ಮುಳ್ಳೇರಿಯ: ಇಂದು ಕೇರಳ ಎದುರಿಸುತ್ತಿರುವ ದೊಡ್ಡ ಸವಾಲಾಗಿರುವ ತ್ಯಾಜ್ಯ ನಿರ್ವಹಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸ್ಪೀಕರ್ ಎ. ಎನ್. ಶಂಸೀರ್ ತಳಿಸಿದ್ದಾರೆ.
64ನೇ ಕಂದಾಯ ಜಿಲ್ಲಾ ಶಾಲಾ ಕಲಾ ಉತ್ಸವವನ್ನು ಕಾರಡ್ಕ ಸರ್ಕಾರಿ ಶಾಲೆಯಲ್ಲಿ ನಿನ್ನೆ ಅಧಿಕ್ರತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ರಸ್ತೆಯಲ್ಲಿ ಕಸ ಎಸೆಯದೆ, ಕಸದ ಬುಟ್ಟಿಗೆ ಹಾಕಬೇಕು ಎಂಬ ಸಾಮಾನ್ಯ ಪ್ರಜ್ಞೆ ಮಕ್ಕಳ ಮನಸ್ಸಿನಲ್ಲಿ ಮೂಡಬೇಕು. ಕಲಾ ಉತ್ಸವಗಳೂ ಇದನ್ನು ಪರಿಗಣಿಸಬೇಕು. ಮತ್ತೊಂದು ಸವಾಲಾಗಿ ಕಾಡುತ್ತಿರುವುದು ಅಮಲು ಪದಾರ್ಥಗಳ ಅತಿಯಾದ ಬಳಕೆಯಾಗಿದ್ದು, ಶಾಲಾ ಪರಿಸರಗಳಿಂದ ನಿರ್ಮೂಲನೆ ಮಾಡಬೇಕಿದ್ದು, ವ್ಯಸನಿ ಮುಕ್ತ ಕ್ಯಾಂಪಸ್ ಗೆ ಸಾರ್ವಜನಿಕರು ಸಕ್ರಿಯವಾಗಿ ಮುಂದಾಗಬೇಕು ಎಂದರು. ವರದಕ್ಷಿಣೆ ಪದ್ಧತಿಯ ವಿರುದ್ಧ ಹುಡುಗ-ಹುಡುಗಿಯರಿಬ್ಬರೂ ಒಗ್ಗಟ್ಟಾಗಿ ನಿಲ್ಲಬೇಕು. ರಾಜಕೀಯ, ಧರ್ಮ, ಭೇದ ಮರೆತು ಕಲೆ ಜನರನ್ನು ಒಗ್ಗೂಡಿಸುತ್ತದೆ.ಆದ್ದರಿಂದ ಕಲಾ ಉತ್ಸವಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸ್ಮರಣಿಕೆ ಬಿಡುಗಡೆಯನ್ನೂ ಎ.ಎನ್. ಶಂಸೀರ್ ನಿರ್ವಹಿಸಿದರು.ಕಲಾವಿದ ಸಿ.ಕೆ. ನಾಯರ್ ಕಾನತ್ತೂರು ಸ್ಮರಣಿಕೆಯನ್ನು ಸ್ವೀಕರಿಸಿದರು.
ಲೋಗೋ ಡಿಸೈನರ್‍ಗೆ ಉಡುಗೊರೆ
ಶಾಸಕ ಎ.ಕೆ.ಎಂ. ಅಶ್ರಫ್ ಸ್ವಾಗತ ಗೀತೆ ಸಂಯೋಜಕ ಪ್ರಶಸ್ತಿ ವಿತರಿಸಿದರು. ಶಾಸಕ ಚಂದ್ರಶೇಖರನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎಸ್.ಎನ್.ಸರಿತಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಬಿ. ಶಫೀಕ್, ಎನ್ ಶೈಲಜಾ ಭಟ್, ಬ್ಲಾಕ್ ಪಂಚಾಯತಿ ಶಿಕ್ಷಣ ಸ್ಥಾಯಿ ಅಧ್ಯಕ್ಷೆ ಪಿ.ಸವಿತಾ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ರತ್ನಾಕರ, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಪ್ರಸಿಜಾ, ರೂಪಾ ಸತ್ಯನ್, ಡಿಡಿಇಎನ್ ನಂದಿಕೇಶನ್, ಡಿಇಒ ವಿ ದಿನೇಶ, ಎಸ್ ಎಸ್ ಕೆ ಡಿಪಿಒ ಡಿ ನಾರಾಯಣ, ಕುಂಬಳೆ ಬಿಪಿಸಿ, ಜೆ ಜಯರಾಮ್, ಕಾರಡ್ಕ ಜಿವಿಎಚ್‍ಎಸ್‍ಎಸ್ ಪ್ರಾಂಶುಪಾಲ ಮೀರಾ ಜೋಸ್, ಪಿಟಿಎ ಅಧ್ಯಕ್ಷ ಕೆ ಸುರೇಶ್ ಕುಮಾರ್, ಎಂಪಿಟಿಎ ಅಧ್ಯಕ್ಷೆ ಗೀತಾ ತಂಬಾನ್, ಎಸ್‍ಎಂಸಿ ಅಧ್ಯಕ್ಷ ಸುರೇಶ್ ಕುಮಾರ್ ಮೂಡಂಕುಳಂ, ವ್ಯಾಪಾರ ಪ್ರತಿನಿಧಿಗಳಾದ ಗಣೇಶ್ ವತ್ಸ, ಕೆ.ವಿ.ಕಿಶೋರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯನ್ ಕಾರಡ್ಕ ಮತ್ತು ಕಾರಡ್ಕ ಜಿ.ವಿ.ಎಚ್.ಎಸ್.ಎಸ್. ಪ್ರಾಂಶುಪಾಲ ಕೆ.ಸೂರ್ಯಜಿತ್ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸ್ವಾಗತಿಸಿ, ಕಾರಡ್ಕ ಜಿವಿಎಚ್‍ಎಸ್‍ಎಸ್ ಮುಖ್ಯೋಪಾಧ್ಯಾಯ ಎಂ.ಸಂಜೀವ ವಂದಿಸಿದರು.ಸಾವಿರಾರು ಸಾರ್ವಜನಿಕರು, ಕಲಾವಿದರು, ಶಿಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.