ಕಾಸರಗೋಡು: ನಗರದ ತಳಂಗರೆ ಕಿರಿಯ ಭಗವತೀ ದೈವಸ್ಥಾನದಲ್ಲಿ ಪುತ್ತರಿ ಉತ್ಸವ ಹಾಗೂ ದೈವ ಕೋಲ ಮಹೋತ್ಸವ ಡಿ. 9ಮತ್ತು 10ರಂದು ಜರುಗಲಿದೆ. ದೈವಸ್ಥಾನ ಅಭಿವೃದ್ಧಿ ಕಾರ್ಯಗಳೊಂದಿಗೆ 26ವರ್ಷಗಳ ನಂತರ ಇಲ್ಲಿ ಉತ್ಸವ ನಡೆಯುತ್ತಿದೆ.
ಪುತ್ತರಿ ಹಬ್ಬಕ್ಕಾಗಿ ಗೊನೆಮುಹೂರ್ತ, ಪನ್ನಿಕುಲತಿ ಚಾಮುಂಡಿಯಮ್ಮನ ಅಗ್ನಿ ಪ್ರವೇಶಕ್ಕೆ ಮುಹರ್ತ ಕೊಳ್ಳಿ, ದೈವಕೋಲಕ್ಕೆ ಮುದ್ರೆ ಹಾಕುವ ಕಾರ್ಯಕ್ರಮ ದೈವಸ್ತಾನದಲ್ಲಿ ಭಾನುವಾರ ನಡೆಯಿತು. ಡಿ. 9ರಂದು ಬೆಳಗ್ಗೆ 8ಕ್ಕೆ ಕೊಳ್ಳಿಮುಹೂರ್ತ, ಸಂಜೆ 4ಕ್ಕೆ ಸಂಧ್ಯಾದೀಪ, 6ಕ್ಕೆ ಪಾಲಕುನ್ನು ಶ್ರೀ ಚೀರುಂಬಾ ಭಗವತೀ ಕ್ಷೇತ್ರದಿಂದ ಚಾಮುಂಡಿಯಮ್ಮನ ಭಂಡಾರವನ್ನು ಭವ್ಯ ಶೋಭಾಯಾತ್ರೆ ಮೂಲಕ ದೈವಸ್ಥಾನಕ್ಕೆ ತರಲಾಗುವುದು. ರಾತ್ರಿ 8ಕ್ಕೆ ಪುತ್ಥರಿ ಉತ್ಸವ, ನಂತರ ತುಲಾಭಾರ ಸೇವೆ, ಚಾಮುಂಡಿ ಅಮ್ಮನವರ ತಿಡಂಗಳ್, ಮೇಲೇರಿಗೆ ಅಗ್ನಿಸ್ಪರ್ಶ, ಮೋಂದಿಕೋಲ ನಡೆಯುವುದು. 10ರಂದು ಬೆಳಗ್ಗೆ 3ಕ್ಕೆ ಕೊರತ್ತಿಯಮ್ಮನ ನರ್ತನ ಸೇವೆ, 5ಕ್ಕೆ ಪನ್ನಿ ಕುಲತ್ತಿ ಚಾಮುಂಡಿಯಮ್ಮನ ನರ್ತನ ಸೇವೆ, ಮೆಲೇರಿ ಪ್ರವೇಶ, 10ಕ್ಕೆ ಗುಳಿಗ ಕೋಲ, ಮಧ್ಯಾಹ್ನ ಎರಡು ಗಂಟೆಗೆ ಭಂಡಾರ ನಿರ್ಗಮನದೊಂದಿಗೆ ಉತ್ಸವ ಸಂಪನ್ನಗೊಳ್ಳುವುದು.