HEALTH TIPS

ಕೇರಳದಲ್ಲಿ ಡಿ.8ರಂದು ಕೋವಿಡ್-19ರ ಉಪ ತಳಿ JN.1 ಪತ್ತೆ

            ವೆದಹಲಿ: ಕೇರಳದಲ್ಲಿ ಡಿಸೆಂಬರ್ 8ರಂದು ಕೋವಿಡ್-19ರ ಉಪ ತಳಿ ಜೆಎನ್.1 (JN.1) ಪತ್ತೆಯಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

              79 ವರ್ಷದ ಮಹಿಳೆಗೆ ನವೆಂಬರ್ 18ರಂದು ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.

             ಶೀತ-ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹೊಂದಿದ್ದ ರೋಗಿಯು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              ಈಗ ದೇಶದಲ್ಲಿ ದೃಢಪಟ್ಟಿರುವ ಶೇ 90ರಷ್ಟು ಕೋವಿಡ್ ಪ್ರಕರಣಗಳಲ್ಲಿ ರೋಗಿಗಳು ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ. ಅಂತವರಿಗೆ ಮನೆಯಲ್ಲೇ ಪ್ರತ್ಯೇಕವಾಸದ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ.

              ಈ ಹಿಂದೆ ಅಕ್ಟೋಬರ್ 25ರಂದು ತಮಿಳುನಾಡಿನಿಂದ ಸಿಂಗಾಪುರಕ್ಕೆ ತೆರಳಿದ್ದ ಭಾರತೀಯ ಪ್ರಯಾಣಿಕನಲ್ಲೂ ಜೆಎನ್.1 ಉಪ ತಳಿ ಪತ್ತೆಯಾಗಿತ್ತು.

              ಕೋವಿಡ್-19ರ ಉಪ ತಳಿ ಜೆಎನ್.1 ಮೊದಲ ಪ್ರಕರಣ ಲಕ್ಸೆಂಬರ್ಗ್‌ನಲ್ಲಿ ಪತ್ತೆಯಾಗಿತ್ತು. ಅದಾದ ಬಳಿಕ ಹಲವು ದೇಶಗಳಿಗೆ ಹಬ್ಬಿತ್ತು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries