ಪತ್ತನಂತಿಟ್ಟ: ಶಬರಿಮಲೆಯಲ್ಲಿ ಭಕ್ತರ ದಂಡೇ ಮುಂದುವರಿದಿದೆ. ನಿನ್ನೆ 97,000 ಅಯ್ಯಪ್ಪ ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡಿರುವರು.
ದರ್ಶನಕ್ಕಾಗಿ ಉದ್ದನೆಯ ಸಾಲು ಕಂಡು ಬರುತ್ತಿದೆ. ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಭಕ್ತರು ಹರಿದು ಬರುತ್ತಲೇ ಇದ್ದಾರೆ. ಭಕ್ತಾದಿಗಳ ದಟ್ಟಣೆಯಿಂದಾಗಿ ಪಂಬಾದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.