ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠೀ ಮಹೋತ್ಸವ ಶುಕ್ರವಾರ ಆರಂಭಗೊಂಡಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಚೌಗ್ರಾಮಸ್ಥರ ಕೂಡುವಿಕೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದಿಗೆ ಉತ್ಸವ ಅಂಗವಾಗಿ ಗಣಪತಿ ಪೂಜೆ, ಚೌಗ್ರಾಮಸ್ಥರ ಕೂಡುವಿಕೆಯೊಂದಿಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ, ಶ್ರೀದೇವರ ಬಲಿ ಉತ್ಸವ ನಡೆಯಿತು. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಶ್ರೀದೇವರ ಬಲಿ ಉತ್ಸವ ನಡೆಯುವುದು. 18ರಂದು ಷಷ್ಟಿ ಉತ್ಸವ ನಡೆಯುವುದು. 19ರಂದು ಶ್ರೀದೇವರ ಅವಭೃತಸ್ನಾನ, ರಾಜಾಂಗಣ ಪ್ರಸಾದ ನಡೆಯುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ 17ರಂದು ಸಂಜೆ 7ರಿಂದ ರಂಗ ಸಂಗಮ ಕಾಟುಕುಕ್ಕೆ ವತಿಯಿಂದ ಮಕ್ಕಳ ನೃತ್ಯ ಹಾಗೂ ಜಾನಪದ ಗಾನ ನೃತ್ಯ ವೈಭವ ಜರುಗಲಿರುವುದು.
18ರಂದು ಸಂಜೆ 7ರಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಮಾತೆಯರು ಮತ್ತು ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯ, ರಾತ್ರಿ 8.30ರಿಂದ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರ್ ಬಳಗದವರಿಂದ 'ತೆಲಿಕೆದ ಗೊಂಚಿಲ್'ಹಾಸ್ಯ ಕಾರ್ಯಕ್ರಮ ನಡೆಯುವುದು. 19ರಂದು ಮಧ್ಯಾಹ್ನ 1.30ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವ ಯಕ್ಷಗಾನ ಕಲಾ ಸಮಿತಿ ವತಿಯಿಂದ ಯಕ್ಷಗಾನ ತಾಳಮದ್ದಳೆ ನಡೆಯುವುದು.