಗಿರಲಿ ಪಲಾವ್, ಚಿತ್ರಾನ್, ಪುಳಿಯೊಗರೆ ಹೀಗೆ ಯಾವುದೇ ಬಗೆಯ ಆಹಾರವಾಗಲಿ ನೀವು ಅವುಗಳ ಜೊತೆಗೆ ನೀರು ಸೇವಿಸಬೇಡಿ. ಆಹಾರ ತಿಂದ ಮೇಲೆ ಸ್ವಲ್ಪ ಹೊತ್ತು ನೀರು ಕುಡಿಯಿರಿ.

ಮಸಾಲೆ ಪದಾರ್ಥ ನಾವು ಸ್ವಲ್ಪ ಖಾರವಾದರೆ ನೀರು ಕುಡಿಯುತ್ತೇವೆ, ಆದರೆ ಮಸಾಲೆ ಹಾಕಿದ ಆಹಾರ ಸೇವಿಸುವಾಗ ಜೊತೆ-ಜೊತೆಯಲ್ಲಿಯೇ ನೀರು ಕುಡಿಯಬಾರದು. ನೀವು ಖಾರ ಅನಿಸಿ ನೀರು ಕುಡಿದಾಗ ಉರಿ ಸ್ವಲ್ಪ ಹೆಚ್ಚಾಗುವುದು. ಈ ರೀತಿ ಖಾರ ಅನಿಸಿದಾಗ ನೀವು ಮೊಸರು ಅಥವಾ ಹಾಲು ಸೇವಿಸಿ. ಖಾರ ಅನಿಸಿದಾಗ ನೀರು ಕುಡಿದರೆ ನಾಲಗೆಯಲ್ಲಿ ಖಾರ ಹೆಚ್ಚಾಗುವುದು.