ನಾಡಿಯಾಡ್: ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಕೆಲವರು ಮೀಥೈಲ್ ಆಲ್ಕೋಹಾಲ್ ಮಿಶ್ರಿತ ಕಲುಷಿತ ಆಯುರ್ವೇದ ಸಿರಪ್ ಸೇವಿಸಿರುವ ಶಂಕೆ ವ್ಯಕ್ತವಾಗಿದ್ದು, ಕಳೆದ ಎರಡು ದಿನಗಳಲ್ಲಿ ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಜನರು ಸೇವಿಸಿರುವ ಆಯುರ್ವೇದಿಕ್ ಸಿರಪ್ ಅನ್ನು 'ಕಲ್ಮೆಘಾಸವ್-ಅಸವಾ ಅರಿಷ್ಟ' ಎಂದು ಗುರುತಿಸಲಾಗಿದ್ದು, ನಾಡಿಯಾಡ್ ಪಟ್ಟಣದ ಸಮೀಪವಿರುವ ಬಿಲೋದರಾ ಹಳ್ಳಿಯ ಅಂಗಡಿಯಲ್ಲಿ ಸುಮಾರು 50 ಜನರಿಗೆ ಈ ಸಿರಪ್ ಅನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
'ಮೃತರು ಮತ್ತು ಅಸ್ವಸ್ಥರು ಸೇವಿಸಿರುವ ಸಿರಪ್‌ಗೆ ಮೀಥೈಲ್ ಆಲ್ಕೊಹಾಲ್ ಬೆರೆಸಿರುವುದು ರಕ್ತ ಪರೀಕ್ಷೆಯಲ್ಲಿ ದೃಢಪಟ್ಟಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಧಿಯಾ ತಿಳಿಸಿದ್ದಾರೆ.
'ಕಳೆದ ಎರಡು ದಿನಗಳಲ್ಲಿ ಸಿರಪ್ ಸೇವಿಸಿ ಐವರು ಪ್ರಾಣ ಕಳೆದುಕೊಂಡಿದ್ದರೆ, ಇಬ್ಬರು ಚಿಕಿತ್ಸೆಯಲ್ಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನಾವು ಅಂಗಡಿಯ ಮಾಲೀಕ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದೇವೆ'ಎಂದು ಅವರು ಹೇಳಿದ್ದಾರೆ.
ಮೀಥೈಲ್ ಆಲ್ಕೊಹಾಲ್ ಒಂದು ವಿಷಕಾರಿ ವಸ್ತುವಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.