HEALTH TIPS

ಯುಕೊ ಬ್ಯಾಂಕ್‌ ಗ್ರಾಹಕರ ಖಾತೆಗಳಿಗೆ ₹820 ಕೋಟಿ ಜಮೆ: ಸಿಬಿಐನಿಂದ ಎಫ್‌ಐಆರ್

              ವದೆಹಲಿ: ಸಾರ್ವಜನಿಕ ವಲಯದ ಯುಕೊ ಬ್ಯಾಂಕ್‌ನ 41 ಸಾವಿರಕ್ಕೂ ಅಧಿಕ ಗ್ರಾಹಕರ ಖಾತೆಗಳಿಗೆ ₹820 ಕೋಟಿಯಷ್ಟು ಜಮೆ ಆಗಿದ್ದು, ಈ ಸಂಬಂಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

              ಈ ಕುರಿತು ಯುಕೊ ಬ್ಯಾಂಕ್‌, ಸಂಶಯಾಸ್ಪದ ಐಎಂಪಿಎಸ್‌ ವ್ಯವಹಾರಗಳಿಗೆ ಸಂಬಂಧಿಸಿ ತನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಎಂಜಿನಿಯರ್ ಹಾಗೂ ಇತರ ಕೆಲ ಅಪರಿಚಿತರ ವಿರುದ್ಧ ದೂರು ನೀಡಿದೆ.

             ಈ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಣದ ವ್ಯವಹಾರಕ್ಕೆ ಸಂಬಂಧಿಸಿ ಕೋಲ್ಕತ್ತ, ಮಂಗಳೂರು ಸೇರಿದಂತೆ ವಿವಿಧ ನಗರಗಳ 13 ಸ್ಥಳಗಳಲ್ಲಿ ಅಧಿಕಾರಿಗಳು ಕೈಗೊಂಡಿದ್ದ ಶೋಧ ಮಂಗಳವಾರ ಮುಗಿದಿದೆ.

                ನವೆಂಬರ್‌ 10ರಿಂದ 13 ರ ನಡುವೆ ಈ ಬೃಹತ್‌ ಮೊತ್ತ ಜಮೆ ಆಗಿದೆ. ಆದರೆ, ಸಂಬಂಧಿಸಿದ ಖಾತೆಗಳಲ್ಲಿ ಯಾವುದೇ ಹಣ ಕಡಿತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                    ಗ್ರಾಹಕರ ಖಾತೆಗಳಿಗೆ 8.53 ಲಕ್ಷ ಐಎಂಪಿಎಸ್‌ ವಹಿವಾಟುಗಳ ಮೂಲಕ ಹಣ ಜಮೆ ಮಾಡಲಾಗಿದೆ. ನ.10ರಿಂದ 13 ರ ನಡುವಿನ ಅವಧಿಯಲ್ಲಿ ಖಾಸಗಿ ಬ್ಯಾಂಕುಗಳಲ್ಲಿನ 14 ಸಾವಿರ ಗ್ರಾಹಕರ ಖಾತೆಗಳ ಮೂಲಕ ಈ ಹಣ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಇ-ಮೇಲ್‌ ಆರ್ಕೈವ್‌, ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries