HEALTH TIPS

7 ಗಂಟೆ ನಿದ್ದೆ ಮಾಡದಿದ್ದರೆ ದೇಹಕ್ಕೆ ಏನಾಗುತ್ತೆ ಗೊತ್ತಾ? ನಿದ್ದೆ ಕಡಿಮೆಯಾದರೆ ಆರೋಗ್ಯ ಜೋಕೆ!

 ಪ್ರತಿದಿನ ನಾವು ಉತ್ತಮವಾದ ಆಹಾರ ಸೇವಿಸುತ್ತೇವೆ, ಸರಿಯಾಗಿ ವ್ಯಾಯಾಮ ಮಾಡುತ್ತೇವೆ ಆದರೂ ಕೂಡ ಆರೋಗ್ಯ ಮಾತ್ರ ಸುಧಾರಿಸುತ್ತಿಲ್ಲ ಎನ್ನುವವರೆಗೆ ಈ ಲೇಖನ. ನಾವು ಆರೋಗ್ಯವಾಗಿ ಇರಲು ಸರಿಯಾದ ಕ್ರಮ ಅನುಸರಿಸುತ್ತಿದ್ದೇನೆ ನಮ್ಮ ಜೀವನ ಕ್ರಮವನ್ನು ಅದಕ್ಕೆ ತಕ್ಕ ಹಾಗೆ ಬದಲಾಯಿಸಿಕೊಂಡಿದ್ದೇವೆ ಎಂದು ಅಂದುಕೊಳ್ಳುತ್ತೇವೆ ಅಷ್ಟೇ. ಆದರೆ ನಿಜವಾಗಿ ನಮ್ಮ ದೇಹಕ್ಕೆ ಏನು ಬೇಕು ಬೇಡ ಎಂಬುದನ್ನು ಅರಿತುಕೊಳ್ಳದೆ ಇದ್ದಾಗ ದೇಹದಲ್ಲಿ ದಣಿವು ಕಾಣಿಸಿಕೊಳ್ಳುತ್ತದೆ ಇದರಿಂದ ಸಹಜವಾಗಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ.

ನಿದ್ರೆಯ ಮಹತ್ವ!
ಎಷ್ಟೋ ಬಾರಿ ಕೆಲವರು ನಿದ್ದೆ ಮಾಡಿದಾಗ ಕುಂಭಕರ್ಣನಂತೆ ನಿದ್ದೆ ಮಾಡಬೇಡ ಎಂದು ಹೇಳುವುದನ್ನ ನೀವು ಕೇಳಿರಬಹುದು. ಆದರೆ ದೇಹಕ್ಕೆ ನಿದ್ರೆ ಎನ್ನುವುದು ಬಹಳ ಮುಖ್ಯವಾದ ವಿಚಾರ ಎನ್ನುವುದು ನಿಮಗೆ ಗೊತ್ತಾ? ಅನಗತ್ಯವಾಗಿ ನಿದ್ದೆ ಬಿಟ್ಟು ಹೆಚ್ಚು ಕೆಲಸ ಮಾಡುವುದಕ್ಕೆ ಹೋದರೆ ಅದರ ಪರಿಣಾಮ ದೇಹದ ಮೇಲೆ ಕೆಟ್ಟದಾಗಿರುತ್ತದೆ. ದಿನದಲ್ಲಿ ಏಳರಿಂದ ಎಂಟು ಗಂಟೆ ನಿದ್ದೆ ಬೇಕು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಕೂಡ ನಿದ್ದೆ ಎನ್ನುವುದು ಬಹಳ ಮುಖ್ಯವಾದ ವಿಷಯವಾಗಿದೆ.

ಎಷ್ಟೋ ಜನ ಯುವಕರು ರಾತ್ರಿಯ ವೇಳೆ ಸಿನಿಮ ನೋಡುವುದು ಅಥವಾ ಕೆಲಸದಲ್ಲಿ ನಿರತರಾಗಿರುವ ಮೂಲಕ ನಿದ್ದೆಯನ್ನು ಸ್ಕಿಪ್ ಮಾಡುತ್ತಾರೆ. ಹೀಗೆ ನೀವು ನಿದ್ದೆ ಬಿಟ್ಟು ದುಡಿಯುವುದಕ್ಕೆ ಆರಂಭಿಸಿದರೆ ನಂತರ ದುಡಿದ ಹಣವನ್ನೆಲ್ಲ ಆಸ್ಪತ್ರೆಗೆ ಖರ್ಚು ಮಾಡಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ. ದಿನವಿಡೀ ಕೆಲಸ ಮಾಡಿ ದೇಹಕ್ಕೆ ಸುಸ್ತಾಗಿದ್ದರೆ ದಿನವಿಡೀ ಯೋಚನೆ ಮಾಡಿ ಮೆದುಳಿಗೂ ಕೂಡ ಆಯಾಸವಾಗಿರುತ್ತದೆ. ಹಾಗಾಗಿ ದೇಹ ಮತ್ತು ಮನಸ್ಸು ಎರಡು ಶಾಂತವಾಗಿ ಇರಬೇಕು, ಮಾರನೆಯ ದಿನಕ್ಕೆ ನಿಮ್ಮ ದೇಹದಲ್ಲಿ ಎನರ್ಜಿ ಜನರೇಟ್ ಆಗಬೇಕು ಎಂದಾದರೆ ರಾತ್ರಿ ಸರಿಯಾದ ನಿದ್ದೆ ಬಹಳ ಮುಖ್ಯ.

ನಮ್ಮ ದೇಹಕ್ಕೆ ಉತ್ತಮವಾದ ಆಹಾರ ಸೇವನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿರುವುದು ನಿದ್ರೆ ಕೂಡ ಹೌದು. ಕೆಲವು ಆರೋಗ್ಯ ತಜ್ಞರ ಪ್ರಕಾರ ಮನುಷ್ಯನ ದೇಹಕ್ಕೆ ನಿದ್ರೆಗೆ ಮೊದಲ ಆದ್ಯತೆ ಆಗಿರಬೇಕು. ಇದೇ ಕಾರಣಕ್ಕೆ ಸರಿಯಾದ ನಿದ್ರೆಯನ್ನು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡು ರಿಚಾರ್ಜ್ ಆಗುತ್ತದೆ ಮರುದಿನ ನೀವು ಮತ್ತೆ ನಿಮ್ಮ ದೈನಂದಿನ ಚಟುವಟಿಕೆಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಸರಿಯಾದ ನಿದ್ದೆ ಮಾಡದೇ ಇದ್ರೆ ಏನಾಗುತ್ತೆ?
ನಮಗೆ ಹೆಚ್ಚು ವಯಸ್ಸಾಗುತ್ತಿದ್ದಂತೆ ನಿದ್ರೆ ಸರಿಯಾಗಿ ಬರುವುದಿಲ್ಲ ಹಾಗಾಗಿ ಸರಿಯಾದ ಸಮಯದಲ್ಲಿ ಈಗಿನಿಂದಲೇ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ವೈದ್ಯರು ಹೇಳುವ ಪ್ರಕಾರ ಕನಿಷ್ಠ ಏಳು ಗಂಟೆ ನಿದ್ರೆ ಮಾಡಿದರೆ ಆರೋಗ್ಯ ಸುಧಾರಿಸಲು ಸಹಾಯಕವಾಗುತ್ತದೆ ಹಾಗೂ ನಮ್ಮ ದೇಹದ ಮೇಲೆ ಬೀರುವಂತಹ ನಕಾರಾತ್ಮಕ ಪರಿಣಾಮವನ್ನು ತಪ್ಪಿಸಿಕೊಳ್ಳಬಹುದು.

ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಇಲ್ಲದೆ ಇದ್ದರೆ ದೇಹದಲ್ಲಿ ಸಾಕಷ್ಟು ರೋಗಗಳು ಕೂಡ ಆರಂಭವಾಗಬಹುದು. ರಕ್ತದೊತ್ತಡ, ಹೃದಯಾಘಾತ, ಮಧುಮೇಹ, ಪಾರ್ಶ್ವ ವಾಯು, ಖಿನ್ನತೆ ಸ್ಥೂಲಕಾಯ, ಲೈಂಗಿಕ ಸಮಸ್ಯೆ ಮೊದಲಾದವುಗಳು ಕಾಣಿಸಿಕೊಳ್ಳುತ್ತವೆ. ನಿದ್ರಾಹೀನತೆ ಕಣ್ಣಿನ ದೃಷ್ಟಿ ಕ್ರಮೇಣ ಕಳೆದುಕೊಳ್ಳಲು ಕೂಡ ಕಾರಣವಾಗುತ್ತದೆ ಮುಖದಲ್ಲಿ ಅಕಾಲಿಕ ಸುಕ್ಕು, ಕಣ್ಣಿನ ಕೆಳಗೆ ಕಪ್ಪು ವರ್ತುಲ ಉಂಟಾಗುವುದು ಕೂಡ ನಿದ್ರೆಯ ಕೊರತೆಯಿಂದಲೇ.

ನಿದ್ರೆ ಸರಿಯಾಗಿ ಆಗದೆ ಇದ್ದಾಗ ಅದು ಮನುಷ್ಯನ ಹಾರ್ಮೋನ್ ಬದಲಾವಣೆಗೆ ಕಾರಣವಾಗುತ್ತದೆ, ಇದರಿಂದ ಮಹಿಳೆಯರಲ್ಲಿ ಸ್ತೂಲಕಾಯ, ಕೊಲೆಸ್ಟ್ರಾಲ್ ಹೆಚ್ಚಾಗುವುದು, ಸಮಯಕ್ಕೆ ಪೀರಿಯಡ್ಸ್ ಆಗದೆ ಇರುವುದು, ಅತಿಯಾದ ರಕ್ತಸ್ರಾವ ಮೊದಲಾದವುಗಳಿಗೆ ಕಾರಣವಾಗುತ್ತದೆ. ಹಾಗಾದ್ರೆ ನಿದ್ರೆಯನ್ನು ಯಾವ ರೀತಿ ಮಾಡಬೇಕು ಎಂಬುದಾದರೆ,

ಸರಿಯಾದ ಸಮಯಕ್ಕೆ ನಿದ್ದೆ!
ಎಷ್ಟೇ ಕೆಲಸದ ಒತ್ತಡ ಇರಬಹುದು ಆದರೆ ನೀವು ಮರುದಿನ ಮತ್ತೆ ಯಾವುದೇ ದೇಹದ ಆಯಾಸ ಇಲ್ಲದೆ ಕೆಲಸ ಮುಂದುವರಿಸಬೇಕು ಎಂದಾದರೆ ರಾತ್ರಿ ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ರೆ ಮಾಡುವುದು ಬಹಳ ಅಗತ್ಯ. ರಾತ್ರಿ ಹೊತ್ತು ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದಾಗ ಮನಸ್ಸು ಕೂಡ ಉತ್ಸಾಹ ಗೊಳ್ಳುತ್ತದೆ.

ಮಧ್ಯಾಹ್ನದ ನಿದ್ದೆ ಒಳ್ಳೆಯದಲ್ಲ!
ಕೆಲವರು ರಾತ್ರಿ ಹೊತ್ತು ನಿದ್ದೆ ಮಾಡುವ ಬದಲು ಮಧ್ಯಾಹ್ನವೇ ಹೆಚ್ಚು ಸಮಯ ನಿದ್ದೆ ಮಾಡುವುದರಲ್ಲಿಯೇ ಕಳೆಯುತ್ತಾರೆ ಆದರೆ ಊಟವಾದ ತಕ್ಷಣ ಮಧ್ಯಾಹ್ನ ಹೆಚ್ಚು ಸಮಯದವರೆಗೆ ನಿದ್ರೆ ಮಾಡಿದರೆ ಅದು ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ಅಲ್ಪಾವಧಿಯ ಸಣ್ಣ ನಿದ್ದೆ ಮಧ್ಯಾಹ್ನ ಮಾಡಿದರು ರಾತ್ರಿ ಹೊತ್ತು ಮಾತ್ರ ಸುಧೀರ್ಘ ನಿದ್ದೆಯನ್ನು ಮಾಡಲೇಬೇಕು.

ಮೆದುಳಿನ ಮೇಲೆ ಪರಿಣಾಮ!
ದಿನದ 24 ಗಂಟೆ ಎಚ್ಚರವಾಗಿಯೇ ಇರುವ ಮೆದುಳಿಗೂ ಕೂಡ ಒಂದಿಷ್ಟು ಸಮಯ ರೆಸ್ಟ್ ಬೇಕು ನೀವು ನಿದ್ದೆ ಮಾಡಿದಾಗ ನಿಮ್ಮ ಸೂಕ್ತ ಮನಸ್ಸು ಜಾಗೃತವಾಗಿರುತ್ತದೆ ಆದರೆ ಮೆದುಳಿಗೆ ಒಂದಷ್ಟು ಆಯಾಸ ನಿವಾರಣೆಗೆ ಸರಿಯಾದ ನಿದ್ರೆ ಬಹಳ ಮುಖ್ಯ. ಮೆದುಳಿಗೆ ಹೆಚ್ಚು ಒತ್ತಡ ಬಿದ್ದಾಗ ಅದು ತನ್ನ ಚಿಂತನಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಇದರಿಂದ ಹೆಚ್ಚು ಒತ್ತಡ ಉಂಟಾಗಬಹುದು ಕ್ರಮೇಣ ಮರೆವಿನ ಕಾಯಿಲೆ ಕೂಡ ಆವರಿಸಿಕೊಳ್ಳಬಹುದು.

ನಕಾರಾತ್ಮಕತೆಯನ್ನು ಹೋಗಲಾಡಿಸಲು ನಿದ್ರೆ ಬೇಕು!
ದಿನದ ಕೆಲಸದ ಅವಧಿಯಲ್ಲಿ ಎಷ್ಟು ಬಾರಿ ಮನಸ್ಸಿಗೆ ನೋವು ಉಂಟಾಗುವಂತಹ ಘಟನೆಗಳು ನಡೆಯಬಹುದು ಅಥವಾ ದೇಹಕ್ಕೆ ಅತಿಯಾದ ಆಯಾಸ ಉಂಟಾಗಬಹುದು ಇದೆಲ್ಲ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಂದರ್ಭದಲ್ಲಿ ರಾತ್ರಿ ಹೊತ್ತಿನಲ್ಲಿ ನೀವು ಸರಿಯಾಗಿ ನಿದ್ರೆ ಮಾಡಿದರೆ ಮರುದಿನ ನಿಮ್ಮ ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕತೆ ಇರುವುದಿಲ್ಲ. ಇದರಿಂದ ನೀವು ಸಕಾರಾತ್ಮಕವಾಗಿ ಮುಂದಿನ ದಿನ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಹಾಯಕವಾಗುತ್ತದೆ.

ಯಾವಾಗ ಸರಿಯಾದ ನಿದ್ರೆಯನ್ನು ಮಾಡುವುದಿಲ್ಲವೋ ಆಗ ಮರುದಿನದ ಯಾವ ಕಾರ್ಯ ಚಟುವಟಿಕೆಗಳು ಕೂಡ ಸರಿಯಾಗಿ ಆಗುವುದಿಲ್ಲ. ಅತಿಯಾದ ಸಿಟ್ಟು ಬರುವುದು ಸುಸ್ತು ಕಾಣಿಸಿಕೊಳ್ಳುವುದು ಮೊದಲಾದ ಸಮಸ್ಯೆ ಆಗುತ್ತದೆ ಇದರಿಂದ ಎಷ್ಟೋ ಜನ ಸರಿಯಾಗಿ ವಾಹನ ಓಡಿಸಲು ಕೂಡ ಕಷ್ಟ ಪಡುತ್ತಾರೆ. ಇದರಿಂದಾಗಿ ಎಷ್ಟು ಅಪಘಾತಗಳು ಆಗಿರುವ ದಾಖಲೆಗಳು ಇವೆ. ಕಚೇರಿಗೆ ಹೋಗಿ ಕುಳಿತು ಕೆಲಸ ಮಾಡಲು ಕೂಡ ಸಮಸ್ಯೆ ಎದುರಿಸುತ್ತಾರೆ.

ಸ್ಮಾರ್ಟ್ ಫೋನ್ ನಿಂದ ದೂರ ಇರುವುದು ಒಳ್ಳೆಯದು!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡದವರು ಯಾರು ಇಲ್ಲ. ರಾತ್ರಿ ಹೊತ್ತು ಲೈಟ್ ಆಫ್ ಮಾಡಿ ಮುಸುಕು ಹಾಕಿಕೊಂಡು ಹೆಚ್ಚು ಸಮಯ ಮೊಬೈಲ್ ಸ್ಕ್ರೋಲ್ ಮಾಡುವವರ ಸಂಖ್ಯೆ ಏನು ಕಡಿಮೆ ಇಲ್ಲ ಆದರೆ ಇದು ಸ್ಲೋ ಪಾಯಿಸನ್ ಇದ್ದಹಾಗೆ. ಸಮಯ ಕಳೆಯಲು ಹೋದರೆ ಅದು ನಿಮ್ಮ ದೇಹದ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಒಮ್ಮೆ ಆರೋಗ್ಯ ಹದಗೆಟ್ಟರೆ ನಂತರ ನೀವು ನಿದ್ದೆ ಮಾಡಬೇಕು ಎಂದು ಬಯಸಿದರು ಕೂಡ ನಿದ್ರೆ ಮಾಡಲು ಸಾಧ್ಯವಿಲ್ಲ.
ಹಾಗಾಗಿ ಎಲ್ಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಆರೋಗ್ಯದ ದೃಷ್ಟಿಯಿಂದ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದ ನಿದ್ರೆ ಮಾಡುವುದು ಬಹಳ ಒಳ್ಳೆಯದು. ಉತ್ತಮವಾದ ಆಹಾರ ಸೇವನೆ, ದಿನದಲ್ಲಿ ಹೆಚ್ಚು ನೀರು ಕುಡಿಯುವುದು ಹಾಗೂ ಸರಿಯಾದ ನಿದ್ದೆ ನಿಮ್ಮ ದೇಹವನ್ನು ಎಂದೆಂದಿಗೂ ಆರೋಗ್ಯವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎಂಬುದನ್ನು ಮರೆಯಬೇಡಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries