ಕುಂಬಳೆ : ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕವಿ, ಶಿಕ್ಷಣ ತಜ್ಞ, ಸಂಘಟಕ, ವಿಶ್ರಾಂತ ಅಧ್ಯಾಪಕ ಶ್ರೀ ವಿ ಬಿ ಕುಳಮರ್ವ ಅವರ 70ನೇ ಜನ್ಮದಿನದ ಪ್ರಯುಕ್ತ ಡಿಸೆಂಬರ್ 10ನೇ ಆದಿತ್ಯವಾರ ವಿ. ಬಿ. ಕುಳಮರ್ವರವರ ಸ್ವಗೃಹ "ಶ್ರೀನಿಧಿ" ನಾರಾಯಣಮಂಗಲ, ಕುಂಬಳೆಯಲ್ಲಿ ನಡೆಯಲಿರುವ ಗುರು ನಮನ, ಸನ್ಮಾನ ಮತ್ತು 70 ಕವಿ ಮನಸುಗಳ ಸಮಾಗಮ "ವಿ. ಬಿ. ಕುಳಮರ್ವ - 70 ಸಾಹಿತ್ಯೋತ್ಸವ"ದ ಆಮಂತ್ರಣ ಪತ್ರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ವಿ. ಬಿ. ಕುಳಮರ್ವ - ಲಲಿತಾಲಕ್ಷ್ಮಿ ದಂಪತಿಗೆ ಅವರ ಸ್ವಗೃಹದಲ್ಲಿ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವರಾಮ ಕಾಸರಗೋಡು, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆನಂದ ರೈ ಅಡ್ಕಸ್ಥಳ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಹಿತೇಶ್ ಕುಮಾರ್ ಎ ಅವರು ಉಪಸ್ಥಿತರಿದ್ದು ವಿ. ಬಿ ಕುಳಮರ್ವರ ವಿದ್ವತ್ತಿಗೆ ಸಲ್ಲಿಸುವ ಗೌರವಕ್ಕೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ ವಿ. ಬಿ. ಕುಳಮರ್ವರವರು ಮಾತನಾಡಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬರಹಗಾರ್ತಿ ವಿಜಯಾ ಸುಬ್ರಹ್ಮಣ್ಯರವರು ಉಪಸ್ಥಿತರಿದ್ದು ಈ ಸನ್ಮಾನದ ಮಹತ್ವ ಹಾಗೂ ವಿ. ಬಿ. ಕುಳಮರ್ವರವರ ಸಾಧನೆಗಳನ್ನು ಹಂಚಿಕೊಂಡರು. ಶಿವರಾಮ ಕಾಸರಗೋಡು ಅವರು ಸ್ವಾಗತಿಸಿ, ಪರಮೇಶ್ವರ ನಾಯ್ಕ್ ಬಾಳೆಗುಳಿ ಅವರು ವಂದಿಸಿದರು.