ಬದಿಯಡ್ಕ: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಭೆಯು ಕ್ಷೇತ್ರ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ನವೀನ್ ಕುಮಾರ್ ಭಟ್ ಕುಂಜರಕಾನ ವಹಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.
ಜೀರ್ಣೋದ್ಧಾರ ನಿಧಿ ಕೂಪನ್ ಡ್ರಾ ಜ. 7 ರಂದು ನಡೆಸುವ ವಿಚಾರವನ್ನು ತಿಳಿಸಲಾಯಿತು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಶ್ರೀ ಈಶ್ವರ ರಾವ್ ಚಾಪಾಡಿ ( ಟೈಲರ್ ತಾಯಣ್ಣ) ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರು ಶ್ರೀ ಮೋಪಾಲ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಅನೇಕ ಬಗೆಯ ಸಂಕಷ್ಟಗಳನ್ನು ಎದುರಿಸಿ ಕ್ಷೇತ್ರ ನಿರ್ಮಾಣದ ಕನಸನ್ನು ಕಂಡವರು. ಸರಳ ಸ್ವಭಾವದ ,ಅಪ್ಪಟ ದೇಶಭಕ್ತಿಯುಳ್ಳ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿμÁ್ಟವಂತ ಕಾರ್ಯಕರ್ತರಾಗಿ ನಿರಂತರ ದುಡಿದ ವ್ಯಕ್ತಿ. ಅವರ ಆತ್ಮಕ್ಕೆಚಿರಶಾಂತಿ ಸಿಗಲಿ ಎಂದು ಶ್ರೀ ಮಹಾವಿಷ್ಣು ದೇವರಲ್ಲಿ ಪ್ರಾರ್ಥಿಸಲಾಯಿತು.
ಕಮಲಾಕ್ಷ ಕಲ್ಲುಗದ್ದೆ, ಶ್ರೀಮತಿ ಶಾರದಾ ಟೀಚರ್, ವಾಮನ ಆಚಾರ್ಯ,ವಾಸುದೇವ ಭಟ್ ಸಿ. ಎಚ್. ಮುಂತಾದವರು ಭಾಗವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ಶ್ರೀ ಕೆ.ಯಂ. ಶರ್ಮಾ ಎಡನೀರು ಸ್ವಾಗತಿಸಿ, ವಂದಿಸಿದರು.