HEALTH TIPS

ಹೊಸ ವರ್ಷದಲ್ಲಿ ಆಧಾರ್ ಸೇರಿ ಈ 5 ಬದಲಾವಣೆಯಾಗಲಿದೆ, ಈ ಮಾಹಿತಿ ತಿಳಿದಿದ್ದರೆ ಒಳ್ಳೆಯದು

 ಹೊಸ ವರ್ಷ ನಮ್ಮ-ನಿಮ್ಮೆಲ್ಲರ ಜೀವನದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳನ್ನು ತರಲಿ ಎಂಬುವುದೇ ಪ್ರತಿಯೊಬ್ಬರ ಆಶಯ. ಮುಂದೆ ಏನೆಲ್ಲಾ ಬದಲಾವಣೆಯಾಗುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಬದಲಾವಣೆ ಖಂಡಿತ ಆಗಲಿದೆ. ಈ ಬದಲಾವಣೆ ಬಗ್ಗೆ ನೀವು ತಿಳಿದರಲೇಬೇಕು, ಆ ಬದಲಾವಣೆಗಳೇನು ಎಂದು ನೋಡೋಣ ಬನ್ನಿ:

ಡೀಮಾಟ್‌ ನಾಮಿನೇಷನ್
ಸ್ಟಾಕ್‌ ಮಾರ್ಕೆಟಿಂಗ್‌ನಲ್ಲಿ ತೊಡಗಿರುವವರಿಗೆ ಇದು ತುಂಬಾ ಮುಖ್ಯವಾಗಿದೆ. SEBI ಜನವರಿ 1 2024ರೊಳಗೆ ಡೀಮಾಟ್‌ ಅಕೌಂಟ್‌ ಹೊಂದಿರುವವರಿಗೆ ನಾಮಿನೇಷನ್‌ಗೆ ಹೆಸರು ಸೇರಿಸಲು, ನಾಮಿನೇಷನ್‌ನಿಂದ ಹೆಸರು ತೆಗೆಯಲು ಹೇಳಿದರೆ, ಇದನ್ನು ಮಾಡದವರಿಗೆ ಸ್ಟಾಕ್‌ನಲ್ಲಿ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್‌ ಲಾಕರ್ ಅಗ್ರಿಮೆಂಟ್‌

ಬ್ಯಾಂಕ್‌ ಲಾಕರ್ ಅಗ್ರಿಮೆಂಟ್‌ ಜನವರಿ 1, 2024ರಿಂದ ಬದಲಾಗಲಿದೆ. ಆರ್‌ಬಿಐ ಬ್ಯಾಂಕ್‌ ಲಾಕರ್ ರಿವೈಸ್ ಮಾಡಲು ಡಿಸೆಂಬರ್ 31, 2023 ಗಡುವು ನೀಡಿದೆ, ಈ ರೀತಿ ಮಾಡದೆ ಇದ್ದರೆ ಆ ಲಾಕರ್ ಫ್ರೋಜ್ ಆಗಲಿದೆ. ಈ ಕುರಿತು ಬ್ಯಾಂಕ್‌ ಗ್ರಾಹಕರು ಗಮನಹರಿಸಬೇಕು.

ಆಧಾರ್‌ ಅಪ್‌ಡೇಟ್‌ಗೆ ಗಡುವು
ಆಧಾರ್‌ಗೆ ಕಾರ್ಡ್‌ನಲ್ಲಿ ಏನಾದರೂ ಮಾಹಿತಿ ಬದಲಾವಣೆ ಫ್ರೀ ಆಗಿ ಮಾಡಲು ಡಿಸೆಂಬರ್‌ 31 ಗಡುವು ನೀಡಿದೆ, ಜನವರಿ 1, 2024ರ ನಂತರ 50 ರುಪಾಯಿ ಪಾವತಿಸಬೇಕಾಗುವುದು.

ಸಿಮ್‌ ಕಾರ್ಡ್‌ಗೆ ಯಾವುದೇ ಪೇಪರ್ KYC ಇರಲ್ಲ
2024ರಿಂದ ಸಿಮ್‌ ಕಾರ್ಡ್‌ ಖರೀದುವಾಗ ಆನ್‌ಲೈನ್‌ ಮುಖಾಂತರ KYC ಸಲ್ಲಿಸಲಾಗುವುದು, ಯಾವುದೇ ಪೇಪರ್ KYC ಇರಲ್ಲ.

ಕೆನಡಾಕ್ಕೆ ಹೋಗಬೇಕೆಂದರೆ ದುಪ್ಪಟ್ಟು ಹಣ ಬೇಕಾಗುವುದು ಭಾರತದಿಂದ ತುಂಬಾ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಕೆನಡಾಕ್ಕೆ ಹೋಗಲು ಬಯಸುತ್ತಾರೆ . ಎಜುಕೇಷನ್ ಲೋನ್‌ ತೆಗೊಂಡು ವಿದೇಶದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡುವ ತುಂಬಾ ವಿದ್ಯಾರ್ಥಿಗಳಿದ್ದಾರೆ. ಆದರೆ 2024ರ ಸಾಲಿನಿಮದ ಕೆನಡಾಕ್ಕೆ ಹೀಗಿ ಓದಲು ಬಯಸಿದರೆ ದುಪ್ಪಟ್ಟು ಹಣ ಖರ್ಚಾಗುವುದು. ಕೆನಡಾ ಜನವರಿ 1ರಿಂದ ಭಾರತ ಸೇರಿ ಇತರ ದೇಶಗಳಿಂದ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಫೀಸ್ ಹಾಕಲು ತೀರ್ಮಾನ ಮಾಡಿದೆ.





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries