ನವದೆಹಲಿ: ದೇಶದಲ್ಲಿ ಕಳೆದ ವರ್ಷ( 2022) 28,522 ಕೊಲೆ ಪ್ರಕರಣಗಳು ದಾಖಲಾಗಿವೆ. ನಿತ್ಯ ಸರಾಸರಿ 78 ಕೊಲೆಗಳು, ಅಂದರೆ ಪ್ರತಿ ಗಂಟೆಗೆ 3ಕ್ಕೂ ಹೆಚ್ಚು ಕೊಲೆಗಳಾಗಿವೆ!
ನವದೆಹಲಿ: ದೇಶದಲ್ಲಿ ಕಳೆದ ವರ್ಷ( 2022) 28,522 ಕೊಲೆ ಪ್ರಕರಣಗಳು ದಾಖಲಾಗಿವೆ. ನಿತ್ಯ ಸರಾಸರಿ 78 ಕೊಲೆಗಳು, ಅಂದರೆ ಪ್ರತಿ ಗಂಟೆಗೆ 3ಕ್ಕೂ ಹೆಚ್ಚು ಕೊಲೆಗಳಾಗಿವೆ!
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ (ಎನ್‌ಸಿಆರ್‌ಬಿ) ಈ ವಿವರ ಬಿಡುಗಡೆ ಮಾಡಿದೆ. ಆ ಪ್ರಕಾರ, ಕೊಲೆ ಪ್ರಮಾಣ ಪ್ರತಿ ಲಕ್ಷ ಜನಸಂಖ್ಯೆಗೆ 2.1ರಷ್ಟಿದೆ. ಆರೋಪಪಟ್ಟಿಯನ್ನು ಸಲ್ಲಿಸುವ ಪ್ರಮಾಣ ಶೇ 81.5 ಆಗಿದೆ.
ಕೊಲೆ ಪ್ರಕರಣಗಳಲ್ಲಿ ಶೇ 95.4ರಷ್ಟು ಬಲಿಪಶುಗಳು ವಯಸ್ಕರು. ಕೊಲೆಯಾದವರಲ್ಲಿ ಶೇ 70ರಷ್ಟು ಮಂದಿ ಪುರುಷರು. ಕೊಲೆಯಾದ ಒಟ್ಟು ಮಹಿಳೆಯರ ಸಂಖ್ಯೆ 8,125 ಎಂದು ವಾರ್ಷಿಕ ವರದಿ ತಿಳಿಸಿದೆ.
ವರ್ಷ: ದಾಖಲಾದ ಕೊಲೆ ಪ್ರಕರಣಗಳು
2022;28,522
2021;29,272
2020;29,193
ಕೊಲೆಗೆ ಕಾರಣ; ಪ್ರಕರಣ
ವಿವಾದ; 9,962
ವೈಯಕ್ತಿಕ ದ್ವೇಷ; 3,761
ಲಾಭಕ್ಕಾಗಿ; 1,884
ಎಫ್‌ಐಆರ್: ಮೊದಲ ಐದು ರಾಜ್ಯಗಳು
ಉತ್ತರಪ್ರದೇಶ;3,491
ಬಿಹಾರ;2,930
ಮಹಾರಾಷ್ಟ್ರ;2,295
ಮಧ್ಯಪ್ರದೇಶ;1,978
ರಾಜಸ್ಥಾನ;1,834