HEALTH TIPS

ದಶಕಗಳ ಬೇಡಿಕೆಗೆ ಕೊನೆಗೂ ಪರಿಹಾರ ಕಲ್ಪಿಸಿದ ಸೇವಾಭಾರತಿ: ಕುಂಬಳೆ ಪೇಟೆಯಲ್ಲಿ ಸೇವಾಭಾರತಿಯಿಂದ ಸುಸಜ್ಜಿತ ಶೌಚಾಲಯ

                    ಕುಂಬಳೆ: ದಶಕಗಳಿಂದ ಸಾರ್ವಜನಿಕರ ನಿರಂತರ ಬೇಡಿಕೆಯಾಗಿದ್ದ ಕುಂಬಳೆ ಪೇಟೆಯಲ್ಲೊಂದು ಶೌಚಾಲಯ ಸಮಸ್ಯೆಗೆ ಕೊನೆಗೂ ಸೇವಾಭಾರತಿ ಮತ್ತ ಭೂತಸ್ಥಾನ ಸೇವಾ ಸಮಿತಿ ಪರಿಹಾರ ಕಲ್ಪಿಸಿದೆ. ಶೌಚಾಲಯಕ್ಕಾಗಿ ಸ್ಥಳೀಯರು ಮತ್ತು ವ್ಯಾಪಾರಿಗಳ ಕೂಗು ನಡುವೆ ಕುಂಬಳೆ ಪೇಟೆಯಲ್ಲಿ ಸೇವಾ ಭಾರತಿ ಅಡಿಯಲ್ಲಿ ಸಂಪೂರ್ಣ ಸುಸಜ್ಜಿತ ಶೌಚಾಲಯವನ್ನು ತೆರೆಯಲಾಗಿದೆ.

               ಶೌಚಾಲಯ ಬಳಕೆಯು ಸಂಪೂರ್ಣ ಉಚಿತವಾಗಿದೆ. ಬಳಸಿದ ನಂತರ ಸ್ವಯಂ ದಾನ ಮಾಡುವವರಿಗೆ ಶೌಚಾಲಯದ ಬಳಿ ಸೇವಾ ಠೇವಣಿ ಪೆಟ್ಟಿಗೆಯನ್ನು ಇರಿಸಲಾಗಿದೆ.  ಶೌಚಾಲಯ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಸೇವಾ ಭಾರತಿ ಭರಿಸಲಿದೆ.

             ಹಲವು ವರ್ಷಗಳ ಹಿಂದೆ ಕುಂಬಳೆ ಬಸ್ ನಿಲ್ದಾಣವನ್ನು ಕೆಡವಿದ ನಂತರ ಶೌಚಾಲಯದ ಕೊರತೆಯಿಂದ ಪೇಟೆಗೆ ಬರುವ ಜನರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಪರದಾಡುವಂತಾಗಿದೆ. ಶೌಚಾಲಯ ಬೇಕು ಎಂಬ ಕೂಗು ಮುಂದುವರಿದಿತ್ತು. ಆದರೆ ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಜಾಗ ಲಭ್ಯವಿಲ್ಲವೆಂದು ಸಮಜಾಯಿಶಿ ನೀಡುತ್ತಾ ಕಾಲಹರಣಗೈದಿತ್ತು. ಈ ಬಗ್ಗೆ ವಿಜಯವಾಣಿ ಹಲವು ಬಾರಿ ಎಚ್ಚರದ ಸಾರ್ವಜನಿಕ ಹಿತಾಸಕ್ತಿ, ಕಾಳಜಿಯ ವರದಿಗಳನ್ನೂ ಪ್ರಕಟಿಸಿತ್ತು. ಕೊನೆಗೂ ಈ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೇವಾ ಭಾರತಿ ಮುಂದಾಯಿತು. 


             ಶೌಚಾಲಯದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಸುಮಾರು ಹತ್ತು ಕೊಠಡಿಗಳನ್ನು ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಸಿದ್ಧಪಡಿಸಲಾಗಿದೆ. ಕುಂಬಳೆಯ ಪ್ರಸಿದ್ದ ಜಯಮಾರುತಿ ವ್ಯಾಯಾಮ ಶಾಲೆಯ ಬಳಿ ನೂತನ ಶೌಚಾಲಯ ಇದೀಗ ಸಾರ್ವಜನಿಕರಿಗೆ ಸುಲಭ ಲಭ್ಯವಾಗಿದೆ. ಕುಂಬಳೆಯ ಹಿರಿಯ ವೈದ್ಯ ಡಾ. ಸರ್ವೇಶ್ವರ ಭಟ್ ಉದ್ಘಾಟಿಸಿದರು. ಸೇವಾ ಭಾರತಿ ಜಿಲ್ಲಾಧ್ಯಕ್ಷ ವೇಣುಗೋಪಾಲ ಉಪಸ್ಥಿತರಿದ್ದರು.ಕಲಾರತ್ನ ಶಂ.ನಾ ಅಡಿಗ ಕುಂಬಳೆ ಸ್ವಾಗತಿಸಿ, ಭೂತಸ್ಥಾನ ಸೇವಾ ಸಮಿತಿ ಅಧ್ಯಕ್ಷ ಸಂಜೀವ ಭಂಡಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಸೇವಾಭಾರತಿ, ಭೂತಸ್ಥಾನ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.ಈ ಸಂದರ್ಭ ಕೋವಿಡ್ ನಿಯಂತ್ರಣ ಅವಧಿಯಲ್ಲಿ ತಮ್ಮ ಆಸ್ಪತ್ತರೆಯನ್ನು ತೆರೆದು ರೋಗಿಗಳಿಗೆ ಮುಕ್ತಸೇವೆ ನೀಡಿದ ಡಾ.ಸರ್ವೇಶ್ವರ ಭಟ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries