HEALTH TIPS

ಮಧ್ಯ ಗಾಜಾದಲ್ಲಿ ಇಸ್ರೇಲ್‌ ವೈಮಾನಿಕ ದಾಳಿ: 68 ಸಾವು

Top Post Ad

Click to join Samarasasudhi Official Whatsapp Group

Qries

                     ಫಾ: ಹಮಾಸ್‌ ಬಂಡುಕೋರರ ನಿಯಂತ್ರಣದಲ್ಲಿರುವ ಗಾಜಾದ ಮಧ್ಯ ಭಾಗದಲ್ಲಿ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದ್ದು ಘಟನೆಯಲ್ಲಿ 68 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.

                 ಮಧ್ಯ ಗಾಜಾದ ಪೂರ್ವಕ್ಕಿರುವ ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ಈ ದಾಳಿ ನಡೆದಿದೆ.

ಘಟನೆಯಲ್ಲಿ 12 ಮಹಿಳೆಯರು, 7 ಮಕ್ಕಳು ಸೇರಿ 68 ಜನರು ಮೃತಪಟ್ಟಿದ್ದಾರೆ. ಗಾಜಾದ ಆರೋಗ್ಯ ಸಚಿವಾಲಯ ಈ ವಿಷಯವನ್ನು ಖಚಿತಪಡಿಸಿದೆ. ಈ ವಾರಾಂತ್ಯದಲ್ಲಿ 15 ಇಸ್ರೇಲಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಅದು ಹೇಳಿದೆ.

                 ಗಾಜಾ ಸುರಕ್ಷಿತ ಸ್ಥಳವಲ್ಲ ಎಂದು ತಮ್ಮ ಕುಟುಂಬವನ್ನು ಕಳೆದುಕೊಂಡಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ ಎಂದು ಪ್ರೆಸ್‌ ಜರ್ನಲ್‌ ವರದಿ ಮಾಡಿದೆ.

                  ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆ ಒತ್ತಡ ಹಾಕುತ್ತಿದ್ದರೂ, ಇದಕ್ಕೆ ಸೊಪ್ಪು ಹಾಕದೆ ಇಸ್ರೇಲ್‌ ಗಾಜಾದಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಿದೆ.

ಗಾಜಾದಲ್ಲಿರುವ ಎಂಟು ನಿರಾಶ್ರಿತರ ಶಿಬಿರಗಳಲ್ಲಿರುವ ಹಲವರು ಆಹಾರ, ಔಷಧ ಸೇರಿದಂತೆ ಇನ್ನಿತರೆ ಅವಶ್ಯಕ ವಸ್ತುಗಳಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆಯು (ಯುಎನ್‌ಆರ್‌ಡಬ್ಲ್ಯುಎ) ನೀಡುವ ಸಹಾಯವನ್ನೇ ಅವಲಂಬಿಸಿದ್ದಾರೆ.

                  ಇಲ್ಲಿಯವರೆಗೂ ಗಾಜಾದ ಹಲವು ಪ್ರದೇಶಗಳು ನಾಶವಾಗಿದ್ದು ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಗಾಜಾದಿಂದ 23 ಲಕ್ಷ ಜನರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries