ಎರ್ನಾಕುಳಂ: ನವಕೇರಳ ಸಮಾವೇಶದ ವೇಳೆ ಹಲ್ಲೆಗೊಳಗಾದ ಸಿಪಿಎಂ ಕಾರ್ಯಕರ್ತನೊಬ್ಬ ಪಕ್ಷ ತೊರೆದಿದ್ದಾನೆ. ತಮ್ಮನಂ ಈಸ್ಟ್ ಸಿಪಿಎಂ ಬ್ರಾಂಚ್ ಕಮಿಟಿ ಸದಸ್ಯ ರಯೀಸ್ ಅವರನ್ನು ಸಿಪಿಎಂ ಕಾರ್ಯಕರ್ತರು ಥಳಿಸಿದ್ದು ಇದರಿಂದ ಕುಪಿತರಾಗಿ ಅವರು ಪಕ್ಷ ತ್ಯಜಿಸಿದರು.
ಮೊನ್ನೆ ಮರೈನ್ ಡ್ರೈವ್ ನಲ್ಲಿ ನಡೆದ ನವಕೇರಳ ಸಮಾವೇಶದ ವೇಳೆ ಈ ಘಟನೆ ನಡೆದಿದೆ. ವೇದಿಕೆಯಲ್ಲಿ ಪ್ರತಿಭಟನೆ ನಡೆಸಿದ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಅಸೋಸಿಯೇಶನ್‍ನ ಕಾರ್ಯಕರ್ತರ ಪಕ್ಕದಲ್ಲಿ ಕುಳಿತು ತನ್ನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಪಕ್ಷ ತೊರೆದ ರಯೀಸ್ ಹೇಳಿಕೆ ನೀಡಿದ್ದಾರೆ. ಥಳಿಸುತ್ತಿರುವಾಗ ಪಕ್ಷದ ಕಾರ್ಯಕರ್ತ ಎಂದು ಹೇಳಿದರೂ ಸುತ್ತುವರಿದು ಹಲ್ಲೆ ನಡೆಸಲಾಗಿದೆ ಎಂದು ರಯೀಸ್ ಹೇಳಿದ್ದಾರೆ. ಸಿಪಿಎಂನಲ್ಲಿ ಮುಂದುವರಿಯುವುದಿಲ್ಲ ಎಂದೂ ಯುವಕ ಮಾಹಿತಿ ನೀಡಿದ್ದಾನೆ.