ಕೊಚ್ಚಿ: ಆಳವಾದ ಗುಂಡಿಯಲ್ಲಿ ಸಿಲುಕಿಕೊಂಡಿದ್ದ ಕೇರಳದ 76 ವರ್ಷದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ವೃದ್ಧೆ ತನ್ನ ಕುತ್ತಿಗೆ ಮಟ್ಟದವರೆಗೆ ಕೆಸರಿನಲ್ಲಿ ಮುಳುಗಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಕೊಚ್ಚಿ: ಆಳವಾದ ಗುಂಡಿಯಲ್ಲಿ ಸಿಲುಕಿಕೊಂಡಿದ್ದ ಕೇರಳದ 76 ವರ್ಷದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ವೃದ್ಧೆ ತನ್ನ ಕುತ್ತಿಗೆ ಮಟ್ಟದವರೆಗೆ ಕೆಸರಿನಲ್ಲಿ ಮುಳುಗಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಕಮಲಾಕ್ಷಿ ಅಮ್ಮ ಎಂಬ ಸ್ಥಳೀಯ ಮೀನುಗಾರ್ತಿ ಮಂಗಳವಾರ ಮಧ್ಯಾಹ್ನ ಮನೆಗೆ ವಾಪಸ್ಸಾಗುತ್ತಿದ್ದಾಗ ಮರಡು ಪುರಸಭೆ ವ್ಯಾಪ್ತಿಯ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದರು.
ವಯಸ್ಸಾದ ಮಹಿಳೆಯು ಗುಂಡಿಯಲ್ಲಿ ಸಿಲುಕಿಕೊಂಡಿದ್ದರು. ನಂತರ ಅವರನ್ನು ಹೊರತೆಗೆದು ದಡಕ್ಕೆ ತರಲಾಯಿತು. ಮರಡುವಿನಲ್ಲಿ ಸುಮಾರು ಐದು ಅಡಿ ಆಳದ ಕಸದ ರಾಶಿಯ ಗುಂಡಿ ರೂಪುಗೊಂಡಿದೆ ಎಂದು ವರದಿಯಾಗಿದೆ.
'ನಾನು ಆಕಸ್ಮಿಕವಾಗಿ ಗುಂಡಿಗೆ ಬಿದ್ದೆ. ಬಳಿಕ ಅಲ್ಲಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಯಾರಾದರೂ ರಕ್ಷಣೆಗೆ ಬರುತ್ತಾರೆಂದು ಭಾವಿಸಿ, ಕಷ್ಟಪಟ್ಟು ಅಲ್ಲಿದ್ದ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದೆ' ಎಂದು ಕಮಲಾಕ್ಷಿ ಅಮ್ಮ ಘಟನೆಯನ್ನು ವಿವರಿಸಿದ್ದಾರೆ.
ಸ್ಥಳೀಯ ನಿವಾಸಿ ಸೀನಾ ಟೆರೇಸ್‌ನಲ್ಲಿದ್ದಾಗ, ಸಮೀಪದ ಆಳವಾದ ಗುಂಡಿಯಲ್ಲಿ ಏನೋ ಚಲಿಸುತ್ತಿರುವಂತೆ ಕಂಡು ಬಂದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ ಅವರು, ಕಮಲಾಕ್ಷಿ ಅಮ್ಮನನ್ನು ಸುರಕ್ಷಿತವಾಗಿ ಮೇಲೆತ್ತಲು ನೆರವಾದರು. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಅಗತ್ಯ ವೈದ್ಯಕೀಯ ನೆರವು ನೀಡಲಾಯಿತು ಎಂದು ಅಗ್ನಿಶಾಮಕ ಇಲಾಖೆಯ ಮೂಲಗಳು ತಿಳಿಸಿವೆ.