ಬದಿಯಡ್ಕ: ಜೈ ತುಲುನಾಡ್ (ರಿ) ಸಂಘಟನೆ ಹಾಗೂ ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ ವತಿಯಿಂದ 'ಬಲೆ ತುಳು ಲಿಪಿ ಕಲ್ಪುಗ' ತರಗತಿ ನೀರ್ಚಲು ಮಹಾಜನ ಸಂಸ್ಕೃತ ಕಾಲೇಜ್ ಕಾಲೇಜು ಶಾಲೆಯಲ್ಲಿ ಆರಂಭಗೊಂಡಿತು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, 'ತುಲು ಲಿಪಿ ಬ್ರಹ್ಮ ನೆಂದೇ ಖ್ಯಾತರಾದ ಪುಂಡೂರು ವೆಂಕಟ್ರಾಜ ಪುಂಚಿತ್ತಾಯ(ಪು.ವೆಂ.ಪು)ಅವರು ವಿದ್ಯಾರ್ಜನೆಗೈದ ಶಾಲೆಯಲ್ಲಿ ತುಲು ಲಿಪಿ ಕಲಿಕಾ ತರಗತಿ ಆರಂಭಿಸುತ್ತಿರುವುದು ಈ ನಾಡಿಗೆ ಹೆಮ್ಮೆಯಾಗಿದೆ. ಕಾಸರಗೋಡಿನ ಶಾಲೆಯೊಂದರಲ್ಲಿ ತುಲು ಲಿಪಿ ಕಲಿಸುವ ತರಗತಿಯು ಇದೇ ಮೊದಲಬಾರಿಗೆ ನೀರ್ಚಾಲು ಶಾಲೆಯಲ್ಲಿ ಆರಂಭವಾಗುತಿರುವುದು ಸಂತಸದಯಕ. ಈ ಅವಕಾಶವನ್ನು ಒದಗಿಸಿದೆ ಜೈ ತುಲುನಾಡ್ ಸಂಘಟನೆ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ತಿಳಿಸಿದರು.
ಜೈ ತುಲುನಾಡ್ ಸಂಘಟನೆ ಕಾಸರಗೋಡು ಮಂಡಲದ ಅಧ್ಯಕ್ಷೆ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕ ಶಿವಪ್ರಕಾಶ್ ಎಂ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಲು ಲಿಪಿ ಅಧ್ಯಾಪಕಿಯಾದ ಜೈ ತುಲುನಾಡ್ ಸಂಘಟನೆಯ ಸದಸ್ಯೆ ,ತುಲು ವಿಕಿಪೀಡಿಯ ಲೇಖಕಿ ವಿನೋದ ಪ್ರಸಾದ್ ರೈ ಬದಿಯಡ್ಕ, ವಿಜಯರಾಜ ಪುಣಿಂಚತ್ತಾಯರು, ಜೈ ತುಲುನಾಡ್ ಸಂಘಟನೆಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಉಮೇಶ್ ಸಿರಿಯಾ ಉಪಸ್ಥಿತರಿದ್ದರು. ಶಾಲಾ ಶೀಕ್ಷಕಿ ಶೈಲಜಾ ಟೀಚರ್ ಸ್ವಾಗತಿಸಿದರು. ಜೈ ತುಲುನಾಡ್ ಕಾಸರಗೋಡು ಘಟಕ ಉಪಾಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು. ಡಾ. ವಿದ್ಯಾಲಕ್ಷ್ಮಿ ಟೀಚರ್ ವಂದಿಸಿದರು, ಶ್ರೀ ಹರಿಕಾಂತ್ ಕಾಸರಗೋಡು ಸಹಕರಿಸಿದರು. ನಂತರ ತುಲು ಲಿಪಿ ಕಲಿಕಾ ತರಗತಿ ಆರಂಭಗೊಂಡಿತು.