ಮಂಜೇಶ್ವರ: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳ ಆರೈಕೆಮಾಡುವ ಪ್ರಮುಖ ಸಂಸ್ಥೆ ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ವತಿಯಿಂದ ಸಂಸ್ಥೆ ಸಿಬ್ಬಂದಿಗಾಗಿ ಕ್ರಿಸ್‍ಮಸ್ ಆಚರಣೆಯನ್ನು ಏರ್ಪಡಿಸಿತು.
ಸ್ಥಳೀಯ ನಿವಾಸಿಗಳು ಮತ್ತು ಸಂಸ್ಥೆ ಸಿಬ್ಬಂದಿ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಆಕರ್ಷಕ ಕ್ರಿಸ್ಮಸ್ ಸ್ಕಿಟ್ ಪ್ರದರ್ಶಿಸಿದರು. ಕ್ರಿಸ್‍ಮಸ್ ಕ್ಯಾರೋಲ್‍ಗಳಿಗೆ ಹೆಸರುವಾಸಿಯಾದ ತಂಡ 'ಜಿಜಿ 100'ದಿಂದ ಮಧುರವಾದ ಕ್ರಿಸ್‍ಮಸ್ ಗೀತೆಗಳನ್ನು ಸಾದರಪಡಿಸಿದರು. ಅರ್ಬನ್ ಗ್ರೂವ್ ವತಿಯಿಂದ ಆಕರ್ಷಕ ನೃತ್ಯ ಪ್ರದರ್ಶನ, ಹಿಪ್-ಹಾಪ್, ಸಮಕಾಲೀನ ಮತ್ತು ಜಾಝ್ ನೃತ್ಯವಿಧ್ಯ ಪ್ರೇಕ್ಷಕರ ಮನರಂಜಿಸಿತು
ಕೇಂದ್ರದ ನಿರ್ದೇಶಕ ಜೋಸೆಫ್ ಮಾತನಾಡಿ, ಕ್ರಾಸ್ತಾ ಕ್ರಿಸ್ಮಸ್ ಹಬ್ಬ ನಮ್ಮಲ್ಲಿನ ಭಾವನಾತ್ಮಕ ಯೋಗಕ್ಷೇಮ ಬಲಪಡಿಸಲು ಅವಕಾಶವನ್ನು ನೀಡುವುದರ ಜತೆಗೆ ತಮ್ಮ ಜೀವನವನ್ನು ನವೀನ ಭರವಸೆಯೊಂದಿಗೆ ಆವಿಷ್ಕರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಸ್ಥಾಪಕ ರಶೀದ್ ವಿಟ್ಲ, ಯೋಗೀಶ್ ವಿ. ಸಾಲಿಯಾನ್, ಟೈಟಸ್ ನೊರೊನ್ಹಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಗೌರವ ಅತಿಥಿಗಳಾಗಿ ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜಿಯಾನ್ ಲವಿನಾ ಮೊಂತೇರೊ, ಸ್ಟ್ಯಾನಿ ಬೇಳಾ, ಸಿರಿಲ್ ಡಿಸೋಜಾ, ಸ್ನೇಹಾಲಯದ ಚಾಪ್ಲಿನ್ ಸ್ಟ್ಯಾನಿ ಫೆನಾರ್ಂಡಿಸ್ ಮತ್ತು ಶ್ರೀಮತಿ ವಿದ್ಯಾ ಫೆನಾರ್ಂಡಿಸ್, ಬಹರೇನ್, ವಿನ್ಸೆಂಟ್ ಜೆರೋಮ್ ಡಿಸಿಲ್ವಾ ಮತ್ತು ಸಿಲ್ವಿಯಾ ರೀಟಾ ಡಿಸಿಲ್ವಾ ಹಾಗೂ ಡೆನ್ಜಿಲ್ ಮೊನಿಸ್ ಮತ್ತು ಮರಿಟಾ ಮೊನಿಸ್ (ಕುವೈತ್) ಉಪಸ್ಥಿತರಿದ್ದರು.