ಕೊಚ್ಚಿ: ಹತ್ತು ವರ್ಷದ ಬಾಲಕಿ ವೈಗಾ ಹತ್ಯೆ ಪ್ರಕರಣದಲ್ಲಿ ತಂದೆ ಸಾನುಮೋಹನ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಎರ್ನಾಕುಳಂ ವಿಶೇಷ ನ್ಯಾಯಾಲಯವು ಸಾನು ವಿರುದ್ಧದ ಎಲ್ಲಾ ಆರೋಪಗಳನ್ನು ಸಾಬೀತುಪಡಿಸಿದೆ.
ಐಪಿಸಿಯ ಸೆಕ್ಷನ್ 302, 328, 201, ಬಾಲಾಪರಾಧಿ ಕಾಯ್ದೆಯ 75 ಮತ್ತು 77 ರ ಅಡಿಯಲ್ಲಿ ಆರೋಪಿಯನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸಾನು ಮೋಹನ್ ವಿರುದ್ಧ ಮಗುವಿನ ಕೊಲೆ, ಕೊಲ್ಲುವ ಉದ್ದೇಶದಿಂದ ಮದ್ಯ ಒದಗಿಸುವುದು, ಸಾಕ್ಷ್ಯ ನಾಶಪಡಿಸುವುದು, ಬಾಲಾಪರಾಧಿಗಳ ಅಡಿಯಲ್ಲಿ ಮಕ್ಕಳಿಗೆ ಕ್ರೌರ್ಯ ಮತ್ತು ಮಕ್ಕಳಿಗೆ ಮದ್ಯ ಒದಗಿಸಿದ ಆರೋಪಗಳನ್ನು ಹೊರಿಸಲಾಗಿದೆ.
ಮಾರ್ಚ್ 22, 2021 ರಂದು, ವೈಗಾಳನ್ನು ಆಕೆಯ ತಂದೆ ಸಾನು ಮೋಹನ್ ಉಸಿರುಗಟ್ಟಿಸಿ ಮುತ್ತಾರ್ ನದಿಗೆ ಎಸೆದಿದ್ದ. ಹಣ ಕೊಡುವವರಿಗೆ ವಂಚಿಸಲು ಮಗಳನ್ನು ಕೊಂದಿದ್ದು, ಯಾಮಾರಿಸಿ ಬದುಕಲು ಪ್ಲಾನ್ ಮಾಡಲಾಗಿತ್ತು ಎಂಬುದು ಸಾನು ಮೋಹನ್ ತಪೆÇ್ಪಪ್ಪಿಗೆ ಹೇಳಿಕೆ ನೀಡಿದ್ದಾನೆ. ಸಾನು ಮೋಹನ್ ತನ್ನ ಮಗಳನ್ನು ಅಲಪ್ಪುಳದಲ್ಲಿರುವ ಸಂಬಂಧಿಕರ ಮನೆಯಿಂದ ತನ್ನ ಚಿಕ್ಕಪ್ಪನಿಗೆ ತೋರಿಸಲು ಹೋಗುವುದಾಗಿ ಹೇಳಿ ಕರೆತಂದು ಕೃತ್ಯ ಎಸಗಿದ್ದ.
ಮಗುವನ್ನು ಎರ್ನಾಕುಳಂನ ಕಂಗರಪಾಡಿಯಲ್ಲಿರುವ ಫ್ಲಾಟ್‍ಗೆ ಕರೆತಂದು ಕತ್ತು ಹಿಸುಕಿ ಕೊಲೆ ಮಾಡಿ ನದಿಗೆ ಎಸೆಯಲಾಗಿತ್ತು. ಕೊಲೆಯ ನಂತರ ಆರೋಪಿ ಕೇರಳ ಬಿಟ್ಟು ಗೋವಾ, ಕೊಯಮತ್ತೂರು, ಕೊಲ್ಲೂರು ಮುಂತಾದ ಕಡೆ ತಲೆಮರೆಸಿಕೊಂಡಿದ್ದ. ಬಳಿಕ ಕಾರವಾರದಿಂದ ಸಾನುವನ್ನು ಪೋಲೀಸರು ಬಂಧಿಸಿದ್ದರು.