ತ್ರಿಶೂರ್: 610 ಗ್ರಾಂ ತೂಕದೊಂದಿಗೆÀ ಆರನೇ ತಿಂಗಳಲ್ಲಿ ಜನಿಸಿದ ಮಗು ಇತಿಹಾಸವನ್ನೇ ನಿರ್ಮಿಸಿ ಅಚ್ಚರಿ ಮೂಡಿಸಿದೆ. ತ್ರಿಶೂರ್‍ನ ಅಂಬಲ್ಲೂರ್‍ನ, ಈಗ ಎರಡು ವರ್ಷ ಹರೆಯದ ಶ್ರೇಯಸ್ ತನ್ನ ನೆನಪು ಶ|ಕ್ತಿಗಾಗಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ಗೆ ಸೇರ್ಪಡೆಗೊಂಡಿದ್ದಾನೆ.
ಜೀವಕ್ಕೆ ಯಾವುದೇ ಭರವಸೆ ಇಲ್ಲ ಎಂದು ವೈದ್ಯರು ಅ|ಂದು ತೀರ್ಪು ನೀಡಿದ ಬಳಿಕ ಮಗು ಎಡರುತೊಡರುಗ|ಳಿಲ್ಲದೆ ಬೆಳವಣಿಗೆಗೊಂಡು ಇದೀಗ ಅಪೂರ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾನೆ.
ಅಕಾಲಿಕವಾಗಿ ಜನಿಸಿದ ಶ್ರೇಯಸ್ ನ ಬೆಳವಣಿಗೆ ನಿಧಾನವಾಗಿತ್ತು. ಇದನ್ನು ಪರಿಹರಿಸಲು, ವೈದ್ಯರು ಯಾವಾಗಲೂ ಮಗುವಿನೊಂದಿಗೆ ಮಾತನಾಡಲು ಸೂಚಿಸಿದರು. ಇದರ ಪ್ರಕಾರ ತಾಯಿ ಕಾವ್ಯ ಹಾಗೂ ಕುಟುಂಬಸ್ಥರು ಮಗುವಿನೊಂದಿಗೆ ಸದಾ ಮಾತನಾಡುತ್ತಿದ್ದರು. ಹೀಗೆ ನೀಡಿದ ಜ್ಞಾನವು ದಾಖಲೆಗೆ ಕಾರಣವಾಯಿತು. ಏನನ್ನೂ ನಿರೀಕ್ಷಿಸದಿದ್ದರೂ, ಮಗು ತನ್ನ ಕುಟುಂಬ, ಸ|ಂಬಂಧಿಕರ ಬೆಂಬಲದೊಂದಿಗೆ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಅನ್ನು ಉಡುಗೊರೆಯಾಗಿ ನೀಡಿದೆ.
ಶ್ರೇಯಸ್ 14 ಜಿಲ್ಲೆಗಳು, 7 ಖಂಡಗಳು, 10 ದೇಶದ ಧ್ವಜಗಳು, ಹಣ್ಣುಗಳು ಮತ್ತು ತರಕಾರಿಗಳನ್ನು, ಇಂಗ್ಲಿಷ್ ವರ್ಣಮಾಲೆಗಳೇ ಮೊದಲಾದವನ್ನು ಕಂಠಪಾಠ ಮಾಡಿದ್ದಾನೆ. ಈ ಬುದ್ದಿವಂತನಿಗೆ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನಿ ಗೊತ್ತು. ಮಗು ಮರಳಿ ಸಿಗುವುದಿಲ್ಲ ಎಂದು ಹೇಳುತ್ತಿದ್ದ ಕಾಲವೊಂದಿತ್ತು ಎನ್ನುತ್ತಾರೆ ತಾಯಿ ಕಾವ್ಯ. ನಾನು ದಾಖಲೆಗಾಗಿ ಅರ್ಜಿ ಸಲ್ಲಿಸಿದಾಗ, ಮಾನ್ಯತೆ ಲಭಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಯಾವಾಗಲೂ ಏನಾದರೂ ಹೇಳಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಈ ಜ್ಞಾನವನ್ನು ಹಾಗೆ ನೀಡಲಾಯಿತು. ದಾಖಲೆ ಸಾಧಿಸಲು ವಿಶೇಷ ಏನನ್ನೂ ಕಲಿತಿಲ್ಲ. ಅವನು ಎಲ್ಲವನ್ನೂ ಕೇಳುವ ಮೂಲಕ ಕಲಿಯುತ್ತಿದ್ದಾನೆ. ಮಗನ ಬೆಳವಣಿಗೆಗಿಂತ ಬೇರೆ ಯಾವ ದಾಖಲೆಯೂ ತನಗೆ ಖುಷಿ ಕೊಡುವುದಿಲ್ಲ ಎಂದು ಕಾವ್ಯಾ ಹೇಳುತ್ತಾರೆ.